Showing posts with label ಫೋಟೋ ಕಾಮಿಕ್ಸ್. Show all posts
Showing posts with label ಫೋಟೋ ಕಾಮಿಕ್ಸ್. Show all posts

Thursday, September 11, 2008

ಗಿಂಡಿ Vs ವಾಟರ್ ಬಾಟಲ್

ಬಾಟಲ್ ನನ್ನ ಒಲವಿನ ವಾಟರ್ ಬಾಟಲ್...

**********
ನನಗಾಗ ಸುಮಾರು ನಾಲ್ಕು ವರ್ಷವಿರಬಹುದು.
ಒಂದು ದಿನ ಅಟ್ಟದಲ್ಲಿ ಏನೋ ಹುಡುಕುತ್ತಿದ್ದ ಅಮ್ಮ ಹಳೆ ಪಾತ್ರೆಗಳ ನಡುವೆ ಸುಖವಾಗಿ ಮಲಗಿದ್ದ ಸಣ್ಣ ಗಿಂಡಿಯೊಂದನ್ನು ಅಪ್ಪಿ ತಪ್ಪಿ ಹೊರ ತೆಗೆದು ಹಾಕಿಬಿಟ್ಟರು ಮತ್ತು ಆ ಪಾಪದ ಪ್ರಾಣಿ ನನ್ನ ಕಣ್ಣಿಗೆ ಆಕ್ಷಣ ಬಿದ್ದು ಬಿಟ್ಟಿತು
ಶುರುವಾಯಿತಲ್ಲ ಆ ಗಿಂಡಿಗೆ ಶನಿ ದೆಸೆ...

"ಗಿಂಡಿ ತುಂಬಾ ಪುಟ್ಟ ಪಾಪುಗಳು ಹಾಲು ಕುಡಿಯುವುದು ಕಣೆ" ಅಂತ ಅಮ್ಮ ಎಷ್ಟೆಷ್ಟು ಸಮಜಾಯಿಸಿದರೂ ಕೇಳದೆ ನಾನು ಇನ್ನು ಮೇಲೆ ಗಿಂಡಿಯಲ್ಲೇ ಹಾಲು ಕುಡಿಯುವುದು ಅಂತ ಹಟಮಾಡತೊಡಗಿದೆ
ಅಷ್ಟೊತ್ತಿಗೆ ನನ್ನ ತಂಗಿ ಕೂಡಾ ಲೋಟದಲ್ಲಿ ಕುಡಿಯಲು ಶುರು ಮಾಡಿದ್ದಳೆಂದರೆ ಮನೆಯವರಿಗೆಲ್ಲಾ ನನ್ನ ಹಟ ಎಷ್ಟು ತಮಾಶೆ ಎನ್ನಿಸಿರಬೇಡ...!

`ಸರಿ ಕುಡ್ಕೋ ಹೋಗ್' ಅಂತ ಅಮ್ಮ ಸುಮ್ಮನಾಗಿ ಬಿಟ್ಟರು
ಆ ಗಿಂಡಿಯಲ್ಲಿ ಹಾಲು ಹಾಕಿದರೆ ಅದು ಸೋರಲು ಶುರವಾಗಬೇಕೇ..?
ನಾನು ಬಿಡುತ್ತೇನೆಯೇ...ಗಿಂಡಿ ತಳದಲ್ಲಿ ಒಂದು ತಟ್ಟೆ ಇರಿಸಿಕೊಂಡು ಕುಡಿಯಲೆತ್ನಿಸಿದೆ
ಹೇಳೀ ಕೇಳಿ ಅದು ಪಾಪುಗಳು ಕುಡಿಯುವ ಗಿಂಡಿ ಒಂದು ಸಾರಿಗೆ ಕಾಲು ಲೋಟ ಹಾಲು ಹಿಡುಸುತ್ತಿತ್ತು ಅಷ್ಟೇ
ಹಾಕಿದ ಹಾಲೆಲ್ಲಾ ಸುರಿದು ಹೋದರೆ ಒಂದು ಲೋಟ ಹಾಲು ಕುಡಿಯಲು ನಾನೆಷ್ಟು ಶ್ರಮ ಪಟ್ಟಿರಬಹುದು ಯೋಚಿಸಿ..
ನಾನು ಛಲ ಬಿಡದ ತ್ರಿವಿಕ್ರಮನಂತೆ ಆ ತೂತು ಗಿಂಡಿಯಲ್ಲೇ ಹಾಲು ಕುಡಿಯತೊಡಗಿದೆ
ನನ್ನ ಗಿಂಡಿ ಹುಚ್ಚು ಎಲ್ಲಿಗೆ ಹೋಯಿತೆಂದರೆ ಗಿಂಡಿಯಲ್ಲಿ ನೀರು ತುಂಬಿಕೊಂಡು ದಿನವೆಲ್ಲಾ ಕುಡಿಯಲು ಶುರು ಮಾಡಿದೆ
ಕೊನೆಗೆ ನೀರು ಕುಡಿದೂ ಕುಡಿದೂ ರಾತ್ರಿ ಹೊಟ್ಟೆ ನೋವು ಬಂತು
ನಾನು ಗಿಂಡಿಗೆ ಬೈ ಬೈ ಹೇಳಿದ್ದು ಹೀಗೆ...
***********


ಹಾಲಿಗಿಂಥ ನೀರೇನೇ ಚಂದವೂ....
ತುತ್ತು ಅನ್ನತಿನ್ನದೇ ಇದ್ದರೂ ಹತ್ತು ಬಾಟಲ್ ನೀರು ಕುಡಿಯಿರಿ...
ಕಾವೇರಿಗೇ ಜೈ...

ಯಾರೇ ಕೂಗಾಡಲೀ...
ನೀರೇ ನಿನಗೆ ಸಾಟಿ ಇಲ್ಲ...
ಅರೆ ಹೊಯ್ ಅರೆ ಹೊಯ್
ಟುರ್ ಬ್ಯಾ.....
**************
ಆರವ್ ಹತ್ತಿರ ಇದ್ದ ವಾಟರ್ ಬಾಟಲ್ ನೋಡಿ ಅಮರ್ತ್ಯ ತುಂಬಾ ಆಸೆ ಪಟ್ಟಿದ್ದರಿಂದ ಅವನಿಗೂ ವಾಟರ್ ಬಾಟಲ್ ಕೊಡಿಸಿದ್ದೇವೆ
ಮೂರು ದಿನದಿಂದ ಏನೂ ತಿನ್ನದೆ ಹಾಲು ಕೂಡಾ ಕುಡಿಯದೆ ಬರೀ ನೀರು ಕುಡಿಯುತ್ತಿದ್ದಾನೆ
`ಸರಿ ಕುಡ್ಕೋ ಹೋಗ್' ಅಂತ ಬಿಟ್ಟು ಬಿಡಲು ನನಗೇಕೋ ಆಗುತ್ತಿಲ್ಲ
ಇವನಿಗೆ ಹೊಟ್ಟೆ ನೋವು ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೇನೆ
ಅವನು ಘಳಿಗೆಗೊಂದು ಸಾರಿ ಉಚ್ಚೆ ಮಾಡಿಕೊಂದು ನನ್ನನ್ನು ಸತಾಯಿಸುತ್ತಿದ್ದಾನೆ.

Friday, July 25, 2008

ಅಮರ್ತ್ಯ ಕುಮಾರಿಯವರಿಂದ ಹೊಸ ಪಕ್ಷ ಸ್ಥಾಪನೆ

(ತೆರೆ ತೆರೆದಾಗಿನ ದೃಶ್ಯ)
(ಅಮರ್ತ್ಯಕುಮಾರಿಗೆ ಕೋಪ ಬಂದಿದೆ.......)

ಅಮ್ಮ ಯಾವಾಗ್ಲೂ ಅದು ತಿನ್ನು ಇದು ತಿನ್ನು ಅಂತಿರ್ತಾಳೆ....



(ಕುಮಾರಿ ದಪ್ಪ ಮುಖ ಮಾಡಿಕೊಂಡು ಸುಖಾಸನದ ಮೂಲೆಯಲ್ಲಿ ಕೂತಿದ್ದಾಳೆ )
ಬುಂ...ಬುಂ....


ಆಗ ಅಲ್ಲಿಗೆ ಬಂದಿದ್ದು ಒಂದು ದಷ್ಟ ಪುಷ್ಟ ವಾದ ಮಾರ್ಜಾಲ...!
ಅಮರ್ತ್ಯ ಕುಮಾರಿಯು ನಗು ಮುಖದಿಂದ ಹೊಸ ಉಪಾಯವೊಂದನ್ನು ಯೋಚಿಸಿ ಕೊಂಡವಳಾಗಿ ಬಿಲ್ಲಿ ರಾಜನನ್ನು ಮಾತನಾಡಿಸುತ್ತಾಳೆ



ಯೂ...ಬೆಕ್ಕು ರೇಖಾ.... ಇದೀಗ ಹೊಳೆಯಿತು ಪರಿಹಾರ....ತಡಿ ಬಂದೆ.....



ಊಊಊಊಊಊಊಊಊಊಊಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್




ತಡಿ.... ತಡಿ...... ಮೀಈಈಈಈಈಈಈಈಈಈಈಈಈಈಯಾಆಆಆಆಆಆ ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್
ಇಳಿತಿದೀನಿ .......


ಧಮ್...ಧಡಮ್...ಧಡಮ್.....(ಅಂತೂ ವಿಮಾನ ಲ್ಯಾಂಡ್ ಆಯಿತು...)



ನನ್ನ ಯೋಚನೆ ಯೋಜನೆ ಏನು ಅಂದ್ರೆ......
ನಾನೊಂದು ಹೊಸ ಪಕ್ಷ ಮಾಡುತ್ತಿದ್ದೇನೆ
"ಊಟ ಬೇಡ" ಪಕ್ಷ
ಮಕ್ಕಳಿಗೆ ಊಟ ಮಾಡಿಸುವ ಅಪ್ಪ ಅಮ್ಮನಿಗೆ ಧಿಕ್ಕಾರ....!

ನೀವೂ ನಂ ಪಕ್ಷ ಸೇರ್ತೀರೇನೂ....?
ಬನ್ನಿ ...ಬನ್ನಿ...
ನಮ್ಮ ಪಕ್ಷ ಸೇರಿದರೆ ನೀವು.....
ಊಟ ಮಾಡಬೇಕಿಲ್ಲ
ಹಾಲು ಕುಡಿಯ ಬೇಕಿಲ್ಲ
ಹಣ್ಣು ,ತರಕಾರಿ ಹತ್ತಿರ ಸಹ ಹೋಗಬೇಕಿಲ್ಲ
ನಮ್ಮ ಪಕ್ಷಕ್ಕೆ ನಿಮ್ಮ ಭಯಂಕರ ಬೆಂಬಲ ನೀಡಿ
ಊಟ ಮಾಡದಿರುವದು ನಮ್ಮ ಜನ್ಮಸಿದ್ದ ಹಕ್ಕು
and we shall have it.....
(ಅಸಂಖ್ಯಾತ ಬೆಂಬಲಿಗರು ಅಮರ್ತ್ಯ ಕುಮಾರಿಯವರ ಹೊಸ ಪಕ್ಷ ಸೇರಲು ತುದಿಗಾಲಲ್ಲಿ ಅಂಬೆಗಾಲಿಡುತ್ತಾ, ತಪ್ಪು ಹೆಜ್ಜೆ ಇಟ್ಟು ಬೀಳುತ್ತಾ ಏಳುತ್ತಾ ತಮ್ಮ ಬೆಂಬಲ ಸೂಚಿಸುತ್ತಿರಲು ತೆರೆ ನಿಧಾನವಾಗಿ ಬೀಳುತ್ತದೆ)

Saturday, June 21, 2008

ಒಂದು ಎರಡು....

ನಿಂಗೆ ಎಷ್ಟ್ ಹಲ್ಲು ಬಂದಿದೆ ಅಂತ ಕೇಳ್ತಿದೀರಾ...?



ಕಚ್ಚಿ ತೋರಿಸಲೋ ಸುಮ್ನೆ ಹಾಗೇ ತೋರಿಸಿದರೆ ಸಾಕೋ...?


ಇಗೊಳ್ಳಿ...ಏಣಿಸಿಕೊಳ್ಳಿ...ಹಲ್ಲು ನೋಡಿದ್ದಕ್ಕೆಈ ಡಬ್ಬ ತುಂಬಾ ಚಾಕ್ಲೇಟ್ ಕೊಡ್ಬೇಕೂ...(ದಾಂತ್ ದಿಕಾಯಿ!)


ಏಣಿಸೋಕೆ ಬರಲ್ವಾ...? ಒಂದು, ಎರಡು,ಮೂರು ,ನಾಲ್ಕು, ಐದು,ಆರು... ಗೊತ್ತಾಯ್ತಾ...?
ಬನ್ನಿ ಸಲ್ಪ ಕಚ್ಚಿ ನೋಡ್ತೀನಿ....

Monday, May 26, 2008

ಅಮ್ಮುವಿನ ಮೊದಲ ಹುಟ್ಟು ಹಬ್ಬ

ನೆನ್ನೆ ಅಮ್ಮುವಿನ ಹುಟ್ಟಿದ ಹಬ್ಬವನ್ನು ನಾವು "ಅವನ ದಿನ"ವಾಗಿ ಕಳೆಯಲು ನಿರ್ಧರಿಸಿದೆವು ಅತಿಥಿಗಳ ನಡುವೆ ನಾವು ಕಳೆದು ಹೋಗಿ ಅಮ್ಮು ರಚ್ಚೆ ಹಿಡಿಯುವುದು ಬೇಡ ಎಂದು... ಏಕೈಕ ಅತಿಥಿ ಇಂಡಿಯಾದಿಂದ ನಮ್ಮಲ್ಲಿಗೆ ಬಂದಿದ್ದ ನಮ್ಮ ಕಸಿನ್
ಅಮ್ಮುವನ್ನು "ಜಿಂಬೂರಿ' ಎಂಬ ಮಕ್ಕಳ, ಅದರಲ್ಲೂ ಅವನದೇ ವಯಸ್ಸಿನ ಮಕ್ಕಳ ಹಾಡು ಕುಣಿತದ ಜಾಗಕ್ಕೆ ಬೆಳಗ್ಗೆ ಕರೆದು ಕೊಂಡು ಹೋದೆವು. ನಂತರ ಸ್ಟಿವನ್ಸ್ ಕ್ರೀಕ್ ಪಾರ್ಕ್ ಗೆ.ಸಂಜೆ ಮನೆಯಲ್ಲೇ ಪುಟಾಣಿ ಕೇಕ್ ಕಟ್ ಮಾಡಿಸಿದೆವು
ಅಮ್ಮು ಅವನ ದಿನವನ್ನು ಮಜವಾಗಿ ಕಳೆದ....

ಬಾಲ್ ಬೇಕ ಬಾಲ್ ಢಮರುಗದ ಮೇಲೆ ಆಸೀನನಾಗಿ ನಲಿಯುತ್ತಿರುವ ಅಮ್ಮು



ಇಲ್ನೋಡೀ...ಎಷ್ಟು ದೊಡ್ಡ ಬಾಲ್... ಅಮ್ಮು ಇದರ ಮೇಲೂ ಕೂತ...

ತೂಗು ಸೇತುವೆ ಮೇಲೆ ಅಂಬೆಗಾಲು...


ಸುಸ್ತಾಯ್ತಪ್ಪಾ....ಸಲ್ಪ ಬೆರಳು ಚೀಪ್ತೀನಿ...


ಸಿಕ್ನಲ್ಲಾ ....ಇಲ್ಲೊಬ್ಬ ಸ್ನೇಹಿತ.......

ಸಪ್ತ ರಂಗಿನ ಬಬಲ್ ಆಯುತ್ತಿರುವ ಅಮ್ಮು....

ಏಯ್...ಹುಡುಗಿ....ನನ್ ಹೆಸ್ರು ಅಮ್ಮು ಕಣೇ...ನಿಂದೇನೂ...?

ಬಾಲ್ ಗಳಿಗಿನ್ನಾ ಟ್ಯಾಗೇ ರುಚಿಯಾಗಿದೆ...!


ಬುರ್ರ್...ಬುರ್ರ್...ಬುರ್ರ್.....

ಅರೇ,..ಏನಾಯ್ತೂ...?



ಓಓಓಓಓಓಓಓ....ಇದು ಹೀಗಾ....


ನಾನು ಸ್ಕೂಲಿಗೆ ಹೋಗುವಾಗ ನನ್ ಬಸ್ ನಾನೇ ಡ್ರೈವ್ ಮಾಡ್ತೀನಿ.....



ನೀವೂ ಬರ್ತೀರಾ...?

ಕಾಸು ಎಲ್ಲಿ ಸಾರ್...?ನಮ್ದೇನು ಬಿಟ್ಟಿ ಬಸ್ಸು ಅನ್ಕೊಂಡ್ರಾ...?


ಪ್ಲೇನೂ ಓಡಿಸೇ ಬಿಡೋಣಾ...ಏನಿವಾಗ ಒಂದ್ ಕೈ ನೋಡೋಕೆ...?


ತುಂಬಾ ಸುಲಭ ನೀವೂ ಬನ್ನಿ ಬೇಕಾದ್ರೆ ಕಲಿಸ್ತೀನಿ ಫೀಸು ತುಂಬಾ ಆಗತ್ತೆ ಅಷ್ಟೇ...

ಇದೇನೂ ಸಲ್ಪ ರಿಪೇರಿ ಮಾಡುವಾ...


ಬನ್ನಿ ಬನ್ನಿ ಹತ್ಕೊಳಿ....

ಸ್ಟಿವನ್ಸ್ ಕ್ರೀಕ್ ಪಾರ್ಕ್ ನಲ್ಲಿ ಅಮ್ಮುವಿಗೆ ಹಸಿರು ವಾಣಿಯ ಸ್ವಾಗತ....


ಘಮಘಮ ಎನ್ನುತ್ತಿದ್ದ ಹೂವಿನ ಚಪ್ಪರ


ಅಮ್ಮುವಿಗೆ ಆನಂದ ತಂದ ನೀಲಿ ಹಕ್ಕಿ...



ಕ್ರೀಕ್ ನ ಜುಳು ಜುಳು ನಾದ...!

ಈ ಸುಂದರ ಪ್ರಕೃತಿಯ ನಡುವೆ ಮಮ್ಮು ತಿನ್ನುತ್ತಿರುವ ಅಮ್ಮು...



ಸಂಜೆ ಅಮ್ಮುವಿಗಾಗಿ ಪುಟಾಣಿ ಕೇಕ್...


ಅಮ್ಮು ಉಫ್ ಅನ್ನಲು ಇಷ್ಟ ಪಡಲಿಲ್ಲ ಹಾಗಾಗಿ ನಾವೇ ಊದಿ ಕಟ್ ಮಾಡಿ ತಿಂದೆವು!
ಅಮ್ಮು ಸಲ್ಪ ಹೊತ್ತಿನ ನಂತರ ಚೂರು ಕೇಕ್ ತಿಂದ....

Tuesday, April 1, 2008

ಹಲ್ಲುಜ್ಜುವ ಹೊಸ ವಿಧಾನ

ಬೆಳಗ್ಗೆ ಎದ್ದು ನೀವು ಹಲ್ಲುಜ್ಜುತ್ತೀರಾ ತಾನೇ...(ಸದ್ಯ ...!) ಇದು ಹಲ್ಲುಜ್ಜುವ

ಹೊಸ ವಿಧಾನ ನಾನೇ ಕಂಡು ಹಿಡಿದಿದ್ದು ಪೇಟೆಂಟ್ ಮಾಡಿಸ್ ಕೊಳಣಾ

ಅಂತಿದೀನಿ ಏನಂತೀರೀ....?

Do you brush every morning...? this is the new method

of brushing i've invented....planning to get a patent....




ಆಹಾ...! ದಿವ್ಯಾನಂದ ಈ ವಿಧಾನ ನೀವೂ ಒಮ್ಮೆ ಟ್ರೈ ಮಾಡಿ....
why don't you try my new method it's wonderful....

Thursday, March 27, 2008

ಕ್ಯೂ ಕಾಟ...!

ಸ್ಯಾನ್ ಫ್ರ್ಯಾನ್ ಸಿಸ್ಕೋ ಏರ್ ಪೋರ್ಟ್ ನಲ್ಲಿ ಊಊಊಊಊಊಊಊಊಊಊದ್ದ ಕ್ಯೂ....



ಕ್ಯೂ ನಲ್ಲಿ ಕಾಯೋದು ಬೋರಪ್ಪಾ....

ಪ್ರವಾಸ ಪ್ರಯಾಸ....

ವಿಮಾನದಲ್ಲಿ ನನ್ನ ತೊಟ್ಟಿಲು ಎಂಬ ಬ್ಯಾಸಿನೆಟ್



ಅಯ್ಯೋ ಇಲ್ಲೂ ಕೂತೂ ಕೂತು ಬೋರು ಕಣ್ರೀ...!

ಅಂತೂ ಇಂಡಿಯಾಗೆ ಬಂದು ಸೇರಿದೆ ತಾತನ ಮನೆಯಲ್ಲಿ ಸಂಭ್ರಮ....
ಅಮ್ಮುವಿನಮ್ಮನ ಟಿಪ್ಪಣಿ-ಕಳೆದ ತಿಂಗಳು ಅಮ್ಮು ರಾಜ ಇಂಡಿಯಾ ದರ್ಶನ ಮಾಡಿದ ಅವನ ಟ್ರಿಪ್ಪಿನ ಫೋಟೋ ಗಳು ಕಂತು ಕಂತಾಗಿ ಬರಲಿವೆ...

Saturday, February 2, 2008

Amartya's dashaavataara!

This is my new baby seat ...
and plastic "kodbale" which Appa got for me

I love chewing these kodbale thanks Appa!


chewing is a good timepass...



some times I play with these too...
Like this...

Oh...I want to chew...It's tempting...




OOOOOOOOOO....tastey...!



Do you want some...?




I'm seriously contemplating on chewing...



Squirrels chew a lot... amma read from my Animal book



Squirrels chew to maintain sharp teeth...(unlike me ha! ha! becoz I don't have any teeth yet!)



...and becoz their teeth grow continuously and chewing prevents over-growth


Isn't chewing a good habit?




hay...here comes Kitty...Meow...what do you say Kitty...?


pink is good...


Blue is Better...!




jig jing...It's fun to swing it...




Chewers are often intelligent,outgoing, affectionate individuals who like to be in charge and get lots of attention."



says my book on rabbits (but i don't know is this true with humans or not!)


What do you say appa...?



I heard about chewing gum which I would love to taste...will you get me one...? PLEASE...




ooops... my kodbales are slipping down...HELP...



and they are gone now...



any body please...get me my kodbales back...do you..? no...? you won't...?


Jaanee doo yaar... who cares...?



Here is going a LADY bug..!


Who wants those Dull kodbales when a LADy is here...(though she is a bug...)





hey hey Lady...look here... i'm amartya...




If you find a ladybug in your house, count the number of spots and that is how many dollars you will soon receive



Hey...come here... let me count your spots...





It's 1..2..3...4..5...If a ladybug has more than seven spots, then there will be a famine. If it has less than seven, then there will be a good harvest... swedish believe...




lady bug i WANT you...




OOOOOOOOOOOOOPPPPPPPPPPPPPPPSSSSSSSSSSSSSSSSSS!!!!!!!!!!!!!!!!!!!!!!!!!!!




AAAAAAAAAAAAAAHHHHHHHHHHHHHHHHH!!!!!!!!!!!!!!!!!!!!!!!!!!!!




HEY...I finally got her....
Do you know French believe that `If you find a ladybug in your house in the winter you will have good luck' so good luck to me and GOOD LUCK TO YOU TOO...