Tuesday, March 24, 2009

ಇಗೊಳ್ಳಿ ನಿಮಗೊಂದು ಹೂ...

ಕಿಟ್ಟಣ್ಣನೂ ಇತ್ತೀಚೆಗೆ ಹೂಪ್ರೇಮಿಯಾಗುತ್ತಿದ್ದಾನೆ ಅಮ್ಮನ ತರ...ಅಥ್ವಾ ಅವನ ಅಜ್ಜಿ ತಾತನ ತರ..!



ಅವನು ಸಾಮಾನ್ಯವಾಗಿ ಯಾವ ಹೂವನ್ನೂ ಕೀಳುವುದಿಲ್ಲವಾದರೂ
ಈ ಪುಟಾಣಿ ನೀಲಿಹೂ ಏಕೋ ಅವನ ಮನಸೆಳೆದು ಬಿಟ್ಟಿತು



ಇಗೊಳ್ಳಿ ನಿಮಗೂ ಒಂದು ಹೂ...

Tuesday, March 17, 2009

ಫುಟ್ ಬಾಲೂ ಇಷ್ಟ...!




ಅಮ್ಮುವಿನ ಇಷ್ಟಗಳ ಲಿಸ್ಟ್ ನಲ್ಲಿ ಬಾಲ್ಗೆ ಜಾಗ ಕೊಡದೇ ನಡೆಯುವುದಿಲ್ಲ
ಇಪ್ಪತ್ತಕ್ಕಿಂಥಾ ಜಾಸ್ತಿ ಬೇರೆ ಬೇರೆ ಸೈಜಿನ ಕಲರ್ ನ ಟೆಕ್ಚರ್ ನ ಬಾಲುಗಳಿವೆ ಅಮ್ಮುವಿನ ಹತ್ರ...
ಕತ್ತಲಲ್ಲಿ ಹೊಳೆವ ಬಾಲೂ, ಫೇರಿಗಳ ಚಿತ್ರಗಳಿರುವ ಬಾಲೂ ಅಂಗೈನಲ್ಲಿ ಇಡಿಯಬಹುದಾದ ಬಾಲೂ ಎಲ್ಲಾ ಸೇರಿ....
ಅವನು ಚಿತ್ರದಲ್ಲಿ ಆಡುತ್ತಿರುವ ಬಾಲು ಲೆದರ್ ದಲ್ಲ ಬದಲಿಗೆ ಬಟ್ಟೆಯದ್ದು...!

Thursday, March 12, 2009

ಇವೂ ನನಗಿಷ್ಟ..!

ಅಮರ್ತ್ಯನಿಗೆ ಕೊಚ್ಚೆ ಮಾತ್ರ ಇಷ್ಟ ಎಂದು ಅಂದು ಕೊಳ್ಳಬೇಡಿ...
ಅವನ ಇಷ್ಟದ ಲಿಸ್ಟ್ನಲ್ಲಿ ಖಂಡಿತಾ ಬರುವುದು ಅವನ ವಿವಿಧ ಟ್ರಕ್ ಗಳು
Articulated Dump Truckಗಳು
ಬೇರೆ ಬೇರೆ ಸೈಜಿನ Bulldozer ಗಳು
CAT ನವರ Wheel Loader
CAT ನ small Excavator
ಇವೆಲ್ಲಾ ಅವನಿಗೆ ತುಂಬಾ ಇಷ್ಟ

Tuesday, March 10, 2009

ಕೊಚ್ಚೆ ಅಂದ್ರೇ ನನಗಿಷ್ಟ...!

ನಾನೀಗ big boy ಆಗೀದೀನಿ ಸೋ ಅಪಾರ್ಟ್ಮೆಂಟ್ ಒಳಗೇ ನಡೀವಾಗ ನೀನು ನನ್ನ ಕೈ ಹಿಡಕೊಳ್ಳಬೇಡ ಅನ್ನೋದು ಕಿಟ್ಟಣ್ಣನ
ಇತ್ತೀಚಿನ ಡಿಮ್ಯಾಂಡು ಮಳೆ ಬಂದ ಕಳೆದವಾರ ಸ್ವಲ್ಪ ಮಳೆ ಬಿಡುವು ಕೊಟ್ಟಾಗ ನಾವಿಬ್ಬರೂ ವಾಕಿಂಗ್ ಗೆ ಹೊರಟೆವು
ಸರಿ ಇಲ್ಲೇನೂ ಗಾಡಿಗಳು ಬರುವುದಿಲ್ಲವಲ್ಲ ಅಂತ ನಾನು ಅವನನ್ನು ಪ್ರೀ ಬಿಡೋಣವೆಂದು ಯೋಚಿಸುತ್ತಿರುವಾಗಲೇ ಅವನು ನನ್ನಿಂದ ಕೊಸರಿಕೊಂಡು ಓಡಿಯಾಗಿತ್ತು ನಾನೂ ಅದೂ ಇದೂ ಕ್ಲಿಕ್ಕಿಸುತ್ತಾ ತೆಗೆದ ಅಮ್ಮುವಿನ ಒಂದೆರಡು ಚಿತ್ರಗಳು...











ಅಮ್ಮ ಹಕ್ಕಿ ಹೂಗಳ ಚಿತ್ರ ತೆಗೆಯುತ್ತಾ ಬಿಸಿಯಾಗಿದ್ದಾಳೆಂದು ಕಿಟ್ಟಣ್ಣ ಮಾಡ ಹೊರಟ ತರಲೆ..!




ಮೆಲ್ಲಗೆ ಮಳೆನೀರಲ್ಲಿ ಕಾಲಿಟ್ಟು.....



ಪಚ ಪಚ ಅಂತ ಕುಣಿಯುವುದು.....
ಅಷ್ಟರಲ್ಲಿ ನಾನು ಒಂದು ಬಿಸಿ ಬಿಸಿಯಾಗಿ ಕೊಟ್ಟಿದ್ದರಿಂದ ಶಂಖವಾದ್ಯ ಶುರುವಾದ ಪ್ರಯುಕ್ತ ಮುಂದಿನ ಫೋಟೋಗಳಿಲ್ಲ...!

Tuesday, March 3, 2009

AMARTYA AND SIMBA

Amartya loves to interact with animals He never scared or hesitated whenever we showed him any new animal.He called a Raccoon "baby...." and wanted a heavy cat on his lap..! As a result we are very regular visitors to animal farms around bay area
Here are some Snaps Amartya playing with one of our friend's dog named 'SIMBA'



























Posted by Picasa
Posted by Picasa
Posted by Picasa
Posted by Picasa