Wednesday, July 8, 2009

ಕಾಯಿನ್...!



ಇವತ್ತು ಅಮ್ಮು"ಕಾಯಿನ್ "ಅಂತ ಹೊಸ ಪದ ಹೇಳಿದ
************
ಬೆಳಗ್ಗೆ ಅಪ್ಪನ (ಅಂದ ಹಾಗೆ ಕಳೆದ ವಾರದಿಂದ ಅರವಿಂದನನ್ನು ಅಪಾ, ಆಪಾ, ಅಪ್ಪ್ಪ ಆಆ... ಅಂತೆಲ್ಲಾ ಕರೆಯುತ್ತಿದ್ದಾನೆ) ಕಂಪ್ಯೂಟರ್ ಟೇಬಲ್ಲಿನ ಡ್ರಾ ದ ಕಂಡಿಯಲ್ಲಿ ಕೈ ಸಿಕ್ಕಿ ಹಾಕಿಸಿಕೊಂಡು ಏನೋ ಬೇಕೇ ಬೇಕೆಂದು ಹಟ ಮಾಡಿ ಅಳುತ್ತಿದ್ದ
ನಾನೂ ಇವನ ಅಳು ನೋಡಲಾರದೇ ತೆಗೆಯಲು ಪ್ರಯತ್ನಿಸಿದರೂ ಅಡ್ಡಡ್ಡವಾಗಿ ಚೈಲ್ಡ್ ಲಾಕ್ ಹಾಕಿದ್ದರಿಂದ ನನಗೂ ತೆಗೆಯಲಾಗಲಿಲ್ಲ. ಬೇರೇನೋ ಆಟಿಕೆ ಕೊಟ್ಟು ಮರೆಸಲೆತ್ನಿಸಿದರೂ ಬಡಪೆಟ್ಟಿಗೆ ಒಪ್ಪದೇ ಮತ್ತೆ ಮತ್ತೆ ಅದೇ ಕಂಡಿಯಲ್ಲಿ ಕೈ ಸಿಕ್ಕು ಹಾಕಿಸಿಕೊಂಡು ಅಳಲು ಶುರು ಮಾಡಿದ ಕೊನೆಗೆ ಹರಸಾಹಸ ಮಾಡಿ ಡ್ರಾದ ಬಾಗಿಲು ತೆರೆದು ಏನೂ ಬೇಕೋ...ಅಂತ ನಾನು ಕೇಳಿದಾಗ ಹೊಳೆ ಹೊಳೆಯುವ ಎರಡು ಹೊಸದಾದ ಕ್ವಾರ್ಟರ್(ಇಪ್ಪತೈದು ಸೆಂಟಿನ ನಾಣ್ಯ)ಗಳನ್ನು ತೆಗೆದುಕೊಂಡು
ಹೇ..ಅಂತ ಒಮ್ಮೆ ಕಿರುಚಿ ಹೇಳಿದ

"ಮಾಮ... ಕಾಯಿನ್...!

Thursday, May 28, 2009

ಷೇ... ಷೇ...

ಕಿಟ್ಟಣ್ಣ ನ ಬಳಗ ಇಷ್ಟು ದೊಡ್ಡದು ಅಂತ ನಮ್ಮಿಬ್ಬರಿಗೂ ಒಂದು ಮಿಲಿಗ್ರಾಂ ನಷ್ಷ್ಟೂ ಅಂದಾಜು ಇರಲಿಲ್ಲ ಅವನ ಹುಟ್ಟು ಹಬ್ಬದ ನೆಪವಾಗಿ ಕಿಟ್ಟನ ಬಳಗದ ಭಾರೀ ಸೈಜು ಗೊತ್ತಾಯಿತು!

ಅವನ ಎರಡೂ ಕಡೆ ಅಜ್ಜಿ ತಾತ ಫೋನ್ ಮಾಡಿ ಆಶೀರ್ವಾದ ಹೇಳಿದರೆ ಕಿಟ್ಟನ ಬೊಂಬಾಯಿ ಅಜ್ಜಿ ಒಂದು ಹೆಜ್ಜೆ ಮುಂದೆ ಹೋಗಿ ಕಾಲೋನಿಯ ಮಕ್ಕಳಿಗೆಲ್ಲಾ ಚಾಕಲೇಟು ಹಂಚಿದರು

ಅಮ್ಮುವಿನ ಪ್ರೀತಿಯ ಜ್ಯೋತಿ ಆಂಟಿ (ಕಳೆದ ವರುಷದಂತೆ ಈ ವರ್ಷವೂ) ಬಲೂನು ತೊಗೊಂಡು ಮನೆಗೇ ಬಂದು ಬಿಟ್ಟರು ಜೊತೆಗೊಂದು ತಾವೇ ಹೆಣೆದ ಚಂದದ ಸ್ವೆಟರ್ ! ತ್ರಿವೇಣಿ ಆಂಟಿ ಶಿಕಾಗೋ ದಿಂದ ಕಾಲ್ ಮಾಡಿದ್ದರೆ, ನಿಶುಅಣ್ಣ ,ಮೀರಾ ಆಂಟಿ ನ್ಯೂಜೆರ್ಸಿ ಯಿಂದ ಶುಭಾಶಯ ಹೇಳಿದರು ಅಮ್ಮು ಸುಮಾರು ಎಲ್ಲರೊಂದಿಗೂ ತನ್ನದೇ ಭಾಷೆಯಲ್ಲಿ ಮಾತಾಡಿದ 'ಹಾವ್...ಹಾಪೀ...'ಅಂತ ಹೇಳುತ್ತಿದ್ದ

ಪುಟ್ಟಿಪ್ರಪಂಚ ಬ್ಲಾಗಿನ ಸಾಹಿತ್ಯಪುಟ್ಟಿ ಅಮ್ಮನಿಗೆ ಹೇಳಿ ತನ್ನ ಬ್ಲಾಗ್ ನಲ್ಲಿ ಅಮ್ಮುವಿಗಂದು ಸ್ಪೆಷಲ್ ಪೋಸ್ಟ್
ಹಾಕಿಸಿಬಿಟ್ಟಳು ಆರು ತಿಂಗಳಿಂದ ಈ ಕಡೆ ಸುಳಿಯದ ಭಾಗವತ ಅಂಕಲ್ ಅಮ್ಮುವಿನ ಬರ್ತ್ ಡೇ ಮರೆಯದೇ ಶುಭ ಹಾರೈಸಿದರು

ಮನಿಷಾ ಅಕ್ಕ ಪುಷ್ಪ ಆಂಟಿ ಬೆಂಗಳೂರಿಂದ ವಿಶ್ ಮಾಡಿದರು
ದೇವಿ ಆಂಟಿ ಕೆನಡಾದ ವ್ಯಾಂಕೋವರ್ ನಿಂದ ಕಾಲ್ ಮಾಡಿ ಅಮ್ಮುವಿಗೆ ಹ್ಯಾಪಿ ಬರ್ತ್ ಡೇ ಹೇಳಿದರು

ಹಾಗೇ ಶ್ರೀನಿಧಿ ಅಂಕಲ್ ನೆನ್ನೆ ಶುಭ ಹಾರೈಸಿದರು ಅಂದ ಹಾಗೆ ಅಮ್ಮುವಿನ ಅಣ್ಣನ ಹೆಸರೂ ಶ್ರೀನಿಧಿ ಅಂತಾನೇ... ಸದ್ಯಕ್ಕೆ ಅಜ್ಜಿ ಮನೆಯಲ್ಲಿರುವ ಅವನೂ ಅಮ್ಮುವಿಗೆ ವಿಶ್ ಮಾಡಿದ

ಭಾರ್ಗವಿ ಆಂಟಿಗೆ ಇಷ್ಟೆಲ್ಲಾ ಪ್ರೀತಿಯ ಸಡಗರದಲ್ಲಿ ಅಮ್ಮುವಿಗೆಲ್ಲಿ ದೃಷ್ಟಿ ತಾಗಿ ಬಿಡುತ್ತೋ ಅಂತ ಆತಂಕ ಅಮ್ಮನ ಹತ್ತಿರ ದೃಷ್ಟಿ ತೆಗೆಸಿಕೊಳ್ಳಪ್ಪಾ ಅಮ್ಮು ಅಂತ ಕಾಳಜಿ ಮಾಡಿದ್ದಾರೆ

ಇಷ್ಟೋಂದು ಅಭಿಮಾನದ ಮಹಾಪೂರಕ್ಕೆ ಏನು ಹೇಳುವುದೂ...?
ಅಮ್ಮುವಿನ ಭಾಷೆಯಲ್ಲೇ ಹೇಳುವುದಾದರೆ "ಷೇ ಷೇ..."



ಟಿಪ್ಪಣಿ-
ಟಿವಿಯಲ್ಲಿ ಬರುವ 'ನೀ ಹಾವ್ ಕೈಲಾನ್' ಎಂಬ ಬೈ -ಲಿಂಗ್ವಲ್ ಧಾರಾವಾಹಿ ಅಮ್ಮುವಿಗೆ ತುಂಬಾ ಇಷ್ಟ
ಅದರಲ್ಲಿ ಚೈನೀಸ್ ಪದಗಳನ್ನು ಕಲಿಸುತ್ತಾರೆ ಅಮ್ಮು ಥ್ಯಾಂಕ್ಸು ಹೇಳುವುದು ಈಗ ಷೇ ಷೇ ಅಂತಾನೇ
(ಕೈಲಾನ್ ಎಂಬ ಪುಟ್ಟ "ಹುಡುಗಿಯ" ಪ್ರಭಾವ!)

Wednesday, May 27, 2009

ಕಿಟ್ಟಣ್ಣನ ಎರಡನೇ ಹುಟ್ಟು ಹಬ್ಬ

ಕಿಟ್ಟಣ್ಣ ಅವನ ಎರಡನೇ ಹುಟ್ಟು ಹಬ್ಬದ ದಿನವನ್ನು ಮಜವಾಗಿ ಕಳೆದ. ಮೊದಲು ಹೋಗಿದ್ದು ಲಿವರ್ ಮೋರ್ ಎಂಬ ಊರಿನ ವೆಂಕಟೇಶ್ವರ ದೇವಸ್ಥಾನಕ್ಕೆ...

ದೊಡ್ಡದಾದ ದೇವಸ್ಥಾನದ ಪ್ರಾಕಾರದಲ್ಲಿ ಆಡಿದ್ದೂ ಆಡಿದ್ದೇ....

ಗರುಡಗಂಭ ಮುಟ್ಟಿದ್ದು ಹೀಗೆ....


ನಂತರ ಹೋಗಿದ್ದು ಓಕ್ಲ್ಯಾಂಡ್ ಎಂಬ ಊರಿನ ಪ್ರಖ್ಯಾತ ಝೂ ಗೆ...




ಕಪ್ಪೆ ಸವಾರಿ ಎಂದಾದರೂ ಮಾಡಿದ್ದೀರಾ.....?




ಊಪ್ಸ್ಸ್....ಕಪ್ಪೆ ರಾಯ ನನ್ನ ಬಿಡೋದೇ ಇಲ್ಲ ಅಂತಾನೇ.....



ಪೆಟ್ ಝೂ ನಲ್ಲಿ ಮೇಕೆ ಮುಟ್ಟೋದೇ ಮಜ...!



ಇದು ಜಿರಾಫೆ ಅಂತೆ.... ಎಷ್ಟುದ್ದ ಕುತ್ತಿಗೆನಪ್ಪಾ...ಇದು ಟೈ ಹೇಗೆ ಹಾಕೊಳ್ಳುತ್ತೋ.....

ಹೇ ಬೈಸನ್.. ಇತ್ತ ನೋಡು ಸಲ್ಪ... ನಾನು, ಅಮ್ಮು ಬಂದಿದೀನಿ....



ಸಿಂಹ ಪಾಪ... ಸುಸ್ತಾಗಿ ಮಲಗೇ ಬಿಟ್ಟಿತ್ತು.....




ಸಿಂಹಿಣಿ ಮಾತ್ರ ಎದ್ದಿತ್ತು..... ಅಮ್ಮ ಕೇಳಿದ್ದಕ್ಕೆ ಕ್ಯಾಮೆರಾಗೆ ಒಳ್ಳೇ ಪೋಸೂ ಕೊಟ್ತು




ಮರದ ಸೇತುವೆ ಮೇಲೆ ಓಟ...!



ಅಪ್ಪಾ..., ಅದೇನೂ...?



ಝೀಬ್ರಾ ನಾ..? ಒಳ್ಳೇ ತಮಾಶೆಯಾಗಿದೆಯಲ್ಲಾ...?


ಆನೆ ಬಂತೊಂದಾನೆ.....



ಓಓಓಓಓಓಓಓಓ........ಎರಡೆರಡು ಆನೆ...!



ಕಿಟ್ಟನೊಂದಿಗೆ ಆನೆ...!



ಚಿಂವ್ ಚಿಂವ್ ಹಕ್ಕಿ ಹುಡುಕುವೆ ಏನನ್ನು...?




ಸ್ಕೈ ಟ್ರಾಲಿ ರೈಡ್ ಎಷ್ಟು ಮಜವಾಗಿತ್ತು ಗೊತ್ತಾ...?


ಝೂ ಗೆ ಬೈ ಹೇಳುವ ಮುನ್ನ ಗಿಫ್ಟ್ ಶಾಪ್ ನಲ್ಲಿ ಒಂದು ಹೊಸಾ ಟೋಪಿ ಕೊಂಡು ಟ್ರೈ ಮಾಡಿದ್ದು ಹೀಗೆ...




ಸಂಜೆ ಮನೆಯಲ್ಲಿ ಕಿಟ್ಟಣ್ಣನಿಗಾಗಿ ತಂದ ಪುಟಾಣಿ ಕೇಕ್



ಕ್ಯಾಂಡಲ್ ಊದಿ ಕೇಕ್ ಕತ್ತರಿಸಿದ್ದು ಹೀಗೆ....

Monday, May 25, 2009

HAPPY BIRTHDAY AMMU...

ಹಗಲಲ್ಲೂ ಸುರಿವ ಬೆಳದಿಂಗಳೇ,

ಹುಟ್ಟಹಬ್ಬದ ಶುಭಾಶಯಗಳು ನಿನಗೆ ....

Sunday, May 24, 2009

Ammu will turn two tomarrow....

ಮೇಲುಕೋಟೆಯ ಸ್ವಾಮಿ ಚೆಲುವರಾಯನಿಗೆ
ನಾಳೆಗೆ ಎರಡು...

Monday, May 18, 2009

AMMU with Kunal Ganjawalla...

Ammu liked this" new uncle" very much...
he was playing his usual ... full of mischief with him too...
ammu did n't realise this new uncle is a celebrity or
uncle has sung some of his favorite songs...

That was kunal uncle or we all know him as kunal ganjawalla,
the well known hindi and kannada playback singer...

*******
Kunal ganjawalla was here in Bay area this week end for some show and came down to our family friend's residence for dinner yesterday night. That was an informal gathering and it was only me ,arvind and ammu other than hosts devi & sripada so ammu had plenty of room to play............

kunal is possibly the most down-to-earth person i have ever met.A truly fine man .he was just so incredibly gracious and humble that it was heart-warming... he would just talk to you like he already knows you............

ammu did this cutest thing when kunal was just about to leave...
he picked kunal's cell phone started making some pretend calls...
and refused to return the cell phone when kunal asked him...

here is few snaps ammu with kunal ganjawalla...


PS. Thank you kunalji...for memorable moments...
& for permitting me to publish these snaps...




Saturday, May 16, 2009

ಹಾವ್... ಹಾವ್...


"ಹಾವ್....ಹಾಆ ಆ..ವ್ವ್ ವ್ವ್ ...ಹಾವ್...
ದಿಬಾಶ್ ಕಾಸ್ ಪಿಕಾಯ್... ಗಾಶ್,ಗಾಶ್...
ಅಜೀ ಕಾಶ್ ಚಾಮ್...ಬಾಬೂ...
ತಿರ್ರ್ ರ್ರ್ ರ್ರ್ ರ್ರ್ ...
ಬಾಯ್ ಬಾಕೂತ್ ಗಾಯೆಗಾ...ಅಜು ಅಜು ಅಜು..........
ಬಾಯ್..ಬಾಯ್..."
(....ಕ್ಲಿಕ್....)

ಅಮ್ಮುವಿನಮ್ಮನ ಟಿಪ್ಪಣಿ-
ಇದು ಇವತ್ತು ನಾನು ಗಮನಿಸಿದ ಅಮ್ಮು ಫೋನಿನ ಕ್ರೆಡಲ್ ಎತ್ತಿಕೊಂಡು ಹೇಳುತ್ತಿದ್ದ ಸಂಭಾಷಣೆ ಫೊನು ಎತ್ತುವುದು ಮೊದಲು ಹಾವ್ ಹೇಳಿ ನಂತರ ಒಂದೆರಡು ನಿಮಿಷ ಸಂಭಾಷಣೆ ಪೋನು ಇಡುವಾಗ ತಪ್ಪದೆ ಬಾಯ್ ಬಾಯ್..!
ಇದನ್ನು ನಾಲ್ಕೈದು ಸಲ ಪುನರಾವರ್ತಿಸಿದ ನಾನು ಮೆಲ್ಲಗೆ ಗದರಿದ್ದಕ್ಕೆ ಓಡಿ ಹೋದ... ಅವನ ಮಾತು ಕೇಳುವುದರಲ್ಲಿ ನಾನು ಬಿಸಿಯಾಗಿದ್ದರಿಂದ ಚಿತ್ರ ಇಲ್ಲ...

Thursday, May 14, 2009

WASABI...!

ಕಳೆದವಾರ ನಮ್ಮ ಮನೆಗೆ ಬಂದಿದ್ದ ಪರಿಚಿತರೊಬ್ಬರು wasabi ಎಂಬ ಹುರಿದ ಬಟಾಣಿ ಕಾಳುಗಳನ್ನು ತಂದಿದ್ದರು
Japanese horse radish ಅರಿದು ಲೇಪಿಸಿದ ಈ ಬಟಾಣಿಗಳು ವಿಶೇಷ ರುಚಿ ಎಂದು ಅರವಿಂದ ಹೊಗಳಿದ್ದನ್ನು ಕೇಳಿ ನಾನೂ ಒಂದು ಕಾಳು ಬಾಯಿಗೆ ಹಾಕಿಕೊಂಡು ಅಗಿದು ನೋಡಿದೆ...ತೀಕ್ಷ್ಣ ವಾದ ಕಟು ರುಚಿ ಮತ್ತು ವಾಸನೆ ...!

ನುಂಗಲಾಗದೆ ಉಗಿದು ಬಂದವಳಿಗೆ ಅದೇ ಕಾಲಕ್ಕೆ ಕಿಟ್ಟಣ್ಣ wasabi ಗಳನ್ನು ಚಪ್ಪರಿಸಿ ತಿನ್ನುವುದನ್ನು ನೋಡಿ ವಿಸ್ಮಯವಾಯಿತು ಹಾಗೇ ನಾನು ಮಾಡುವ ಅಡುಗೆ ಈ ಬಟಾಣಿಗಳಿಗಿಂಥಾ ಕೆಟ್ಟದಾಗಿರುತ್ತಾ ಅಂತ ಅನುಮಾನವೂ ಬರಲು ಶುರುವಾಯಿತು!ಹಾಗಾದರೆ ನಮ್ಮ ಸ್ನೇಹಿತರ ಟೇಸ್ಟ್ ಬಡ್ಸ್ ಸಹ ಹಾಳಾಗಿದ್ದಿರಬೇಕು ನನಗೆ ಸಾಕಷ್ಟು ಕಾಂಪ್ಲಿಮೆಂಟ್ಸ್ ಸಿಗುತ್ತವಲ್ಲಾ ಅಂತಾನೂ ಯೋಚಿಸಿದೆ ಅಥವಾ ಅಮ್ಮುವಿನ ಅಪ್ಪನಿಗೆ ನನ್ನ ಮೇಲೆ ಎಣೆ ಇಲ್ಲದಷ್ಟು ಪ್ರೇಮವಿರಬೇಕು ಇಲ್ಲದಿದ್ದರೆ ತಟ್ಟೆ ಖಾಲಿ ಆಗುತ್ತಿರಲಿಲ್ಲ ಫ್ರಿಜ್ಜಿನಲ್ಲಿಟ್ಟ ನೆನ್ನೆಯ ಅಡುಗೆಮಾಯವಾಗುತ್ತಿರಲಿಲ್ಲ ಅಂತಾನೂ ಪ್ಯಾರಲಲ್ಲಾಗಿ ತರ್ಕಿಸಿದೆ...

ಕಿಟ್ಟಣ್ಣ ಮಾತ್ರ ಹಿಡಿ ಹಿಡಿ wasabi ಗಳನ್ನು ಪದೇ ಪದೇ ತಗೊಂಡು ಹೋಗಿ ಎಲ್ಲೋ ಬಚ್ಚಿಟ್ಟು ಬರುತ್ತಿದ್ದ.ಸೇಬಿನ ಹೋಳುಗಳನ್ನು ದೋಸೆ ಚೂರುಗಳನ್ನು ಕಿಟ್ಟ ಕಾರ್ಪೆಟ್ಟಿನಡಿ ಆಟಿಕೆಗಳ ಒಳಗೆ ಬಚ್ಚಿಡುವುದೇನೂ ಹೊಸದಲ್ಲ ನನಗೆ. ದೋಸೆ,ಚಪಾತಿ,ಹಣ್ಣಿನ ತುಂಡುಗಳು ಫ್ರೆಶ್ ಆಗಿದ್ದರೆ ಅವನಿಗೆ ಅಷ್ಟು ರುಚಿಸುವುದಿಲ್ಲವೆಂತಲೂ ಅವುಗಳು ಎರಡು ಮೂರು ದಿನ mature ಆದಮೇಲೆ ಅಮೃತ ಸಮಾನ ಸ್ವಾದವಿರುವುದೆಂದು ಅವನು ನಂಬಿದ್ದಾನೆ ಮಾತ್ರವಲ್ಲ ತಪ್ಪದೆ ಆಚರಣೆಯಲ್ಲಿ ಅಳವಡಿಸಿಕೊಂಡಿದ್ದಾನೆಂಬುದೂ ನಮಗೆ ಸರ್ವವಿದಿತ ಹಾಗಾಗಿ ಮೂರುದಿನದ ಸೇಬಿಗಿಂಥಾ ಈ ಕಾಳು ತಿನ್ನುವುದು ವಾಸಿ ಅಂತ ಸುಮ್ಮನಿದ್ದು ಬಿಟ್ಟೆ
********
ಎರಡುಮೂರು ದಿನದ ನಂತರ ಕಿಟ್ಟ ಒಂದು ಬೆಳಗ್ಗೆ ಎದ್ದವನು ಏನೋ ಅರ್ಜೆಂಟು ಕೆಲಸವಿರುವವನಂತೆ ಹಾಸಿಗೆಯಿಂದಿಳಿದು ಓಡಿಹೋದ ಮತ್ತೆ ಹತ್ತು ನಿಮಿಶದ ನಂತರ ಕಿಟ್ಟನ ಅಪ್ಪ ಕೂಗುವುದು ಕೇಳಿಸಿತು. ಹೋಗಿ ನೋಡಿದರೆ ಅಪ್ಪ ಕೂಗುತ್ತಿದ್ದಾರೆ ಕಿಟ್ಟ ಅಪ್ಪನನ್ನು ಕೇರೇ ಮಾಡದೆ ಹಲ್ಲು ತೋರಿಸುತ್ತಾ ನಗುತ್ತಿದ್ದಾನೆ ಅವನ ಮುಷ್ಟಿಯಲ್ಲಿ ನಾಲ್ಕಾರು ಕಾಳುಗಳು... ಉಳಿದದ್ದು ಅಕ್ವೇರಿಯಮ್ಮಲ್ಲಿ.....ಕಿಟ್ಟನ ಅಪ್ಪ ಗೊಣಗುತ್ತಾ ಅಕ್ವೇರಿಯಮ್ ಕ್ಲೀನ್ ಮಾಡಲು ಹೊರಟಾಗ 'ನಾನು ಮೀನಿಗೆ ಊಟ ಹಾಕ್ತೇನೆ ಅಂದ್ರೆ ಬಿಡೋದಿಲ್ಲಾ ಅಂತೀಯಲ್ಲಾ... ನಿಂಗೆ ಸರೀ ಮಾಡಿದೆ ನೋಡು' ಎಂಬರ್ಥದ ನಗೆ ಕಾಣಿಸಿತು ಕಿಟ್ಟನ ಮೊಗದಲ್ಲಿ...

Wednesday, May 13, 2009

ಬಾಬೌ....

ಕಿಟ್ಟಣ್ಣನಿಗೆ ನಾಯಿ ಕಂಡರೆ ಪುಟ್ಟ ಮಗುವಾದಾಗಿನಿಂದ ತುಂಬಾ ಇಷ್ಟ. ಅವನನ್ನು stroller ನಲ್ಲಿ ಕೂರಿಸಿಕೊಂಡು ನಾನು ಪಾರ್ಕ್ ನಲ್ಲಿ ತಿರುಗಾಡಿಸುವಾಗಲೆಲ್ಲಾ ವಾಕಿಂಗ್ ಗೆ ಬಂದವರು ಕರೆತರುತಿದ್ದ ನಾಯಿ ಕಂಡ ಕೂಡಲೇ ಕೂತಲ್ಲೇ ಕುಪ್ಪಳಿಸಿ ಜೋರಾಗಿ ನಕ್ಕು ನಾಯಿಯನ್ನು ಕೈ ಬೀಸಿ ಕರೆಯುತ್ತಿದ್ದ ನಡೆಯಲು ಬಂದ ಮೇಲೆ ಸರಿ ಹೋಯಿತು ಎಲ್ಲಿ ನಾಯಿ ಕಂಡರೂ ಅದರ ಹಿಂದೆ ಓಟ! ದೊಡ್ಡ ನಾಯಿ ಯಾದರೆ ಓಡಿ ಹೋಗಿ ಅದರ ಮೇಲೆ ಬಿದ್ದು ಜೋರಾಗಿ ಕಿರುಚುತ್ತಾ ಗಟ್ಟಿಯಾಗಿ ಅಪ್ಪಿ ಕೊಳ್ಳುವುದು ಪುಟ್ಟ ನಾಯಿಯಾದರೆ ಅನಾಮತ್ತು ಹೊಟ್ಟೆ ಕೆಳಗೆ ಕೈ ಹಾಕಿ ಎತ್ತಿ ಬಿಡುವುದು ಇದು ಕಿಟ್ಟಣ್ಣ ಪ್ರಿಯವಾದ (ಆದರೆ ಅಪ್ಪ ಅಮ್ಮನಿಗೆ ಮುಜುಗರ ತರಿಸುವ) ಹವ್ಯಾಸ

ನಾಯಿಯ ಓನರ್ ಗಳ ಅನುಮತಿ ಕೇಳುವುದು ಅದು ಸೌಮ್ಯವಾದ kid friendly ನಾಯಿಯೇ ಅಂತ ಪರಕಿಸುವುದು ಅಪ್ಪ ಅಮ್ಮನ ತಲೆನೋವು ಅಂತ ಕಿಟ್ಟ ಬಲವಾಗಿ ನಂಬಿದ್ದಾನೆ ಹಾಗೆಲ್ಲಾ ಓಡಿ ಹೋಗಿ ನಾಯಿ ಮುಟ್ಟ ಬಾರದು ಅಂತ ಸಾವಿರ ಬಾರಿ ಸಮಜಾಯಿಸಿ ಹಲವು ಬಾರಿ ಒದೆ ಕೊಟ್ಟಿದ್ದರೂ...ಮುಂದಿನ ಬಾರಿ ನಾಯಿ ಕಂಡಾಕ್ಷಣ ಅದೆಲ್ಲಾ ಅವನಿಗೆ ಮರೆತೇ ಹೋಗುತ್ತದೆ

ಕಿಟ್ಟ ಈಗ ನಾಯಿ ಎಲ್ಲಿ ಕಂಡರೂ 'ಬಾಬೌ'ಅಂತ ಹೇಳುತ್ತಾನೆ ಅವನ ಚಿತ್ರದ ಪುಸ್ತಕದಲ್ಲಿ ಎಲ್ಲಿ ಬಾಬೌ ಕಂಡರೂ ಬೆಟ್ಟು ಇಟ್ಟು ತೋರಿಸಿ ಜೋರಾಗಿ ಬಾಬೌ... ಅಂತ ಕೂಗುತ್ತಾನೆ ಈಗೆರಡು ವಾರದ ಹಿಂದೆ ಓಕ್ ಮೆಡೋ ಪಾರ್ಕ್ ನಲ್ಲಿ ಕಿಟ್ಟ ಹಲವಾರು ನಾಯಿ ಗಳ ಜೊತೆ ಆಟ ಆಡಿದ ಕೆಲವು ಚಿತ್ರಗಳು ಇಲ್ಲಿವೆ ಇವಾವೂ ನಮ್ಮ ಪರಿಚಿತರ ನಾಯಿಗಳಲ್ಲ. ಕಿಟ್ಟನಿಗೆ ಭಯವಾಗುವುದಿಲ್ಲವೇ ಅಂತ ಸ್ನೇಹಿತರು ಕೇಳಿದಾಗ, ಹಾಗೆಲ್ಲಾ ಆಡಲು ಬಿಡಬೇಡಿ ಅಂತ ಎಚ್ಚರಿಕೆ ಕೊಟ್ಟಾಗ ಏನು ಉತ್ತರಿಸುವುದೆಂದು ತಲೆ ಕೆರೆದು ಕೊಳ್ಳುತ್ತೇನೆ ನಾನು...







Friday, May 8, 2009

ಆಪು ಟೂಟ್ ಟೂಟ್ ...ಇತ್ಯಾದಿ

ಅಮ್ಮು ಹೊಸ ಪದಗಳನ್ನು ಆಡಿದಾಗಲೆಲ್ಲಾ ದಾಖಲಿಸಬೇಕೆಂದುಕೊಂಡಿದ್ದೆ ಆದರೆ ಸೋಮಾರಿ ತನ ಬಿಡಬೇಕಲ್ಲಾ...ಈಗ ಒಂದೆರಡು ತಿಂಗಳಿಂದ ಆಡುವ ಮಾತುಗಳ ಕ್ವಿಕ್ ಲಿಸ್ಟ್...

ನನ್ನನ್ನು ಮಾಮಾ ಅನ್ನುತ್ತಾನೆ ಆಗಾಗ ಅವನ ಅಪ್ಪನನ್ನ ದಾದಾ ಅನ್ನುತ್ತಾನೆ ಅವನು ನಮಗೆ ಅವನ ಭಾಷೆಯಲ್ಲೇ ಏನೋ ಮುದ್ದಾದ ಹೆಸರಿಡುತ್ತಾನೆ ತಡಿ ನಾವೇ ಮುಂದಾಗಿ ಅಪ್ಪ ಅಮ್ಮ ಹೇಳಿಕೊಡುವುದು ಬೇಡಾ ಅಂತ ನಾನೇ ಅರವಿಂದನನ್ನು ತಡಿದಿದ್ದೇನೆ

***********
ನೋ ನೋ ತುಂಬಾ ಇಷ್ಟದ ಪದ ನಾನು 'ನೋ 'ಅವನೊಡನೆ ಅಷ್ಟಾಗಿ ಬಳಸದಿದ್ದರೂ...
ಮೊದ ಮೊದಲು ನೋ..ನೋ..ನೋ.. ಅಂತ ಜೋರಾಗಿ ಒಂದೇ ಏರು ದನಿಯಲ್ಲಿ ಮೂರು ಸಲ ಹೇಳುತ್ತಿದ್ದವನು ಈಗ ರಾಗ ಬದಲಿಸಿದ್ದಾನೆ ನೋ.. ಅಂತ ಮೊದಲು ಧೀರ್ಘವಾಗಿ ಹಾಡಿ ನಂತರ ಮೃದುವಾಗಿ ಆದರೆ ಫಾಸ್ಟ್ ಆಗಿ ನೊ.ನೊ.ನೋ... ಅಂತ ತಲೆ ಅಲ್ಲಾಡಿಸುತ್ತಾ ಹೇಳುತ್ತಾನೆ ಕೆಲವೊಮ್ಮೆ ತನ್ನ ಪುಟಾಣಿ ತೋರು ಬೆರಳನ್ನೂ ಆಡಿಸುತ್ತಾ ಅವನು ನೋ ಹೇಳುವುದು ನೋಡಲು ತಮಾಶೆಯಾಗಿರುತ್ತೆ

***************
ಕಡಿ,ಕೊಡಿ ಇವೆರಡು ಪದಗಳನ್ನೂ ತನಗೇನಾದರೂ ಬೇಕಾದಾಗ ಕೇಳಲು ಬಹಳ ದಿನಗಳಿಂದ (ಸುಮಾರು ಎರಡು ತಿಂಗಳಿಂದ )ಬಳಸುತ್ತಾನೆ ತುಂಬಾ ಆತುರಾತುರವಾಗಿ ಹೇಳುವಾಗ 'ಗಣಿ' ಕೂಡಾ ಮಧ್ಯೆ ನುಸುಳುತ್ತದೆ ಕಡಿ.. ಕಡಿ..ಕೊಡಿ.ಕೊಡೀ...ಗಣೀ...ಕಡೀ.....ಸುಮಾರು ಈ ಕ್ರಮದಲ್ಲಿ...ಈಗ ಎರಡು ವಾರಗಳಿಂದ ದೇ ದೇ ಅಂತ ಹೇಳುತ್ತಾನೆ
ಒಂದೇ ಉಸುರಿಗೆ ದೆ ದೆ ದೆ ದೆ ದೆ ದೆ ದೆ.. ಅಂತಲೂ ಹೇಳುತ್ತಾನೆ

*************
ಅಪ್ಪ ದಿನವೂ ಮಲಗುವ ಮುನ್ನ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹೇಳಿ ಕೊಡುವುದರಿಂದ ಮತ್ತು ಅವನ ತಲೆ ಬದಿಯಲ್ಲಿ ಕತ್ತಲಲ್ಲಿ ಹೊಳೆವ ಸ್ಟಾರ್ ಗಳನ್ನು ಅಂಟಿಸಿರುವುದರಿಂದ ಅವನಿಗೆ ಸ್ಟಾರ್ಸ್ ಗೊತ್ತು ಕೆಲವು ದಿನಗಳ ಹಿಂದೆ ಎಲ್ಲೋ ಹೊರ ಹೋಗಿ ಬಂದಾಗ ಕತ್ತಲಾಗಿತ್ತು ಕಾರಿನಿಂದ ಇಳಿದು ಮನೆಯೊಳಗೆ ಬರುವಾಗ ಆಕಾಶದ ನಕ್ಷತ್ರಗಳ ತೋರಿಸಿ ಸ್ಟಾರ್ಸ್ ಎಂದು ಹೇಳಿಕೊಟ್ಟೆವು ಅವತ್ತಿನಿಂದ ಯಾವಾಗ ಸ್ಟಾರ್ಸ್ ನೋಡಿದರೂ ತಾರ್ಸ್ ಅಥವಾ ಸಾರ್ಸ್ ಅಂತ ಹೇಳುತ್ತಾನೆ

***********************
ಈಗ ಕೆಲವು ದಿನಗಳಿಂದ ಹೇಳುವ ಇನ್ನೊಂದು ಪದ 'ಪೀಸ್...' ಅದರರ್ಥ ಪ್ಲೀಸ್...ಅಂತ!
ಬಹುಷಃ ಟಿ.ವಿ ನೋಡಿ ಕಲಿತದ್ದಿರಬೇಕು
ಅಪ್ಪ ಅಮ್ಮನ ಹತ್ರ ಈ ಪದದ ಉಪಯೋಗ ಬಿಲ್ಕುಲ್ ಇಲ್ಲ
ಹೊರಗಿನವರ ಅದರಲ್ಲೂ ಅಪರಿಚಿತರಿಗೆ ಮಸ್ಕಾ ಹೊಡೆಯಲು ಮಾತ್ರ ಈ ಪದದ ಉಪಯೋಗ

*************
ಇನ್ನುಳಿದಂತೆ ಬಾಲ್ , ಕ್ಯಾಚ್, ಥ್ರೋ..ಬಾಯ್ ಬಾಯ್ /ದಾಯ್ ದಾಯ್ ಎಲ್ಲಾ ಜೀರ್ಣವಾಗುವಷ್ಟು ಹಳೆಯದಾಗಿ ಹೋಗಿವೆ
*******************
ಈಗ್ಗೆ ಎರಡು ಮೂರು ವಾರಗಳಿಂದ ಅಮ್ಮಿ ಹಣ್ಣುಗಳನ್ನು ಗುರುತಿಸಲು ಆರಂಭಿಸಿದ್ದಾನೆ ಮೊದ ಮೊದಲು ಸೇಬು,ಸ್ಟ್ರಾಬೆರಿ,ಬಾಳೆಹಣ್ಣು ಎಲ್ಲಾಕ್ಕೂ 'ಆಪು' ಎಂದೇ ಹೇಳುತ್ತಿದ್ದ ಐದಾರು ದಿನಗಳಿಂದ ಸೇಬು ಮಾತ್ರ ಆಪು ಆಗಿದೆ ಆಪಲ್ ಜೂಸ್ ಸಹ ಆಪು!


ನೆಸ್ಲೆಯವರ ಜೂಸೀ ಜೂಸ್ ಪುಟಾಣಿ ಕಾರ್ಟನ್ ಮೇಲಿನ(ಮೇಲಿನ ಅಂದರೆ ಕಾರ್ನರಲ್ಲಿ ಇಷ್ಟೇ ಇಷ್ಟು ಕಾಣಿಸುವ) ಸೇಬಿನ ಚಿತ್ರತೋರಿಸಿ "ಮಾಮ... ಆಪು...' ಎಂದು ಮೊನ್ನೆ ಹೇಳಿದ
ದೇವರಾಣೆ... ಅವನ ಆಪು ಗುರುತಿದ ಕ್ರೆಡಿಟ್ ನನಗೆ ಸೇರಿದ್ದಲ್ಲ ನಾನು ಯಾವತ್ತೂ ಅವನಿಗೆ ಹಣ್ಣುಗಳ ಬಗ್ಗೆ ಹೇಳಿಕೊಟ್ಟಿಲ್ಲ

***********
ಕಳೆದೊಂದು ವರ್ಷದಿಂದ ಮನೆಯಲ್ಲಿ ಮೂರು ಮೂರು ಟಾಯ್ ಟ್ರೇನ್ ಗಳು ಎಲ್ಲೆಂದರಲ್ಲಿ ಬಿದ್ದಿದ್ದರೂ ಅಮ್ಮು ಅವನ್ನು ಕೇರ್ ಮಾಡಿದ್ದು ಅಷ್ಟರಲ್ಲೇ ಇತ್ತು ಅವನಿಗೆ ಕಳೆದ ವಾರದ ತನಕ it was just an another toy' ಆಗಿತ್ತು ಈಗ ನಮ್ಮನೆಯಲ್ಲಿ "ಟೂಟ್ ಟೂಟ್" ಗಳಿಗೆ ವಿಶೇಷ ಮರ್ಯಾದೆ ಅಮ್ಮು ಜೊತೆ ಸದಾ ಇರುವ ಒಂದಲ್ಲಾ ಒಂದು ಟ್ರೇನ್ ಆಟಕ್ಕೂ ಊಟಕ್ಕೂ ಕೊನೆಗೆ ಹಾಸಿಗೆಗೂ ಬರಲಾರಂಭಿಸಿವೆ ಸದಾ "ಟೂಟ್ ಟೂಟ್ ಮಂತ್ರ ಕಳೆದ ಒಂದೇ ತಿಂಗಳಲ್ಲಿ ಮೂರನೇ ಬಾರಿ ಲಾಸ್ ಗೆಟಾಸ್ ನ ಓಕ್ ಮೇಡೋ ಪಾರ್ಕ್ ನಲ್ಲಿನ ಪುಟಾಣಿ ಟ್ರೇನ್ ನಲ್ಲಿ ಕೂತ ಪ್ರಭಾವ!

ಅಂತೂ ಈಗ ಟ್ರೇನ್ ಗಳೇ ಅಮ್ಮಿಗೆ ಅದಕೂ ಇದಕೂ ಎದಕೂ....

***********
ನೆನ್ನೆ ಸೋಮ್ ರಶ್ಮಿ ಮನೆಯಲ್ಲಿ ಅವಳ ಕಬರ್ಡಿನಿಂದ ಸ್ಟ್ರಾ ತೆಗೆಯುತ್ತಿದ್ದೆ ಹಿಂದಿನಿಂದ ಬಂದ ಅಮ್ಮು 'ಗೀವ್ ಮೀ..." ಅಂತ ಕೇಳಿದ ಸೋಮ್ ರಶ್ಮಿ ಆದಿಯಾಗಿ ಎಲ್ಲರಿಗೂ ಒಂಥರಾ ಸಂಭ್ರಮ ವಾಯಿತು....
ಅಮ್ಮು ಹೊಸ ಪದಗಳನ್ನು ಹೇಳಲು ಯಾರ ಮನೆ ಯಾವ ಟೈಮ್ ಆರಿಸುತ್ತಾನೆಂದು ಹೇಳುವುದು ಕಷ್ಟ. ಜನವರಿ ಮೊದಲ ಭಾಗದಲ್ಲಿ ನಿಶಿತ್ ಮನೆಯಲ್ಲಿ ನಾನು ತನುವಿನೊಂದಿಗೆ ಮಾತಾಡುತ್ತಿದ್ದೆ ರಾತ್ರಿ ಹನ್ನೊಂದು ಮೀರಿತ್ತು ನಮ್ಮ ಮಾತಿನಿಂದ ಬೋರಾದ ಅಮ್ಮು ಮಾಮ ಶೂಸ್... ಅಂದ. ನಡಿ ಮನೆಗೆ ಮಾತು ಸಾಕು ಎನ್ನುವಂತೆ...ಅದಾಗಿ ಎರಡು ದಿನಕ್ಕೆ ಸಾಸ್ ಅಂತ ಸಾಕ್ಸ್ ಅನ್ನೂ ಹೇಳಲಾರಂಭಿಸಿದ ಈಗ ತನಗೆ ಹೊರಗೆ ಹೋಗಬೇಕೆನಿದಾಗಲೆಲ್ಲಾ ಈ ಎರಡೂ ಪದದ ಜಪ....

Saturday, May 2, 2009

ರಿಷಿಕಾ ಎಂಬ ಪುಟ್ಟ ತಂಗಿ


ಅಮ್ಮು ಶನಿವಾರ ಬೆಳಗ್ಗೆ ರಿಷಿಕಾ ಎಂಬ ಪುಟಾಣಿ ತಂಗಿಗಾಗಿ ಕಾದಿದ್ದೇ ಕಾದಿದ್ದುಅಂತೂ ಚಿಕ್ಕಪ್ಪ ಚಿಕ್ಕಮ್ಮ ನ ಜೊತೆ ಬಂದೇ ಬಿಟ್ಟಳು ತಂಗಿ



ಅಮ್ಮು ವಿನ ಅಮ್ಮ ಪುಟಾಣಿ ರಿಷಿಕಾಗೆಂದು ಹೆಣೆದ ಫ್ರಾಕ್


ಅಮ್ಮು ರಿಷಿಕಾ ಜೊತೆ....




ಮುದ್ದು ನಗೆಯ ರಿಷಿಕಾ....

Friday, April 24, 2009

ಕೇಕ್ ಮೆದ್ದ ನಮ್ಮ ಕೃಷ್ಣ.....

ಕೇಕ್ ಮೆದ್ದನಮ್ಮಾ ಕೃಷ್ಣಾ.. ಅಂತ ನಾವೀಗ ಹಾಡುವುದು...ಬೆಣ್ಣೆ ಕದ್ದನಮ್ಮ ಹಾಡನ್ನ...
ಮೊನ್ನೆ ಅಮ್ಮನ ಬರ್ತ್ ಡೇಗೆಂದು ರಶ್ಮಿ ಆಂಟಿ ಮಾಡಿದ್ದ ಕೇಕನ್ನು ನಮ್ಮ ಕಿಟ್ಟ ಮೆದ್ದ ಬಗೆ...

ಕಷ್ಟ ಪಟ್ಟು ಡೈನಿಂಗ್ ಟೇಬಲ್ ಹತ್ತಿ....




ಅಚ್ಚುಕಟ್ಟಾಗಿ ಕಾಲಮೇಲೆ ಕಾಲು ಹಾಕಿ ಕೂತು ಕೇಕ್ ಗೆ ಕೈ ಹಾಕಿ.......

ಹೀಗೆ ತಿಂದು ಬಿಟ್ಟನು...!



ನೋಡಿಲ್ಲಿ.... ಹಳದಿ ಮೀಸೆ....


Wednesday, April 15, 2009

ಆಳ್ವಾರರ 'ಮುಕುಂದ'



ಕ್ಷೀರಸಾಗರತರಂಗಶೀಕರಾ-
ಸಾರತಾರಕಿತ ಚಾರುಮೂರ್ತಯೇ
ಭೋಗಿಭೋಗಶಯನೀಯಶಾಯಿನೇ
ಮಾಧವಾಯ ಮಧುವಿದ್ವಿಷೇ ನಮಃ

ಕ್ಷೀರಸಾಗರದ ಅಲೆಗಳ ತುಂತುರುಗಳು ಯಾವ ಸುಂದರವಾದ ಶರೀರದ ಮೇಲೆ ನಕ್ಷತ್ರಗಳಂತೆ ಶೋಭಿಸುವುವೋ,ಯಾವನು ಆದಿಶೇಷನ ಕುಂಡಲರೂಪವಾದ ಹಾಸಿಗೆಯ ಮೇಲೆ ಯೋಗನಿದ್ರೆಯಲ್ಲಿರುವನೋ ಆ ಮಧುಸೂದನನಾದ ಮಾಧವನಿಗೆ ನಮಸ್ಕಾರ.
-ಕುಲಶೇಖರಾಳ್ವಾರರ 'ಮುಕುಂದ ಮಾಲೆ'ಯಿಂದ

Saturday, April 11, 2009

ಕಂದಯ್ಯ ನಿನ್ನಾಸೆ ನನಗೇ ಅನುಗಾಲ...



ಬೆಟ್ಟಕ್ಕೆ ಬಿದಿರಾಸೆ ಹೆಣ್ಣಿಗೆ ತೌರಾಸೆ
ಬಿತ್ತಿದ ಬೆಳೆಗೇ ಮಳೇಯಾಸೆ ಎನ್ನಯ್ಯ
ನಿನ್ನಾಸೆ ನನಗೇ ಅನುಗಾಲ


ಯಾರಾಸೆ ನಿನಗೆ ಪಾರಿವಾಳದಾಸೆ
ನೀರಾಸೆ ಮರದ ನೆರಳಾಸೆ
ಕಂದಯ್ಯ ನಿನ್ನಾಸೆ ನನಗೇ ಅನುಗಾಲ


ಕಾಲಾಸೆ ಹೆಳವಂಗೆ ಕಣ್ಣಾಸೆ ಕುರುಡಂಗೆ
ವಸ್ತ್ರದ ಆಸೆ ಬಡವೀಗೆ ಬಲಯ್ಯ
ನಿನ್ನಾಸೆ ನನಗೇ ಅನುಗಾಲ

Thursday, April 9, 2009

ಅಮ್ಮನಿಗೆ ಸಹಾಯ...!

ಅಮ್ಮನಿಗೆ ಸಹಾಯ ಮಾಡಬೇಕೆಂದು ಕಿಟ್ಟಣ್ಣನಿಗೆ ಆಗಾಗ ಉಮೇದು ಬಂದು ಬಿಡುತ್ತದೆ
ಅವನು ಸಹಾಯ ಮಾಡುವ ಪರಿ ಹೇಗೆಂದರೆ ಹೀಗೆ...!

Monday, April 6, 2009

ಕಿಟ್ಟಣ್ಣನ ಯುಗಾದಿ

ಈ ಯುಗಾದಿಯನ್ನು ಕಿಟ್ಟ ಅಮ್ಮ ಮಾಡಿದ ಸಕ್ಕರೆ ಕಾಳುಗಳ ಹಾರ ತೊಡಿಸಿ ಕೊಂಡು ಆಚರಿಸಿ ಕೊಂಡ


Actuallay,ಸಕ್ಕರೆಕಾಳಿನ ಹಾರ ಕಿಟ್ಟನ ಬೊಂಬಾಯಿ ಅಜ್ಜಿಯ idea....


ಮರಾಠಿಗರು ನಮ್ಮ ಯುಗಾದಿದಿನವೇ ಆಚರಿಸುವ ಅವರ ಹೊಸ ವರ್ಷ'ಗುಡಿಪದ್ವಾ' ದಂದು ಪುಟ್ಟ ಮಕ್ಕಳಿಗೆ ಸಕ್ಕರೆಕಾಳಿನ ಹಾರ
ತೊಡಿಸಿ ಅಲಂಕಾರ ಮಾಡುತ್ತಾರೆ.ನಮ್ಮ ಉತ್ತರಕರ್ನಾಟಕದಲ್ಲೂ ಈ ಸಂಪ್ರದಾಯವಿದೆ


ಕಿಟ್ಟನಿಗೆ ಸಕ್ಕರೆ ಜೆಲ್ಲಿ ಕಾಳುಗಳು ಬಲು ಇಷ್ಟ ಆದವು



ಕಿಟ್ಟನಿಗೆ ಸಕ್ಕರೆಕಾಳುಗಳ ಮಾಲೆ ಬೇಏರಿಯಾದಲ್ಲಿ ಸಿಗದೇ ಹೋದ್ದರಿಂದ ಅಮ್ಮ ಸಕ್ಕರೆಯ jelly bean ಹಾರ ಮಾಡಿದಳು
(ಹಾರ ಮಾಡುತ್ತಾ ಆರು ಸೂಜಿ ಮುರಿದಳು!!!)



ಕೆನ್ನೆಯಲ್ಲಿ ತುಂಬಿಕೊಂಡಿರೋದು ಏನು...?



ನಿಮ್ಗೂ ಬೇಕಾ...?

ಇಗೊಳ್ಳಿ....ಯುಗಾದಿ ಶುಭಾಶಯ ಜೊತೆ ಸಕ್ಕರೆ ಕಾಳು


ಅಮ್ಮ ಕಿಟ್ಟನಿಗೆ ಆರತಿ ಮಾಡಿದ್ದು ಹೀಗೆ....