Sunday, December 30, 2007

ಆಡಿ ಬಾ ಕಂದಯ್ಯ...


ಆಡಿ ಬಾ ಕಂದಯ್ಯ ಅಂಗಾಲ ತೊಳೆದೇನು
ತೆಂಗಿನ ಕಾಯಿ ಎಳನೀರ ತಕ್ಕೊಂಡು
ಬಂಗಾರದಾ ಪಾದ ತೊಳೆದೇನು

ಹವ್ವಲ್ಲೆ ಹಸಿ ಮುದ್ದು ಹಣ್ಣು ತಾವರೆ ಮುದ್ದು
ಹಣ್ಣುಳ್ಳ ಮರಕೇ ಗಿಣಿ ಮುದ್ದೂ
ಕಂದಯ್ಯ ನಮ್ಮ ಮನೆಗೇ ನೀ ಮುದ್ದೂ

(ಧನ್ಯವಾದಗಳು-ಈ ಜನಪದ ಸಾಹಿತ್ಯವನ್ನು ಅಮ್ಮುವಿಗಾಗಿ ನೆನಪಿಸಿಕೊಂಡು ಹೇಳಿದವರು- ನನ್ನ ಅತ್ತೆ ಶ್ರೀಮತಿ ಸ್ವರ್ಣಾಂಬ ಶಂಕರ ನಾರಾಯಣ.)

Tuesday, December 25, 2007

Amartya and Rohan


ಅಮರ್ತ್ಯ ಮತ್ತು ರೋಹನ್ ಎಂಬ ಅಣ್ಣ ತಮ್ಮ

Tuesday, December 18, 2007

ಕಥೆ ಹೇಳೋಕೂ ಬರತ್ತೆ ನಂಗೆ...


STORY TIME... here comes GAINT swimming Whale and pink horned Moose!

Tuesday, December 4, 2007

ದೂರೀ....ದೂರೀ...




ದೂರಿ ದೂರಿ ದುಗ್ಗಾಲಮ್ಮ...
ನಾರಿ ಕೇಳೇ ನಂದಗೋಪೀ...

ಪುಟ್ಟ ಮುದ್ದೂ...
ಬೆಣ್ಣೆ ಕದ್ದೂ...
ಓಡಿ ಬಾರೋ...
ನನ್ನ ಚಿನ್ನಾ...


ಬೆಳ್ಳಿ ಬಟ್ಲು
ಸಕ್ರೆ ತೊಟ್ಲು
ಬಂಗಾರದ್ ಮೆಟ್ಲು
ಹತ್ತಿ ಬಾರೋ...

ಬೆಣ್ಣೆ ಕಳ್ಳಾ..
ಪುಟ್ಟ ಕುಳ್ಳಾ..
ಪಾಚಿ ಕೊಳ್ಳೋ..
ನನ್ನ ರನ್ನಾ...

ಚಂದಮಾಮಾ...
ಚಿನ್ನದ್ ಮಾಮಾ...
ತಾಚಿ ಕೊಳ್ಳೋ...
ನನ್ನ ಚಿನ್ನಾ...


ಟಿಪ್ಪಣಿ-ದೂರೀ...ದೂರೀ....ಎಂಬ ಈ ಜೋಗುಳದ ಮೊದಲೆರಡು ಸಾಲುಗಳು ಮಾತ್ರ ನನಗೆ ಗೊತ್ತಿದ್ದದು ಪೂರ್ಣಪಠ್ಯಕ್ಕಾಗಿ ತುಂಬಾ ಹುಡುಕಿದರೂ ನನಗೆ ಸಿಗಲಿಲ್ಲ. ಕೊನೆಗೊಂದು ದಿನ ಅಮರ್ತ್ಯನಿಗೆ ಚುಕ್ಕು ತಟ್ಟುತ್ತಾ ನನಗೆ ತೋಚಿದಂತೆ ಉಳಿದ ಸಾಲುಗಳನ್ನು ಹೆಣೆದು ಕೊಂಡೆ ಈ ಹಾಡು ಅಮ್ಮುವಿಗೆ ತುಂಬಾ ಇಷ್ಟ ನಿಮ್ಮಲ್ಲಿ ಯಾರಿಗಾದರೂ ಒರಿಜಿನಲ್ ಹಾಡು ಗೊತ್ತಿದ್ದರೆ ದಯವಿಟ್ಟು ಇಲ್ಲಿ ಹಂಚಿ ಕೊಳ್ಳಿ

Sunday, November 25, 2007

ಹತ್ತು ಫೇವರೆಟ್ಸ್


ಕಳೆದ ಆರು ತಿಂಗಳಲ್ಲಿ ನಾನು ಗಮನಿಸಿದಂತೆ ಅಮ್ಮುವಿನ ಹತ್ತು ಫೇವರೆಟ್ ಗಳು (ಇದೇ ಕ್ರಮಾಂಕದಲ್ಲಿ ಅಲ್ಲ!)
೧.ತನ್ನನ್ನು ಎತ್ತಿಕೊಂಡು ತಿರುಗಾಡಿಸುವ ಎಲ್ಲಾ ಆಂಟಿ ಅಂಕಲ್ ಗಳು!
೨.`ಅಗ್ಗುವೇ' ಅಮ್ಮುವಿಗೆ ತುಂಬಾ ಇಷ್ಟ ಅಮ್ಮನನ್ನು `ಅಗ್ಗುವೇ' ಗಾಗಿ ಸದಾ ಪೀಡಿಸುತ್ತಿರುತ್ತಾನೆ
೩.ಅವನ ಹೊಚ್ಚ ಹೊಸಾ ಫ್ರೆಂಡ್` ಆಲೀ' ಅಥವಾ `ಲಾಲೀ'(ಅವಳ ಬಟ್ಟೆಯನ್ನೂ ತಲೆಯನ್ನು ಸದಾ ತಿನ್ನುತ್ತಿರುತ್ತಾನೆ) ಮತ್ತು ಅಷ್ಟೇನೂ ಹೊಸಬನಲ್ಲದ ಫ್ರೆಂಡ್, ಮಿಸ್ಟರ್ ಬೇರ್ ದ ಕ್ಲೌನ್
೪.ಬಂತು ಬಂತು ಬಂತು...ಎಂಬ ಆಟ
೫.ಗರ್ಬರ್ ನ ತರಕಾರಿಗಳು ವಿಶೇಷವಾಗಿ ಸ್ಕ್ವಾಷ್
೬.ಅವನನ್ನು ಎಂಗೇಜ್ ಮಾಡುವ ಎಲ್ಲಾ ಮಕ್ಕಳು
೭.ಬಣ್ಣ ಬಣ್ಣದ ದೀಪಗಳಿರುವ ಮಾಲ್ ಅದರಲ್ಲೂ `ಐಕಿಯಾ' ಎಂಬ ಸ್ವೀಡಿಶ್ ಮಾಲ್
೮.ಅವನ ರೇನ್ ಬೋ ಡಕ್ ಕಥೆ ಪುಸ್ತಕ,ಅಪ್ಪ ತಂದು ಕೊಟ್ಟಿರುವ ಪ್ಲ್ಯಾಸ್ಟಿಕ್ ಕೋಡು ಬಳೆಗಳು
೯.ಬರ್ದಾಷ್ ನಹೀ ಕರ್ಸಕ್ತಾ,ಬಂಬೈ ಮೇರಿ ಜಾನ್ ,ಅಕೇಲೇ ಹೈ,ದೂರಿ ದೂರೀ,ಕಪ್ಪು ಕಪ್ಪು,ನಿಂಬೀಯಾ ಬನದ ಮ್ಯಾಗಳ,ಊರು ನೋಡಲೆಂದು ಹೊಂಟನೋ ಕಪೀಶಾ...ಲಿಸ್ಟ್ ಗೋಸ್ ಆನ್
೧೦.ತನ್ನ ಎಂಜಲು ಕೈಯಲ್ಲಿ ಅಪ್ಪ ಅಮ್ಮನ ಮುಖ ಪರಚುವುದು!

Saturday, November 24, 2007

ಮಗುವೇ ನಿನ್ನ ಹೂನಗೆ


ಮಗುವೇ ನಿನ್ನ ಹೂ ನಗೆ ಒಡವೆ ನನ್ನ ಬಾಳಿಗೆ...

Wednesday, November 21, 2007

ಹ್ಹಾ...!


ಹ್ಹಾ...! ಎಲ್ಲಾ ಚಾಕೇಟೂ ನೀವೇ ತಿಂಬಿಟ್ರಾ...?ಎಂಥಾ ಹೊಟ್ಟೆಬಾಕರಪ್ಪಾ...BAD JOB...!

Tuesday, November 20, 2007

ಬಾಲ ಮುಕುಂದ


ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಷಯಂತಂ
ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ

ಅರ್ಥ-ಕಮಲದಂತ ಕೈಗಳಿಂದ ಕಮಲದಂತ ಪಾದಗಳನ್ನು ಕಮಲದಂತ ಬಾಯಿಯೊಳಗೆ ಇರಿಸಿಕೊಂಡು ಆಲದ ಎಲೆಯ ಮೇಲೆ ಮಲಗಿರುವ ಬಾಲ ಮುಕುಂದನನ್ನು ಮನಸಾ ಸ್ಮರಿಸುತ್ತೇನೆ

Thursday, November 8, 2007

ಅಮ್ಮು ಮತ್ತು ನಕ್ಷತ್ರ


ಕಪ್ಪು ಕಪ್ಪು ಬಾನಲ್ಲಿ
ಮಿಣಿ ಮಿಣಿ ಮಿನುಗೋ ನಕ್ಷತ್ರ
ದೂರ ಯಾಕೆ ನಿಂತ್ ಬುಟ್ಟೇ
ಬೇಗ್ ಬೇಗ್ ಬಾ ನನ್ ಹತ್ರ

ನನ್ ಪುಟ್ ಪುಟ್ ಕಣ್ಗೆ ನೀನಂತೂ
ಎಷ್ಟು ಪುಟ್ ದಾಗಿ ಕಾಣ್ತೀಯಾ
ಹಾಗೇ ನಿನ್ ಪುಟ್ ಪುಟ್ ಕಣ್ಗೆ
ನಾನೂನೂ ಅಷ್ಟೇ ಪುಟ್ ದಾಗಿ ಕಾಣ್ತೀನಾ?

ಯಾರಪ್ಪಾ ಇದು ಹಾಸ್ಗೇಲ್
ಮಲ್ಕೊಂಡು,ಹೊದ್ಗೆ ಹೊದ್ಕೊಂಡು
ನನ್ ಹತ್ರ ಮಾತಾಡೋದು
ಅಂತ ಕೇಳ್ತೀಯಾ?

ನಿಂಗೂ ನನ್ ಹಾಸ್ಗೇಲೆ
ನನ್ನ ಅಮ್ಮನ್ ಪಕ್ಕ
ಬೆಚ್ಚನೆ ಜಾಗ ಕೊಡ್ತೀನಿ
ಹೇಳೂ ಕೆಳಗಿಳ್ದು ಬರ್ತೀಯಾ?

ಎಷ್ಟು ಕರುದ್ರೂ ನೀ ಬರ್ಲಿಲ್ವಲ್ಲಾ
ನಿಂಗ್ ನಿದ್ದೆ ಬರ್ತಿಲ್ವಾ?
ರಾತ್ರಿ ಪೂರಾ ಮಿಣ ಮಿಣ ಮಿನುಗಿ
ಹಗಲಲ್ ನಿದ್ದೇ ಮಾಡ್ತೀಯಾ?

ಓಕೇ ಗುಡ್ ನೈಟ್ ನಕ್ಷತ್ರ
ಮತ್ತೆ ನಾಳೆ ಸಿಗೋಣಾ
ಪ್ಲೀಸ್ ನಿದ್ದೆ ಮಾಡೋಕ್ ಟ್ರೈ ಮಾಡು
ಇಬ್ರೂ ಬೆಳಗ್ಗೆ ಆಡೋಣಾ

-ಮಾಲಾರಾವ್

Wednesday, November 7, 2007

ಮುದ್ದು ಮುದ್ದು


ಕಪ್ಪು ಕಪ್ಪು
ಸಾದು ಕಪ್ಪು
ನನ್ನ ಚಿನ್ನಿ
ಕೂದ್ಲು ಕಪ್ಪು


ಹಣೆ ಹಣೆ
ಬಂಗಾರ್ ದ್ ಮಣೆ
ಚುಕ್ಕಿ ಇಟ್ಟ
ಪುಟ್ಟ ಹಣೆ


ಹಣ್ಣು ಹಣ್ಣು
ನೇರ್ಳೆ ಹಣ್ಣು
ನನ್ನ ಪುಟ್ಟ
ನಿನ್ನ ಕಣ್ನು


ಚೆಂದ ಚೆಂದ
ಏನು ಚೆಂದ?
ನಮ್ಮ ಗಿಳಿಯ ಮೂಗೇ ಚೆಂದ

ಮುದ್ದೆ ಮುದ್ದೆ
ಬೆಣ್ಣೆ ಮುದ್ದೆ
ನಿನ್ನ ಕೆನ್ನೆ
ಜೇನು ದೊನ್ನೆ


ಕೆಂಪು ಕೆಂಪು
ಗುಲಾಬಿ ಕೆಂಪು
ನನ್ನ ಮುದ್ದು
ತುಟಿ ಕೆಂಪು


ಗಲ್ಲ ಗಲ್ಲ
ಗುಳಿ ಗುಲ್ಲ
ಅಮ್ಮನ್ ಬೀಳ್ಸೋ
ರಸಗುಲ್ಲ

-ಮಾಲಾ ರಾವ್
(ಸೂಚನೆ-ಹಾಡು ಹೇಳುತ್ತಾ ಮಗುವಿನ ಮುಖದ ಆಯಾಯಾ ಭಾಗವನ್ನು ಮೃದುವಾಗಿ ಮುಟ್ಟಿ ಸವರಿ ಹಾಡಿದರೆ ಮಗು ಒಳ್ಳೇ ಪ್ರತಿಕ್ರಿಯೆ ತೋರುವುದಲ್ಲದೇ ಆ ಭಾಗಗಳ ಪರಿಚಯವನ್ನೂ ಮಾಡಿಕೊಟ್ಟಂತಾಗುತ್ತದೆ)

Tuesday, November 6, 2007

ಯಾರೀ ಚಿಣ್ಣ...?


ಯಾರೀ ಚಿಣ್ಣ ಕೇದಿಗೆ ಬಣ್ಣ
ಘಮ ಘಮ ಬಂಗಾರ ಸಣ್ಣ
ನಕ್ಕರೆ ಸಾಕು ಬಿಚ್ಚಿದಂತೆಲ್ಲೂ
ಬೆಳಕಿನ ಪತ್ತಲವನ್ನ!

-ಎನ್.ಎಸ್.ಎಲ್. ಭಟ್ಟ

Sunday, October 28, 2007

Amartya, 3 days old...

ಹಿಂದಿರುಗಿ ನೋಡಿದಾಗ...ಮೂರು ದಿನದ ಅಮರ್ತ್ಯ

Saturday, October 27, 2007

I ATE MY V FIRST VEGETABLE...!


ನಮ್ಮನೆ ಪಿಳಿ ಪಿಳಿ ಬಿಳಿ ಬಿಳಿ ಮೊಲ ಕ್ಯಾರೆಟ್ ತಿಂದಿದ್ದು ಹೀಗೆ.....
Mister Rabbit in the carrot patch
Digging up the carrots. Scratch,
scratch.
He ate the first little carrot, round
and fat.
He ate the second little carrot just
like that.
He ate the third little carrot, orange
and sweet.
He ate the fourth little carrot, what a
treat!
Mister Rabbit in the carrot patch
Digging up the carrots. Scratch,
scratch, scratch

Thursday, October 25, 2007

ಕರಡಿ ಮಾಮನೊಂದಿಗೆ...


Performing with my playmate Mr Bear, The clown...
(ammu turned 5 months today...
Best wishes ammu...)

Wednesday, October 24, 2007

ಪುಟ್ಟಪಾಪ


ಪುಟ್ಟಪಾಪ ಎಷ್ಟು ಚೆಂದ
ನಿನ್ನ ಕಣ್ಣು!
ಹಲ್ಲೇ ಇಲ್ಲ;ಗಲ್ಲಥೇಟು
ಸೇಬು ಹಣ್ಣು!
ಪುಟ್ಟಪಾಪ ಹಾಡು ಹೇಳಿ
ನಿನ್ನ ತೂಗಲೇ?
ಮಮ್ಮು ಬೇಕೆ ಅಮ್ಮ
ನನ್ನು ಕೂಗಲೇ?
ಪುಟ್ಟಪಾಪ ಕೆಳಗೆ ಬಾ
ಬಿಟ್ಟು ತೊಟ್ಟಿಲು;
ಕೈಯ್ಯ ಕೊಟ್ಟು ಇಳಿಸುತೇನೆ
ಎಲ್ಲ ಮೆಟ್ಟಿಲು.
-ಶ್ರೀನಿವಾಸ ಉಡುಪ

Thursday, October 11, 2007

ಪಿಳುಕಿ ಪುಳುಕಿ ಪಾಪಚ್ಚಿ

ಪಿಳುಕಿ ಪುಳುಕಿ ಪಾಪಚ್ಚಿ
ಅಮ್ಮ ಮಾಡ್ತಾಳೆ ಅಪ್ಪಚ್ಚಿ
ಪಿಳುಕಿ ಪುಳುಕಿ ಪಿಳಿ ಪಿಳಿ ಕಣ್ಣೇ
ಅಪ್ಪ ತರೋಕ್ಕೆ ಹೋಗಿದಾರೆ ಬೆಣ್ಣೆ
ಮಲಗೇ ಪಿಳಿ ಪಿಳಿ ಮುದ್ದು ಚಿಗರಿ
ಅಣ್ಣ ಬಿಡುವನು ಬಣ್ಣದ ಬುಗುರಿ
ಮಲಗೇ ಪಿಳಿ ಪಿಳಿ ಮುದ್ದು ಪಾಪಿ
ಅಕ್ಕ ಹೊಲೆವಳು ಬಣ್ಣದ ಟೋಪಿ
ಪಿಳುಕಿ ಪುಳುಕಿ ಪಾಪಚ್ಚಿ
ನಿನಗೆ ಬೇಕೆ ಅಪ್ಪಚ್ಚಿ?
ಅರೆರೇ ಪಾಪಚ್ಚಿ ಎಲ್ಲಿಗೋಯ್ತು?
ತಾಚಿಯ ದೋಣಿಲಿ ತೇಲಿ ಹೋಯ್ತು

Monday, October 8, 2007

GETTING READY FOR MY FIRST WINTER


ಚಳಿಗಾಲಕ್ಕೆ ನಾನಂತೂ ರೆಡಿ ಆಗ್ತಿದೀನಪ್ಪಾ...ನೀವೂ...?
ಇದು ನಮ್ಮಜ್ಜಿ ನನಗೋಸ್ಕರ ಹಾಕಿ ಕಳ್ಸಿದ ಸ್ವೆಟರ್... ಹೇಗೆ ಕಾಣ್ತೀನೀ.. ನಾನು...?

Tuesday, September 4, 2007

Mike Tyson

ಬರ್ತೀರಾ....ಬಾಕ್ಸಿಂಗ್ ಆಡೋಣಾ...?

Tuesday, August 28, 2007

Saturday, August 25, 2007

ತಿಂಗಳ ಸಂಭ್ರಮ


ಇವತ್ತಿಗೆ ಅಮ್ಮುವಿಗೆ ಮೂರು ತಿಂಗಳು ತುಂಬಿತು.ನಂದಗೋಕುಲಕ್ಕೆ ಒಂದು ತಿಂಗಳು...ನನ್ನ ಈ ಎರಡು ಕೂಸುಗಳಿಗೂ ಅಮ್ಮನ ಎದೆ ತುಂಬಿದ ಹಾರೈಕೆಗಳು...
ಒಂದು ತಿಂಗಳಲ್ಲಿ ನಂದಗೋಕುಲ ಹೇಗೆ ಬೆಳೆದಿದೆ..?ಅಂತ ಕೇಳಿಕೊಂಡರೆ ತೃಪ್ತಿಯೆನಿಸುವುದಿಲ್ಲ ಆದರೆ ಆರೋಗ್ಯ ಅಷ್ಟೇನು ಚೆನ್ನಾಗಿಲ್ಲದ ಮಗುವಿನ ಅಮ್ಮನಿಗಿರುವ ಮಿತಿಯನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳುತ್ತೀರೆಂದು ಆಶಿಸುವೆ...
ನಂದಗೋಕುಲದಲ್ಲಿ ಹೊಸ ಹೊಸ ಹಾಡುಗಳನ್ನೂ,ಹಳೆಯ ಅಪರೂಪದ ಗೀತೆಗಳನ್ನೂ ತರುವ ಪ್ರಯತ್ನ ಮಾಡುತ್ತಿದ್ದೇನೆ ಸದ್ಯದಲ್ಲೇ ಅವೆಲ್ಲಾ ನಿಮಗೆ ಕಾಣ ಸಿಗುತ್ತವೆ
ಮಕ್ಕಳಿಗಾಗಿ ಎಂದು ಕನ್ನಡದಲ್ಲಿ ಇರುವ ತಾಣಗಳು ಬಲು ಕಮ್ಮಿ.ಗೆಳತಿ ಮೀರಾಳ
`ನಿಶು ಮನೆ' ಬಿಟ್ಟರೆ ಇನ್ಯಾವುದೂ ನನ್ನ ಕಣ್ಣಿಗೆ ಬಿದ್ದಿಲ್ಲ.ಹಾಗಾಗಿ ಮಕ್ಕಳಿಗಾಗಿರುವ ಕನ್ನಡ ತಾಣವೊಂದರಸ್ವರೂಪ ಹೇಗಿರ ಬೇಕು ಎಂಬುದರಿಂದ ಹಿಡಿದು ಪ್ರತಿ ಅಂಶವೂ ಇಲ್ಲಿ ಸವಾಲೇ...ಸಮಯ ಮತ್ತು ಸಂಪನ್ಮೂಲ ಎರಡೂ ಇಲ್ಲದ ನನ್ನಂತವರಿಗಂತೂ ಇದು ಬಲು ದೊಡ್ಡ ಸವಾಲು!
ಆದರೆ ಕನ್ನಡದ ಕಂದರ ಮೇಲಿನ ಮಮತೆ,ನಿಮ್ಮೆಲ್ಲರ ಉತ್ತೇಜನ ಈ ಎಲ್ಲಾ ಸವಾಲುಗಳನ್ನು ಉತ್ಸಾಹದಿಂದ ಎದುರಿಸಲು ನನಗಿರುವ ಸ್ಪೂರ್ತಿ...
ಇವತ್ತಿನ ವಿಶೇಷ ಅರವಿಂದ ತೆಗೆದ ಒಂದು ಅಪರೂಪದ ಚಿತ್ರ ನಾನು ಬರೆದ ಪದ್ಯದೊಂದಿಗೆ...

ಪಿಳಿ ಪಿಳಿ ಕಣ್ಣು ನೇರಳೆ ಹಣ್ಣು

ಗುಲಾಬಿ ಕೆನ್ನೆ ಜೇನಿನ ದೊನ್ನೆ

ಕುಲು ಕುಲು ನಗೆ ಸಿಹಿ ಸಿಹಿ ಸಜ್ಜಿಗೆ

ಪುಟ್ಟ ಪುಟ್ಟ ಹೆಜ್ಜೆ ಗಿಲಿಲ್ಗಿಲಿ ಗೆಜ್ಜೆ

ಪುಟಾಣಿ ಹೊಟ್ಟೆ ಕನ್ನಂಬಾಡಿ ಕಟ್ಟೆ

ಅಮ್ಮನ ಮುದ್ದೇ...ಮೈಯೆಲ್ಲಾ ಒದ್ದೆ!

Friday, August 24, 2007

My Precious Baby


My Precious Baby
The minute that I saw you
I fell so deeply in love
I was so in awe of you
I swore you were an angel from above.

I love you more and more each day
You bring me so much joy
To me you are an angel
The most special little boy.

I could sit and watch you
Smile and laugh and coo
For hours everyday
I wish I had nothing else to do.

I am writing this just for you
so that you will know
How very much I love you
From the top of your head
To the tip of your toe

No words could ever really express
How much that I love you
How my world is fuller now
And how much that I adore you.
-Unknown

Wednesday, August 22, 2007

ಮಗಳಿಗೊಂದು ಲಾಲಿ ಹಾಡು-೨

ಪುಟಾಣಿ ಆಯುಷಿ

ಪಾರ್ವತಿಯನ್ನು ತೂಗಿದ ಹಾಡು
(ತೂಗೀರೆ ರಾಯರ ಟ್ಯೂನ್ ನಲ್ಲಿ)

  1. ತೂಗಿದಳು ಪಾರ್ವತಿಯ
    ತೂಗಿದಳು ಶಾಂಭವಿಯ
    ತೂಗಿದಳು ಸಿರಿಮೊಗದ ಗಿರಿಜೆಯಾ....
    ತೂಗಿದಳು ಮೇನೆಯು
    ಅರಮನೆಯ ಅರಗಿಣಿಯ
    ತೂಗಿದಳು ಮುದ್ದಾದ ಗೌರೀಯ....





  2. ಬೆಳ್ಳಿಯ ತೊಟ್ಟಿಲಲಿ
    ರೇಶ್ಮೆಯ ಮೆತ್ತೆಯಲಿ
    ಮುದ್ದಾಗಿ ಮಲಗೆಂದು ತೂಗಿದಳು
    ರತ್ನದ ಮೇಲ್‌ ಹೊದಿಕೆ
    ಮುತ್ತಿನ ತೆರೆ ಹಾಕಿ
    ಇಂಪಾಗಿ ಹಾಡುತ್ತಾ...ತೂಗಿದಳು




  3. ಮೊಗವಂತು ಚಂದಿರನು
    ನಗುವಂತು ಮಲ್ಲಿಗೆಯು
    ಬೆಳಕಾಗಿ ಇರುವಳು ಮನೆಗೆಲ್ಲಾ...
    ಮೂರು ಲೋಕದ ಸಿರಿಯು
    ಮನೆ ತನಕ ಬಂದಿತು
    ಮುತ್ತಾಗಿ ತುಂಬಿತು ಮಡಿಲನ್ನ...

ಮಗಳಿಗೊಂದು ಲಾಲಿ ಹಾಡು


ಸೀತೆಯ ಲಾಲಿ ಹಾಡು

ಲಾಲಿ ಲಾಲಿ ಲಾಲಿ ಲಾಲಿ (2 ಸಾರಿ)
ಭೂಜಾತೆ ಸೀತೆಗೆ ಸಿರಿನುಡಿಯ ಲಾಲಿ ।

ಮಿಥಿಲಾದ ಮುತ್ತೀಗೆ ಮುದ್ದಾದ ಲಾಲಿ ।(2 ಸಾರಿ)
ಸಿರಿದೇವಿರೂಪಕ್ಕೆ...ಆ..ಆ..ಆ..ಆ..ಸಿಂಗಾರ ಲಾಲಿ
ಶ್ರೀರಾಮ ರಾಣಿಗೆ ಸವಿನುಡಿಯ ಲಾಲಿ

ಲಾಲಿ ಲಾಲಿ ಲಾಲಿ ಲಾಲಿ (2 ಸಾರಿ)

ಹಾಲ್ಗಡಲಿಂದೆದ್ದವಳೆ ಮಂದಾರ ಲಾಲಿ (2 ಸಾರಿ)
ಹುಣ್ಣಿಮೆಯ ಮೊಗದವಳೆ ಹೂಮಳೆಯ ಲಾಲಿ
ಕಮಲಾಂಗಿ ಸೀತೆಗೇ... ಕಸ್ತೂರಿ ಲಾಲಿ
ಜಲಜಾಕ್ಷಿ ಜಾನಕಿಗೆ ಜಯಜಯವೆ ಲಾಲಿ

ಜೋ...ಜೋ...ಜೋ...ಜೋ...ಜೋ...
ಮಿಥಿಲೇಶ ಜನಕನದು ಮೆಲು ಮಾತ ಲಾಲಿ (2 ಸಾರಿ)
ಸುಮೇಧದೇವಿಯದು ಸಂಗೀತ ಲಾಲಿ

ವೇದವತಿ ಅಂಶಜೆಗೆ ವೇದ-ನಾದ ಲಾಲಿ
ಸುರ ಸಾಧು ಪೂಜಿತೆಗೆ ಜಯಜಯವೀ... ಲಾಲಿ

*******************

ಹೆಣ್ಣುಮಗುವಿನ ಬಗ್ಗೆ ನಮ್ಮ ಸಮಾಜದಲ್ಲಿರುವ ತಾತ್ಸಾರವನ್ನೂ ,ತಣ್ಣನೆಯ ಕ್ರೌರ್ಯವನ್ನೂ ಹಾಸ್ಯದ ಲೇಪನದೊಂದಿಗೆ ಹೇಳುವ ಪ್ರಯತ್ನ ಮಾಡಿ ನಾನು ಬರೆದ ಕಥೆ ಮಗಳಿಗೊಂದು ಲಾಲಿ ಹಾಡು ಹೆಣ್ಣುಮಗುವಿಗೆ ನಮ್ಮಲ್ಲಿ ಸಾಕಷ್ಟು ಲಾಲಿ ಹಾಡು ಏಕಿಲ್ಲ ಎಂಬ ಪ್ರಶ್ನೆ ಎತ್ತಿ ಎರಡು ಲಾಲಿ ಹಾಡುಗಳನ್ನು ಕಥೆಯಲ್ಲಿ ಸೇರಿಸಿದ್ದೆ. ಅವುಗಳಲ್ಲೊಂದು ಈ "ಸೀತೆಯ ಲಾಲಿ ಹಾಡು" ಇದು ಸ್ವಾತಿಮುತ್ತು ಚಿತ್ರದ 'ಶ್ರೀಚಕ್ರಧಾರಿಗೆ' ಟ್ಯೂನ್ ನಲ್ಲಿದೆ
*******************
ಚಿತ್ರ-ಸ್ವಾತಿ ಮುತ್ತು
ಗಾಯಕಿ-ಚಿತ್ರ
ಹಾಡು ಕೇಳಿ

ಲಾಲಿ ಲಾಲಿ ಲಾಲಿ ಲಾಲಿ
ಶ್ರೀಚಕ್ರಧಾರಿಗೆ ಶಿರ ಬಾಗಿ ಲಾಲಿ
ಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ

ಕಲ್ಯಾಣರಾಮನಿಗೆ ಕೌಸಲ್ಯ ಲಾಲಿ
ಯದುವಂಶ ವಿಭುವಿಗೆಯಶೋದೆ ಲಾಲಿ
ಪರಮೇಶ ಸುತನಿಗೆ ಪಾರ್ವತಿಯ ಲಾಲಿ
ಧರೆಯಾಳೊವಾತನಿಗೆ ಶರಣೆಂಬೆ ಲಾಲಿ

ಜೋ ಜೋ ಜೋ ಜೋ

ಶ್ರೀಕನಕದಾಸರದು ಕೃಷ್ಣನಿಗೆ ಲಾಲಿ
ಲಿಂಗಕ್ಕೆ ಜಂಗಮರ ವಚನಗಳ ಲಾಲಿ
ವೇದವೇದ್ಯರಿಗೆ ವೇದಾಂತ ಲಾಲಿ
ಆಗಮ ನಿಗಮವೆ ಲಾಲೀಗೆ ಲಾಲಿ

Tuesday, August 21, 2007

Little Boys


Why God Made Little Boys

God made the world out of His dreams
Of magic mountains, oceans and streams,
Prairies and plans and wooded land,
Then paused and thought “I need someone to stand
On top of mountains, to conquer the seas,
Explore the plains and climb the trees.
Someone to start out small and to grow,
Sturdy, strong as a tree…” And so,
He created boys, full of spirit and fun,
To explore and conquer, to romp and run.
With dirty faces and banged up chins,
With courageous hearts and boyish grins.
When He had completed the task He’d begun
He surely said “A job well done”
-Un known

Monday, August 20, 2007

ಯಾಕಳುವೆ ಎಲೆ ರಂಗ...



ಅಳುವ ಕಂದನ ತುಟಿಯು ಹವಳಾದ ಕುಡಿ ಹಂಗ


ಕುಡಿ ಹುಬ್ಬು ಬೇವಿನ ಎಸಳ್ಹಂಗ


ಕಣ್ಣೋಟ ಶಿವನ ಕೈಯಲುಗು ಹೊಳೆದಂಗ...


ಜೋ...ಜೋ... ಜೋ...



ಹಾಲ್ಬೇಡಿ ಅತ್ತಾನ,ಕೋಲ್ಬೇಡಿ ಕುಣಿದಾನ


ಮೊಸರ್ ಬೇಡಿ ಕೆಸರಾ ತುಳಿದಾನ


ಕಂದಯ್ಯನ ಕುಸುಲಾದ ಗೆಜ್ಜೆ ಕೆಸರಾಯ್ತು...


ಜೋ...ಜೋ... ಜೋ...


ಅತ್ತಾರೆ ಅಳಲವ್ವ ಈ ಕೂಸು ನಮಗಿರಲಿ


ಕೆಟ್ಟಾರೆ ಕೆಡಲಿ ಮನೆಗೆಲಸ ಹೊರೆಗೆಲಸ


ಮಕ್ಕಳಿರಲವ್ವ ನಿನ್ನಂಥಾ...


ಜೋ...ಜೋ... ಜೋ...


ಮಕ್ಕಳಾಟವು ಚೆಂದ ಮತ್ತೆ ಯೌವನ ಚೆಂದ


ಮುಪ್ಪಿನಲಿ ಚೆಂದ ನೆರೆಗಡ್ಡ


ಜಗದೊಳಗೆ ಎತ್ತ ನೋಡಿದರೂ ನಗು ಚೆಂದ


ಜೋ...ಜೋ... ಜೋ...


ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೇನು


ನಾಕೆಮ್ಮೆ ಕರೆದ ನೊರೆಹಾಲು ಸಕ್ಕರೆ


ನೀ ಕೇಳಿದಾಗೆಲ್ಲ ಕೊಡುವೇನೂ...


ಜೋ...ಜೋ... ಜೋ...


ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ


ಕೂಸು ಕಂದಯ್ಯ ಒಳ ಹೊರಗ ಆಡಿದರ


ಬೀಸಣೀಗೆ ಗಾಳೀ ಸುಳಿದಾವೂ...


ಜೋ...ಜೋ... ಜೋ...


Sunday, August 19, 2007

Baby Nagarjuna


  • A cute baby boy
    To cuddle and squeeze,
    To pamper and play with
    And bounce on your knees...

Saturday, August 18, 2007

Little baby dear, good night


Little Baby
LITTLE baby, lay your head
On your pretty cradle bed;
Shut your eyes at close of day;
Now the light is gone away.
All the cloths are tucked in tight
Little baby dear, good night.
-Jane Taylor

Friday, August 17, 2007

ತಾಚಿ ಪಾಪು ತಾಚಿ


ಹೂ ಪಕಳೆ ಮುಚ್ಚಿತು

ತಾಚಿ ಪಾಪು ತಾಚಿ
ಈ ಹೂ ಪಕಳೆ ಕಣ್ಣಲೊಂದು
ಕನಸು ಬರಲಿ.. ತಾಚಿ
ತಾಚಿ ಪಾಪು ತಾಚಿ


ತಾರೆಗಳು ಮಿನುಗಿವೆ
ತಾಚಿ ಪಾಪು ತಾಚಿ
ಈ ಮಿನುಗು ಕಣ್ಣಲೊಂದು
ಕನಸು ಬರಲಿ.. ತಾಚಿ
ತಾಚಿ ಪಾಪು ತಾಚಿ


ಚಂದ್ರಮನು ನಗುತಿರುವ
ತಾಚಿ ಪಾಪು ತಾಚಿ
ಈ ಮುದ್ದು ಕಣ್ಣಲೊಂದು
ಕನಸು ಬರಲಿ.. ತಾಚಿ

ತಾಚಿ ಪಾಪು ತಾಚಿ

-ಮಾಲಾ ರಾವ್

Thursday, August 16, 2007

hello doc...


sachu treating his pet...!
photo by his mom jomol.

Wednesday, August 15, 2007

Amartya with Dr. Menon

  1. . Miracle Child
Not so many days ago,
a remarkable delivery was made,
and I'd like to thank that doctor,
for the magical role that she's played.
There are heroes that have sailed the oceans,
and those that have fought a raging fire.
There are heroes that have climbed mountains,
climbing ever higher and higher.
But there's not a feat in this world,
that could possibly compare to what you've achieved,
and every time I look into Amartya's face,
there, facing me, is a dream to be believed.
Without your quick thinking,
I know we wouldn't have our son,
and of all the doctors in the world,
I'm really glad that you were the one.
There was definitely a presence in that room,
and maybe you had an unseen helping hand,
but it was your presence of mind that saved the day,
when things didn't exactly go as planned.
May 25th will always be a magical day,
because you not only saved a son,we gained a lifelong friend,
and I will be eternally grateful to you,
until my journey's end.
And the photo of you and Amartya,
tells the story without the need of narration;
Amartya smiling at you with gratitude,
and what can only be described as admiration.
I want to thank you Doctor Menon,
for not only your remarkable daring,
but I want to thank you for being the woman that you are,
personable,loving and very caring.
You've made such a difference to us,
I'm so glad it was your number that I dialed,
because I sincerely believe, that without you,
I would've never got to hold my miracle child.
*************************
Dr Prasanna Menon has been with us thru the journey of Amartya being born and delivered him.we
are ever thankful to her for being there for us.
**************************
I got this touchy poem in web and I just altered it a little to convey our heartfelt gratitude
to Dr Menon.

ಪುಟಾಣಿ...ಬಟಾಣಿ...


ಅಪ್ಪ ನನ್ನ ಕರೆಯೋದು ಹಾಗೇ..."ಪುಟಾಣಿ...ಬಟಾಣಿ" ಅಂತಾ...

Tuesday, August 14, 2007

`Aakriti' - our little angle


Aakriti is our little angle who has brought immense happiness and joy in our lives. When she came in this world, we were undergoing a tough time with both her grand parents on bed but she never gave us any trouble as if she was born with all the understanding and knowledge.
She is a bright child and loves going to school and reading books. She likes to a big Didi (sister) for younger kids and wanted to bring Amartya home.
She was willing to do all his chores.
She likes playing out with other kids and misses all her evening friends in India who used to play with her in ground. She has always been famous among our neighbours, more than me as she is a chatterbox and loves to talk. Dance is her favorite time pass. And like all girls she loves to apply all her mommy's makeup and dress like her mommy.
- photo & script by her mom Vandana Rupesh

ನನ್ನ ಮುದ್ದು ಚಿಲಿಪಿಲಿ ಗಿಳಿಯೇ...


ಹಾಡು ಕೇಳಿ

ಕವನ-ಎನ್.ಎಸ್.ಲಕ್ಶ್ಮೀನಾರಾಯಣ ಭಟ್ಟ
ಗಾಯಕಿ-ರತ್ನಮಾಲ


ನನ್ನ ಮುದ್ದು ಚಿಲಿಪಿಲಿ ಗಿಳಿಯೇ
ಬಂಗಾರ ತುಂಬಿದ ಗಣಿಯೇ
ಹೂನಗೆ ಅರಳಿದೀ ಮುಖಕೆ
ಹುಣ್ಣಿಮೆ ಆಕಾಶ ಎಣೆಯೇ


ಹೇಗಿರದೆ ನೀನಿದ್ದೆ ಮಗುವೇ
ಕತ್ತಲಾಗಿತ್ತಲ್ಲೆ ಜಗವೇ
ನೀ ಬಂದು ನಗಲು ಈ ಇಳೆಗೇ
ಹರಿದಿದೆ ಬೆಳಕಿನ ಹೊಳೆಯೇ


ರಸಹೀನವಾಗಿತ್ತು ಬಾಳು
ಈಗ ಮೊಸರು,ಹಾಲು,ಬೆಣ್ಣೆ,ಜೇನು
ಹಾಳು ಸುರಿಯುತ್ತಿದ್ದ ಹಾದಿ
ಈಗ ದೇವರ ಉತ್ಸವದ ಬೀದಿ


ಜನ್ಮ ಜನ್ಮದ ಪೂಜೆ ಫಲಿಸಿ
ದೇವರೇ ಬಂದರೋ ಹರಸಿ
ಬರೆದಿತ್ತ ತೋಳಿನ ತುಂಬ
ಉಡುಪಿ ಕೃಷ್ಣನ ಮುದ್ದು ಬಿಂಬ

ಜೋ ಜೋ ಜೋ ಜೋ ಜೋ ಜೋ

Monday, August 13, 2007

Is it a Toy?

`is it a toy...? a doll?' Anish curiously asked his mom when he met ammu for the first time.
it was not his fault ammu looked more like a tiny doll than a baby,as he came out almost a month early to his due date

Sunday, August 12, 2007

A Miracle

Precious one,

So small,So sweet
Dancing inon angel feet

Straight from Heaven's

brightest star
What a miracle

you are!

A Miracle

Precious one,
So small,
So sweet
Dancing in
on angel feet
Straight from Heaven's
brightest star
What a miracle
you are!
-Unknown

ತೊಟ್ಟಿಲ ಹಾಡು

ಹಾಡು ಕೇಳಿ
ಕವನ-ಕೆ ಎಸ್ ನ
ಗಾಯಕಿ-ಸುಲೋಚನ


ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೇ
ಜೋಜೋಜೋಜೋ....
ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರು
ನಿದ್ದೆ ಬರುವಳು ಕದ್ದು ಮಲಗು ಮಗುವೇ
ಜೋಜೋಜೋಜೋ....



ಮಲಗು ಚೆಲ್ವಿನ ಸಿರಿಯೇ
ಮಲಗು ಒಲ್ಮೆಯ ಸಿರಿಯೇ
ಮಲಗು ತೊಟ್ಟಿಲ ಸಿರಿಯೇ
ದೇವರಂತೆ
ಮಲಗು ಮುದ್ದಿನ ಗಿಣಿಯೆ
ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಹೋಗುವೆಯಂತೆ


ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು
ಹೂವ ಮುಡಿಸುವರಂತೆ
ಹಾಲ ಕುಡಿಸುವರಂತೆ
ವೀಣೆ ನುಡಿಸುವರಂತೆ ಸುತ್ತ ನೆರೆದು


ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ

Wednesday, August 8, 2007

ನಮ್ಮ ಪಾಪ

ನಮ್ಮ ಮನೆಯ ಸಣ್ಣ ಪಾಪ

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳದೆ ಹೋದರದಕೆ ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ ಕಿರುಚಿ ಕೊಳುವುದು
ಕಿರುಚಿ ಕೊಂಡು ತನ್ನ ಮೈಯ್ಯ ಪರಚಿ ಕೊಳುವುದು

ಮೈಯ್ಯ ಪರಚಿ ಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು

ಪಾಪ ಅತ್ತರಮ್ಮ ತಾನು ಅತ್ತು ಬಿಡುವಳು
ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು

ಪಾಪ ಪಟ್ಟು ಹಿಡಿದ ಹಟವು ಸಾರ್ಥವಾಯಿತು
ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು

-ಜೆ.ಪಿ.ರಾಜರತ್ನಂ

Tuesday, August 7, 2007

Monday, August 6, 2007

ಅಮ್ಮ ನನ್ ಕಿವಿ ಕತ್ತರಿಸ್ತಾಳಂತೆ...

ಮಗು ಕಿವಿಯೆಲ್ಲಾ ಕತ್ತರಿಸಿದ್ದೆ ಆದ್ರೂ ನೋಡೂ...' ನಾನೊಂದು ಮಧ್ಯಾನ್ಹ ಅರವಿಂದನ ಹತ್ರ ಹೇಳಿದೆ

`ಕಿವಿ ಕತ್ತರಿಸಿದ್ಯಾ...? ಅವನು ಆಲ್ಮೋಸ್ಟ್ ಕಿರುಚಿದ

ಹೂಂ ...ಆದ್ರೂ ಹ್ಯಾಗ್ ಪರ್ಚ್ ಕೊಂಡಿದಾನೆ ನೋಡೂ...'


ಮರು ಘಳಿಗೆ ನನ್ನ ತಲೆ ಡಬ್ ಅಂತ ಸೋಫಾ ಕಟ್ಟಿಗೆ ಬಡಿಯಿತು

ತಲೆ ಉಜ್ಜಿಕೊಳ್ಳುತ್ತಾ ನೋಡಿದರೆ ಎದುರಿಗೆ ಎರಡೆರಡು ಅರವಿಂದ ಮತ್ತು ಅಮ್ಮು ಮತ್ತವನ ಅವಳಿ ಬ್ರದರ್ ಕಂಡರು!

ಅಂದಹಾಗೆ ನಮ್ಮನೇಲಿ ಪ್ರತಿ ರಾತ್ರಿಯೂ ಶಿವರಾತ್ರಿ!!