Thursday, April 24, 2008

ಮೂವರು ಮಾಂತ್ರಿಕರು

ನಾಗಾರ್ಜುನ-ಶ್ರೀನಿಧಿ-ಅಮರ್ತ್ಯ


Nagarjuna-Shrinidhi-Amartya

Tuesday, April 22, 2008

SAMHITA


ಒಂದು ನಗು ಹೂನಗೆ

ಇನ್ನೊಂದು ನಗು ಹಾಲ್ನಗೆ

ಮತ್ತೊಂದು ನಗು ಜೇನ್ನಗೆ

ನೂರು ನಾರಿ ನಕ್ಕ ಮೇಲೂ

ಇನ್ನೂ ಸುರಿವಳು,

ನಗೆ ಮಲ್ಲಿಗೆ...

Sunday, April 20, 2008

ಕಿಟ್ಟಣ್ಣನ ಹೊಸ ಪ್ರೇಮ

ಕಿಟ್ಟಣ್ಣನ ಪೇಪರ್ ಪ್ರೇಮದ ಬಗ್ಗೆ ನನಗೆ ಗೊತ್ತಿತ್ತು

ಅವನ ಸ್ಟೀಲ್ ಪಾತ್ರೆಗಳ ಮೇಲಿನ ಮೋಹದ ಬಗ್ಗೆ ಗೊತ್ತಿತ್ತು

ಕೊನೆಗೆ ಅವನಿಗೆ ವೈರುಗಳೂ,ಬ್ಯಾಟರಿಗಳೂ ಮುರಿದ ಪೆನ್ನುಗಳೂ ಇಷ್ಟವೆಂದು ಗೊತ್ತಿತ್ತು

ಆದರೆ ಅವನ ಈ ಹೊಸಪ್ರೇಮದ ಬಗ್ಗೆ ದೇವರಾಣೆ ಗೊತ್ತಿರಲಿಲ್ಲ


ಆದಿದಿಷ್ಟು...

ಕಳೆದವಾರ ನಾನು ಏನು ಮಾಡಿದರೂ ನಮ್ಮಮನೆಯ ಟಿವಿ ನನ್ನಿಷ್ಟದ ಪುರಾತನ ಸೀರಿಯಲ್ಗಳನ್ನು ಬಾರೀಬಾರೀ

ರಿಪೀಟ್ ಮಾಡುವ ಟಿಬೀಯಸ್ ಚಾನಲ್ಲನ್ನು ತೋರಿಸೊಲ್ಲ ಅಂತ ಹಟ ಹಿಡಿದು ಕೂತುಬಿಟ್ಟಿತ್ತು

ಸರಿ ಸಂಜೆ ಮನೆಗೆ ಬಂದ ಅರವಿಂದನಿಗೆ ಟಿವಿಗೆ ಏನೋ ಆಗೋಗಿದೆ ಕಣೋ ಟೀಭೀಯಸ್


ಬರ್ತಾಇಲ್ಲಾ...ಹಾಕ್ಕೊಡೋ...ಅಂತ ಗೋಗರೆದೆ ರಿಮೋಟ್ ತೊಗೊಂಡು ಟ್ರೈ ಮಾಡಿದವನು ಇದೇನಿದು ಅಂತ

ಹುಬ್ಬೇರಿಸುತ್ತಾ ಮನೆಗೆ ಬಂದವರ್ಯಾರಾದ್ರೂ ರಿಮೋಟ್ ಮುಟ್ಟಿದ್ರಾ...ಅಂತ ಕೇಳುವುದಕ್ಕೂನಾನು

ಅಡ್ಡಡ್ಡವಾಗಿ ತಲೆ ಆಡಿಸುವುದಕ್ಕೂ ಸರಿಯಾಗಿ ಕಿಟ್ಟಣ್ಣ ಅವನ ಮೂರೂಮುಕ್ಕಾಲು ಹಲ್ಲು ತೋರಿಸುತ್ತಾ

ಹ್ಹಿ...ಹ್ಹಿ...ಹ್ಹಿ ಅಂತ ನಗುವುದಕ್ಕೂ ಸರಿಯಾಯಿತು ಬೆಳಗ್ಗೆ ಕಿಟ್ಟಣ್ಣ ರಿಮೋಟ್ ಹಿಡಕೊಂಡು ಆಟ

ಆಡ್ತಾಇದ್ದ...ಅಂತ ನಾನು ನೆನಪಿಸಿಕೊಂಡು ಹೇಳುತ್ತಿರುವಾಗಲೇ`ಇವನು ಅಯ್ಯೋ...ಪೋಕರಿ...'ಅಂತ

ಕಿಟ್ಟಣ್ಣನೆಡೆ ನುಗ್ಗಿದ ನಾನು ಮಿಕ ಮಿಕ ಇಬ್ಬರ ಮುಖನೋಡಿದೆ

ಈಗ ಸ್ವಲ್ಪ ಸೀನ್ ರೀವೈಂಡ್

ಬೆಳಗ್ಗೆ ನಾನು ಅಡುಗೆ ಮನೆಯಲ್ಲಿ ಬಿಸಿ ಯಾಗಿರುವಾಗ ರಿಮೋಟ್ ನೊಂದಿಗೆ ಆಡುತ್ತಾ ಆಡುತ್ತಾ ಕಿಟ್ಟಣ್ಣ `ಆನ್


ಡಿಮಾಂಡ್'ಎಂಬ ಪೇಯ್ಡ್ ಚಾನಲ್ ನಲ್ಲಿ ಯಾವುದೋ ಇಂಗ್ಲಿಷ್ ಮೂವಿ ಆರ್ಡರ್ ಮಾಡಿ ಬಿಟ್ಟಿದ್ದಾನೆ (ಮತ್ತು

ಮೂವಿ ಪ್ರಸಾರವಾಗುತ್ತಿರುವಾಗ ಚಾನಲ್ ಬದಲಿಸಿ ಬಿಟ್ಟಿದ್ದಾನೆ)ಅದು ಸಾಲದೆಂದು ಮತ್ತೆ ಮೂರು

ಸಿನಿಮಾಗಳನ್ನು ಕ್ಯೂನಲ್ಲಿ ಬೇರೆ ನಿಲ್ಲಿಸಿಕೊಂಡಿದ್ದಾನೆ!!!ನಂತರ ಸಿಕ್ಕಪಟ್ಟೆ ಬಟನ್ ಗಳನ್ನು ಒತ್ತಿಬಿಟ್ಟಿದ್ದರಿಂದ ಟಿವಿ

ಮುನಿಸಿಕೊಂಡು ಬಿಟ್ಟಿದೆ

*************

ಈಗ ಐದು ಡಾಲರ್ ನ ಬಿಲ್ಲು ಬಂದಿದೆ ಐದೇ ಡಾಲರ್ ಅಲ್ಲ ಸದ್ಯ ಅಂತ ಖುಷಿ ಪಡಬೇಕಾ ಅಥ್ವಾ ಇವ್ನು

ಇನ್ನೇನೇನು ಮಾಡ್ತಾನೋ ಅಂತ ಟೆನ್ಶನ್ ಮಾಡೋ ಬೇಕಾ ಅಂತ ಗೊತ್ತಾಗುತ್ತಿಲ್ಲ ನನಗೆ...



Monday, April 7, 2008

ಕಿಟ್ಟಣ್ಣ ನ ಹೊಸ ಯುಗಾದಿ ಹಾಡು


ಯುಗಾದಿ ಹಬ್ಬ ಬಂತಣ್ಣ


ಹೋಳಿಗೆ ತುಪ್ಪ ಹೊಡೆಯೋಣಾ


ಲಕ ಲಕ ಲಕ ಲಕ....




ಬೇಲದ ಪಾನಕ ಕುಡಿಯೋಣ


ಮಾವಿನ ಮಿಡಿಗಳ ಮೆಲ್ಲೋಣ


ಮಿ ಮಿಮ್ ಮಿ ಮಿಮ್.....



ಜುಮ್ಮನೆ ಜೋಕಾಲಿ ಜೀಕೋಣಾ


ಬಿದಿಗೆ ಚಂದಿರ ನೋಡೋಣಾ


ನಾ ನಿನ್ ನಾ ನಿನ್......



ಕಿಟ್ಟಣ್ಣ ನ ಅಮ್ಮನ ಟಿಪ್ಪಣಿ-ಪ್ರತಿ ನುಡಿಯ ಕೊನೆಯ ಸಾಲು ಅಮ್ಮು ಆಲಿಯಾಸ್ ಕಿಟ್ಟಣ್ಣನ ಇತ್ತೀಚಿನ ತೊದಲು ನುಡಿಗಳು...!


ಮಿಕ್ಕಿದ್ದು ನಾನು ಸೇರಿಸಿದ್ದು


Thursday, April 3, 2008

ನನ್ನ ಕೃಷ್ಣ


ಅಳಬೇಡೋ ನನ್ನ ಕೃಷ್ಣ
ಹಾಲು ಮಾರಿ ಬರ್ತೀನಿ
ಕಾಲಿಗೆ ಕಡಗ ತರ್ತೀನಿ
ಮೊಸರು ಮಾರಿ ಬರ್ತೀನಿ
ಹಸಿರು ಅಂಗಿ ತರ್ತೀನಿ
ಬೆಣ್ಣೆ ಮಾರಿ ಬರ್ತೀನಿ
ಬಣ್ಣದ ಗಿಲಕಿ ತರ್ತೀನಿ
ತುಪ್ಪ ಮಾರಿ ಬರ್ತೀನಿ
ಒಪ್ಪಿದ ಹುಡುಗಿ ತರ್ತೀನಿ
ಅಳಬೇಡೋ ನನ್ನ ಕೃಷ್ಣ

Tuesday, April 1, 2008

ಹಲ್ಲುಜ್ಜುವ ಹೊಸ ವಿಧಾನ

ಬೆಳಗ್ಗೆ ಎದ್ದು ನೀವು ಹಲ್ಲುಜ್ಜುತ್ತೀರಾ ತಾನೇ...(ಸದ್ಯ ...!) ಇದು ಹಲ್ಲುಜ್ಜುವ

ಹೊಸ ವಿಧಾನ ನಾನೇ ಕಂಡು ಹಿಡಿದಿದ್ದು ಪೇಟೆಂಟ್ ಮಾಡಿಸ್ ಕೊಳಣಾ

ಅಂತಿದೀನಿ ಏನಂತೀರೀ....?

Do you brush every morning...? this is the new method

of brushing i've invented....planning to get a patent....




ಆಹಾ...! ದಿವ್ಯಾನಂದ ಈ ವಿಧಾನ ನೀವೂ ಒಮ್ಮೆ ಟ್ರೈ ಮಾಡಿ....
why don't you try my new method it's wonderful....