ಇವತ್ತು ಅವನ ಎರಡನೇ ತಿಂಗಳ ಹುಟ್ಟು ಹಬ್ಬ.
ಅವನ ಈ ಹುಟ್ಟು ಹಬ್ಬದ ಸಂಭ್ರಮಕ್ಕೆ ನಾನು ಕೊಡಿಸಿದ ಉಡುಗೊರೆ, ಒಂದು ಹೊಸ ಶರ್ಟು ಮತ್ತು ನಾಲ್ಕು ವಾಕ್ಸಿನೇಶನ್ನು!
ಈಗ ನನ್ನ ಅಮ್ಮು ನಾಲ್ಕು ನಾಲ್ಕು ಸಾರಿ ಚುಚ್ಚಿಸಿಕೊಂಡು ನೋವಿನಿಂದ ಮಲಗಿದ್ದಾನೆ
ಅವನು ಮಲಗಿರುವ ಸಮಯದ ಸದವಕಾಶ ಪಡೆದು ನಾನು ಅವನಿಗೊಂದು ಚೆಂದದ ಬ್ಲಾಗ್ ಮಾಡುತ್ತಿದ್ದೇನೆ
ಅಂದ ಹಾಗೆ ನಂದಗೋಕುಲ ಎಂಬ ಈ ಬ್ಲಾಗ್ ನಾನು ಅವನಿಗೆ ಕೊಡಮಾಡುತ್ತಿರುವ ಇನ್ನೊಂದು ಗಿಫ್ಟ್!
ನಾನು ನೆನ್ನೆ ತೆಗೆದ ಅಮ್ಮುವಿನ ಫೋಟೋ ಇಲ್ಲಿದೆ
3 comments:
ಅಯ್ಯೋ! ಎಷ್ಟು ನೋವಾಗಿದೆಯೋ ಚಿನ್ನು ಮರಿಗೆ! ಕಂದನ ನೋವು ಬೇಗನೆ ಮರೆಯಾಗಲಿ.
ತೋಳನ್ನೇ ತಲೆದಿಂಬಾಗಿಸಿ ಮಲಗಿದವನಿಗೆ "ಶ್ರೀರಂಗ ಪಟ್ಟಣದಿ ಮಲಗಿದವನಾ..." ಎಂದು ಸುಂದರ ಶೀರ್ಷಿಕೆಯನ್ನೇ ನೀಡಿದ್ದಿರಿ. ನಮಗೆ ಬರಲು ನಿಶು ಮನೆ ಜೊತೆಗೆ ಇನ್ನೊಂದು ಚಂದದ ಮನೆ ಮಾಡಿಕೊಟ್ಟಿದ್ದಕ್ಕೆ thanks.
ಚೋ.... ಚ್ವೀಟ್..... :):):)
'ನಿದ್ದೆ ಮಾಡೋಕೇ ಬಿಡಲ್ಲಾ ಕಣೇ' ಅಂತ ಫೋನಿನಲ್ಲಿ ಅವಲತ್ತುಕೊಳ್ಳೋ ನಿನ್ನ ಅಮ್ಮನಿಗೂ (ಜೊತೆಗೆ ಅಪ್ಪಂಗೂ!) ಹೀಗೇ ಒಂಚೂರು ನಿದ್ದೆ ಮಾಡೋಕೆ ಬಿಡು ಮುದ್ದು.
Mala, thats a cute one. Thanks for sharing and starting the blog.
Meera.
Post a Comment