Showing posts with label ನಗೆ ಬುಗ್ಗೆ. Show all posts
Showing posts with label ನಗೆ ಬುಗ್ಗೆ. Show all posts

Thursday, May 14, 2009

WASABI...!

ಕಳೆದವಾರ ನಮ್ಮ ಮನೆಗೆ ಬಂದಿದ್ದ ಪರಿಚಿತರೊಬ್ಬರು wasabi ಎಂಬ ಹುರಿದ ಬಟಾಣಿ ಕಾಳುಗಳನ್ನು ತಂದಿದ್ದರು
Japanese horse radish ಅರಿದು ಲೇಪಿಸಿದ ಈ ಬಟಾಣಿಗಳು ವಿಶೇಷ ರುಚಿ ಎಂದು ಅರವಿಂದ ಹೊಗಳಿದ್ದನ್ನು ಕೇಳಿ ನಾನೂ ಒಂದು ಕಾಳು ಬಾಯಿಗೆ ಹಾಕಿಕೊಂಡು ಅಗಿದು ನೋಡಿದೆ...ತೀಕ್ಷ್ಣ ವಾದ ಕಟು ರುಚಿ ಮತ್ತು ವಾಸನೆ ...!

ನುಂಗಲಾಗದೆ ಉಗಿದು ಬಂದವಳಿಗೆ ಅದೇ ಕಾಲಕ್ಕೆ ಕಿಟ್ಟಣ್ಣ wasabi ಗಳನ್ನು ಚಪ್ಪರಿಸಿ ತಿನ್ನುವುದನ್ನು ನೋಡಿ ವಿಸ್ಮಯವಾಯಿತು ಹಾಗೇ ನಾನು ಮಾಡುವ ಅಡುಗೆ ಈ ಬಟಾಣಿಗಳಿಗಿಂಥಾ ಕೆಟ್ಟದಾಗಿರುತ್ತಾ ಅಂತ ಅನುಮಾನವೂ ಬರಲು ಶುರುವಾಯಿತು!ಹಾಗಾದರೆ ನಮ್ಮ ಸ್ನೇಹಿತರ ಟೇಸ್ಟ್ ಬಡ್ಸ್ ಸಹ ಹಾಳಾಗಿದ್ದಿರಬೇಕು ನನಗೆ ಸಾಕಷ್ಟು ಕಾಂಪ್ಲಿಮೆಂಟ್ಸ್ ಸಿಗುತ್ತವಲ್ಲಾ ಅಂತಾನೂ ಯೋಚಿಸಿದೆ ಅಥವಾ ಅಮ್ಮುವಿನ ಅಪ್ಪನಿಗೆ ನನ್ನ ಮೇಲೆ ಎಣೆ ಇಲ್ಲದಷ್ಟು ಪ್ರೇಮವಿರಬೇಕು ಇಲ್ಲದಿದ್ದರೆ ತಟ್ಟೆ ಖಾಲಿ ಆಗುತ್ತಿರಲಿಲ್ಲ ಫ್ರಿಜ್ಜಿನಲ್ಲಿಟ್ಟ ನೆನ್ನೆಯ ಅಡುಗೆಮಾಯವಾಗುತ್ತಿರಲಿಲ್ಲ ಅಂತಾನೂ ಪ್ಯಾರಲಲ್ಲಾಗಿ ತರ್ಕಿಸಿದೆ...

ಕಿಟ್ಟಣ್ಣ ಮಾತ್ರ ಹಿಡಿ ಹಿಡಿ wasabi ಗಳನ್ನು ಪದೇ ಪದೇ ತಗೊಂಡು ಹೋಗಿ ಎಲ್ಲೋ ಬಚ್ಚಿಟ್ಟು ಬರುತ್ತಿದ್ದ.ಸೇಬಿನ ಹೋಳುಗಳನ್ನು ದೋಸೆ ಚೂರುಗಳನ್ನು ಕಿಟ್ಟ ಕಾರ್ಪೆಟ್ಟಿನಡಿ ಆಟಿಕೆಗಳ ಒಳಗೆ ಬಚ್ಚಿಡುವುದೇನೂ ಹೊಸದಲ್ಲ ನನಗೆ. ದೋಸೆ,ಚಪಾತಿ,ಹಣ್ಣಿನ ತುಂಡುಗಳು ಫ್ರೆಶ್ ಆಗಿದ್ದರೆ ಅವನಿಗೆ ಅಷ್ಟು ರುಚಿಸುವುದಿಲ್ಲವೆಂತಲೂ ಅವುಗಳು ಎರಡು ಮೂರು ದಿನ mature ಆದಮೇಲೆ ಅಮೃತ ಸಮಾನ ಸ್ವಾದವಿರುವುದೆಂದು ಅವನು ನಂಬಿದ್ದಾನೆ ಮಾತ್ರವಲ್ಲ ತಪ್ಪದೆ ಆಚರಣೆಯಲ್ಲಿ ಅಳವಡಿಸಿಕೊಂಡಿದ್ದಾನೆಂಬುದೂ ನಮಗೆ ಸರ್ವವಿದಿತ ಹಾಗಾಗಿ ಮೂರುದಿನದ ಸೇಬಿಗಿಂಥಾ ಈ ಕಾಳು ತಿನ್ನುವುದು ವಾಸಿ ಅಂತ ಸುಮ್ಮನಿದ್ದು ಬಿಟ್ಟೆ
********
ಎರಡುಮೂರು ದಿನದ ನಂತರ ಕಿಟ್ಟ ಒಂದು ಬೆಳಗ್ಗೆ ಎದ್ದವನು ಏನೋ ಅರ್ಜೆಂಟು ಕೆಲಸವಿರುವವನಂತೆ ಹಾಸಿಗೆಯಿಂದಿಳಿದು ಓಡಿಹೋದ ಮತ್ತೆ ಹತ್ತು ನಿಮಿಶದ ನಂತರ ಕಿಟ್ಟನ ಅಪ್ಪ ಕೂಗುವುದು ಕೇಳಿಸಿತು. ಹೋಗಿ ನೋಡಿದರೆ ಅಪ್ಪ ಕೂಗುತ್ತಿದ್ದಾರೆ ಕಿಟ್ಟ ಅಪ್ಪನನ್ನು ಕೇರೇ ಮಾಡದೆ ಹಲ್ಲು ತೋರಿಸುತ್ತಾ ನಗುತ್ತಿದ್ದಾನೆ ಅವನ ಮುಷ್ಟಿಯಲ್ಲಿ ನಾಲ್ಕಾರು ಕಾಳುಗಳು... ಉಳಿದದ್ದು ಅಕ್ವೇರಿಯಮ್ಮಲ್ಲಿ.....ಕಿಟ್ಟನ ಅಪ್ಪ ಗೊಣಗುತ್ತಾ ಅಕ್ವೇರಿಯಮ್ ಕ್ಲೀನ್ ಮಾಡಲು ಹೊರಟಾಗ 'ನಾನು ಮೀನಿಗೆ ಊಟ ಹಾಕ್ತೇನೆ ಅಂದ್ರೆ ಬಿಡೋದಿಲ್ಲಾ ಅಂತೀಯಲ್ಲಾ... ನಿಂಗೆ ಸರೀ ಮಾಡಿದೆ ನೋಡು' ಎಂಬರ್ಥದ ನಗೆ ಕಾಣಿಸಿತು ಕಿಟ್ಟನ ಮೊಗದಲ್ಲಿ...

Thursday, September 11, 2008

ಗಿಂಡಿ Vs ವಾಟರ್ ಬಾಟಲ್

ಬಾಟಲ್ ನನ್ನ ಒಲವಿನ ವಾಟರ್ ಬಾಟಲ್...

**********
ನನಗಾಗ ಸುಮಾರು ನಾಲ್ಕು ವರ್ಷವಿರಬಹುದು.
ಒಂದು ದಿನ ಅಟ್ಟದಲ್ಲಿ ಏನೋ ಹುಡುಕುತ್ತಿದ್ದ ಅಮ್ಮ ಹಳೆ ಪಾತ್ರೆಗಳ ನಡುವೆ ಸುಖವಾಗಿ ಮಲಗಿದ್ದ ಸಣ್ಣ ಗಿಂಡಿಯೊಂದನ್ನು ಅಪ್ಪಿ ತಪ್ಪಿ ಹೊರ ತೆಗೆದು ಹಾಕಿಬಿಟ್ಟರು ಮತ್ತು ಆ ಪಾಪದ ಪ್ರಾಣಿ ನನ್ನ ಕಣ್ಣಿಗೆ ಆಕ್ಷಣ ಬಿದ್ದು ಬಿಟ್ಟಿತು
ಶುರುವಾಯಿತಲ್ಲ ಆ ಗಿಂಡಿಗೆ ಶನಿ ದೆಸೆ...

"ಗಿಂಡಿ ತುಂಬಾ ಪುಟ್ಟ ಪಾಪುಗಳು ಹಾಲು ಕುಡಿಯುವುದು ಕಣೆ" ಅಂತ ಅಮ್ಮ ಎಷ್ಟೆಷ್ಟು ಸಮಜಾಯಿಸಿದರೂ ಕೇಳದೆ ನಾನು ಇನ್ನು ಮೇಲೆ ಗಿಂಡಿಯಲ್ಲೇ ಹಾಲು ಕುಡಿಯುವುದು ಅಂತ ಹಟಮಾಡತೊಡಗಿದೆ
ಅಷ್ಟೊತ್ತಿಗೆ ನನ್ನ ತಂಗಿ ಕೂಡಾ ಲೋಟದಲ್ಲಿ ಕುಡಿಯಲು ಶುರು ಮಾಡಿದ್ದಳೆಂದರೆ ಮನೆಯವರಿಗೆಲ್ಲಾ ನನ್ನ ಹಟ ಎಷ್ಟು ತಮಾಶೆ ಎನ್ನಿಸಿರಬೇಡ...!

`ಸರಿ ಕುಡ್ಕೋ ಹೋಗ್' ಅಂತ ಅಮ್ಮ ಸುಮ್ಮನಾಗಿ ಬಿಟ್ಟರು
ಆ ಗಿಂಡಿಯಲ್ಲಿ ಹಾಲು ಹಾಕಿದರೆ ಅದು ಸೋರಲು ಶುರವಾಗಬೇಕೇ..?
ನಾನು ಬಿಡುತ್ತೇನೆಯೇ...ಗಿಂಡಿ ತಳದಲ್ಲಿ ಒಂದು ತಟ್ಟೆ ಇರಿಸಿಕೊಂಡು ಕುಡಿಯಲೆತ್ನಿಸಿದೆ
ಹೇಳೀ ಕೇಳಿ ಅದು ಪಾಪುಗಳು ಕುಡಿಯುವ ಗಿಂಡಿ ಒಂದು ಸಾರಿಗೆ ಕಾಲು ಲೋಟ ಹಾಲು ಹಿಡುಸುತ್ತಿತ್ತು ಅಷ್ಟೇ
ಹಾಕಿದ ಹಾಲೆಲ್ಲಾ ಸುರಿದು ಹೋದರೆ ಒಂದು ಲೋಟ ಹಾಲು ಕುಡಿಯಲು ನಾನೆಷ್ಟು ಶ್ರಮ ಪಟ್ಟಿರಬಹುದು ಯೋಚಿಸಿ..
ನಾನು ಛಲ ಬಿಡದ ತ್ರಿವಿಕ್ರಮನಂತೆ ಆ ತೂತು ಗಿಂಡಿಯಲ್ಲೇ ಹಾಲು ಕುಡಿಯತೊಡಗಿದೆ
ನನ್ನ ಗಿಂಡಿ ಹುಚ್ಚು ಎಲ್ಲಿಗೆ ಹೋಯಿತೆಂದರೆ ಗಿಂಡಿಯಲ್ಲಿ ನೀರು ತುಂಬಿಕೊಂಡು ದಿನವೆಲ್ಲಾ ಕುಡಿಯಲು ಶುರು ಮಾಡಿದೆ
ಕೊನೆಗೆ ನೀರು ಕುಡಿದೂ ಕುಡಿದೂ ರಾತ್ರಿ ಹೊಟ್ಟೆ ನೋವು ಬಂತು
ನಾನು ಗಿಂಡಿಗೆ ಬೈ ಬೈ ಹೇಳಿದ್ದು ಹೀಗೆ...
***********


ಹಾಲಿಗಿಂಥ ನೀರೇನೇ ಚಂದವೂ....
ತುತ್ತು ಅನ್ನತಿನ್ನದೇ ಇದ್ದರೂ ಹತ್ತು ಬಾಟಲ್ ನೀರು ಕುಡಿಯಿರಿ...
ಕಾವೇರಿಗೇ ಜೈ...

ಯಾರೇ ಕೂಗಾಡಲೀ...
ನೀರೇ ನಿನಗೆ ಸಾಟಿ ಇಲ್ಲ...
ಅರೆ ಹೊಯ್ ಅರೆ ಹೊಯ್
ಟುರ್ ಬ್ಯಾ.....
**************
ಆರವ್ ಹತ್ತಿರ ಇದ್ದ ವಾಟರ್ ಬಾಟಲ್ ನೋಡಿ ಅಮರ್ತ್ಯ ತುಂಬಾ ಆಸೆ ಪಟ್ಟಿದ್ದರಿಂದ ಅವನಿಗೂ ವಾಟರ್ ಬಾಟಲ್ ಕೊಡಿಸಿದ್ದೇವೆ
ಮೂರು ದಿನದಿಂದ ಏನೂ ತಿನ್ನದೆ ಹಾಲು ಕೂಡಾ ಕುಡಿಯದೆ ಬರೀ ನೀರು ಕುಡಿಯುತ್ತಿದ್ದಾನೆ
`ಸರಿ ಕುಡ್ಕೋ ಹೋಗ್' ಅಂತ ಬಿಟ್ಟು ಬಿಡಲು ನನಗೇಕೋ ಆಗುತ್ತಿಲ್ಲ
ಇವನಿಗೆ ಹೊಟ್ಟೆ ನೋವು ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೇನೆ
ಅವನು ಘಳಿಗೆಗೊಂದು ಸಾರಿ ಉಚ್ಚೆ ಮಾಡಿಕೊಂದು ನನ್ನನ್ನು ಸತಾಯಿಸುತ್ತಿದ್ದಾನೆ.

Tuesday, July 29, 2008

ಮಾತಿನ ಮಲ್ಲ ಅಮ್ಮು....

ಅಮರ್ತ್ಯ ವಿಪರೀತ ಮಾತಾಡಲು ಶುರು ಮಾಡಿದ್ದಾನೆ ಅದಕ್ಕೇ ಈ ಹೊಸಾ ಫೀಚರ್
ಆಗಾಗ ಅವನು ಹೊಸ ಪದಗಳನ್ನು ವಟವಟಾಯಿಸಿದಾಗಲೆಲ್ಲಾ ಇಲ್ಲಿ ಅವುಗಳು ಕಾಣಿಸಿಕೊಳ್ಳುತ್ತವೆ
ಅವನು ಮಾತಾಡಿದ್ದಕ್ಕೆಲ್ಲಾ ಅರ್ಥ ಇರಲೇ ಬೇಕೆಂದು ನಿಯಮವೇನೂ ಇಲ್ಲವಷ್ಟೇ ಅಥ್ವಾ ಅವನ ಪ್ರತಿ ಪದಕ್ಕೂ ಖಂಡಿತಾ ಅರ್ಥವಿದ್ದೇ ಇರುತ್ತದೆ ಜಗತ್ತಿನ ಯಾವುದೋ ಭಾಷೆಯಲ್ಲಿ ಎಂಬ ನಂಬಿಕೆಯೊಂದಿಗೆ...


ಈಗೆರಡು ತಿಂಗಳ ಹಿಂದೆ ಒಂದು ವರ್ಷದವನಿದ್ದಾಗ ಅಮರ್ತ್ಯ ಪದೇ ಪದೇ ಹೇಳುತ್ತಿದ್ದದು ಬಾ... ಬಾ...ಬಕ್ಕ ಬಾ... ಅಂತ
ಬಾ ಮತ್ತು ಬಕ್ಕ ಗಳ ಎಲ್ಲಾ ಪರ್ಮುಟೇಶನ್ ಕಾಂಬಿನೇಶನ್ಗಳನ್ನು ಮಾಡಿ ಹೇಳುತ್ತಿದ್ದ
ಬಕ್ಕ... ಬಕ್ಕ... ಬಕ್ಕ...ಬಾ...
ಬಕ್ಕ... ಬಾ..ಬಾ ಮತ್ತು
ಬಕ್ಕ.. ಬಕ್ಕ ..ಬಾ.. ಬಾ.. ಬಾ..
ಬಕ್ಕ..ಬಕ್ಕ.. ಬಾಆಆಆಅ..ಇತ್ಯಾದಿ ಇತ್ಯಾದಿ

ಇಲ್ಲಾ,ಇಲಾ ,ಇಲ್ಯಾ.ಇಲ್ಲಲ್ಲ.ಇಲ್ಲಿಲ್ಲಾ ಇವು ತುಂಬಾ ಮೊದಲಿನಿಂದ ಇದ್ದವು
ಈಗ ಇವುಗಳ ಜೊತೆ ಹಕ್ಕ ಬುಕ್ಕರಂತೆ ಬಕ್ಕ ಮತ್ತು ಬಾ ಸೇರಿಕೊಂಡವು
ಈ ಇಲ್ಲ ಸರಣಿ ಮತ್ತು ಬಕ್ಕ ಬಾ ಗಳ ನಡುವಿನ ಅವಧಿಯಲ್ಲಿ ಅಮ್ಮ ಅಮ್ಮಿ ಶುರುವಾಗಿದ್ದು.
ಕೆಲವು ದಿನ ನನ್ನನ್ನು ಅಮ್ಮ ಅಂತ ಕರೆದು ನಂತರ ನಮ್ಮಿಬ್ಬರನ್ನೂ ಅಮ್ಮ ಅಂತ ಕರೆಯಲು ಶುರು ಮಾಡಿದ
ಒಂದೆರಡು ದಿನ ಬೇರೇನೋ ವಸ್ತು ಅಮ್ಮ ಆಗಿತ್ತು ಮತ್ತು ನಂತರ ಅಮ್ಮ ಮಾಯವಾಯಿತು
ಈಗ ಮತ್ತೆ ಅಮ್ಮ ಬಂದಿದೆ

ಅಫ್ ಕೋರ್ಸ್ ಜೊತೆಗೊಂದು ಬಾಲದೊಂದಿಗೆ "ಅಮ್ಮಮಮ್ಮಾ"ಅಂತ

ಈ ಬಾರಿ he is clear ನಾನು ಮಾತ್ರ ಅಮ್ಮಮಮ್ಮ!

ಅಪ್ಪ ಪಾಪ...ಸದ್ಯಕ್ಕೆ ಹೆಸರಿಲ್ಲದ ಪ್ರಾಣಿ!

ಕಾವೇರಿಯಲ್ಲೂ ಮರ್ಸೆಡ್ ನಲ್ಲೂ ಸಾಕಷ್ಟು ನೀರು ಹರಿದಿದೆಯಲ್ಲಾ..
ಹಾಗೇ ಅಮರ್ತ್ಯನ ಅರ್ಥವಿಲ್ಲದ ಮಾತಿನ ಸರಣಿಯೂ ಹರಿದಿದೆ
ಸುಸಂಬದ್ದವಲ್ಲದ ಅಕ್ಷರ ಸರಣಿಯನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಕಷ್ಟ

ಕಾ...ಕಯಮ್..ಜಮ್..ಜುಮ್...ಗಂ..ಕಿಕ್ಕ..ಪಿಪ್ಯಾ...ಪಿಕೋ..
ಹೀಗೆಲ್ಲಾ ಇಡೀ ದಿನ ವಾರ್ತಾಲಾಪ ನಡೆಯುತ್ತಿರುತ್ತದೆ ಕೆಲವೊಮ್ಮೆ ಮಧ್ಯರಾತ್ರಿ ನಡು ಹಾಸಿಗೆಯಲ್ಲಿ ಎದ್ದು ಕುಳಿತು ಸಂಗೀತ ಕಛೇರಿ ಶುರು ಮಾಡಿ ಬಿಡುತ್ತಾನೆ



ಈಗೆರಡು ದಿನದಿಂದ ಬೀ ಮತ್ತು ಬೇ ಶುರುವಾಗಿದೆ
ಎರಡು ಯಾವಾಗಲೂ ಜೊತೆ ಜೊತೆಗೇ ಬಾಯಿಂದ ಹೊರಬರುತ್ತವೆ
ಕೆಲವು ಉದಾಹರಣೆಗಳು ಹೀಗೆ....


ಬೀಬಿ-ಯಾವ ಬೀಬಿಯೋ ಇವಳು .. ಚಾಂದ್ ಬೀಬಿ ಇರಬಹುದಾ?

ಬೇ ಬೇ- ನಾನು ಚಿಕ್ಕವಳಿದ್ದಾಗ 'ಬೇಡ' ಎನ್ನಲು ಬೇ ಬೇ ಅನ್ನುತ್ತಿದ್ದೆನಂತೆ ಹಾಗಂತ ಅಮ್ಮ ಹೇಳ್ತಾರೆ ನನ್ನ ಮಗನಿಗೂ ರಕ್ತದಲ್ಲೇ ಇದು ಬಂದಿರಬಹುದಾ!!!

ಬೇಬಿ-ಇದು ಬೊಂಬಾಟ್ ನೆನ್ನೆ ವಾಕಿಂಗ್ ಕರೆದು ಕೊಂಡು ಹೋದಾಗ ಸುಮಾರು ತನ್ನಷ್ಟೇ ವಯಸ್ಸಿನ ಮಗುವನ್ನು ಅಮ್ಮು 'ಬೇಬಿ...'ಅಂತ ಕರೆದು ನಿಂತಲ್ಲೇ ನಿಂತು ಬಿಟ್ಟಆ ಬೇಬಿಯ ಚೀನೀ ಅಪ್ಪ ಅಮ್ಮನಿಗೆ ಖುಷಿಯೋ ಖುಷಿ.ನಾನು ಮೊದಲು ನಿಮ್ಮ ಮಗುವನ್ನಲ್ಲಾ ಅವನು ಬೇಬಿ ಅಂದಿದ್ದು ಅಂತ ಆ ಚೀನಿ ದಂಪತಿಗಳಿಗೆ ಸಮಜಾಯಿಸಲು ಪ್ರಯತ್ನಿಸಿದೆನಾದರೂ ಅವರು ನನ್ನ ಮಾತು ಕೇಳಲೇ ತಯಾರಿರಲ್ಲಿಲ್ಲ ಇವನು ತನ್ನೆಲ್ಲಾ ಅಸಂಬದ್ಧ ಪ್ರಲಾಪಗಳ ನಡುವೆ ಇನ್ನೊಮ್ಮೆ ಬೇಬಿ ಅನ್ನುತ್ತಾನೇನೋ ಅಂತ ಕಾದುಕೊಂಡು ಇವನನ್ನು ಮಾತಾಡಲು ಪ್ರೋತ್ಸಾಹಿಸುತ್ತಿದ್ದರು ಇವನೂ ಸಿಕ್ಕಿದ್ದೇ ಚಾನ್ಸು ಅಂತ ಬಾಯಿಗೆ ಬಂದಿದ್ದನ್ನೆಲ್ಲಾ ವದರುತ್ತಿದ್ದ ಎರಡೂ ಪಾರ್ಟಿಯವರೂ ಸಂತೋಷವಾಗಿರುವಾಗ ನನ್ನದೇನು ಕಿತಾಪತಿ ಅಂತ ಕೊನೆಗೆ ನಾನು ಸುಮ್ಮನಾಗಿ ಬಿಟ್ಟೆ

Thursday, May 1, 2008

ಪೀಕುದಾನಿಯೊಂದರ ಕಥೆ...


ಈಗಿನ ಕಾಲದವರಿಗೆ ಪೀಕುದಾನಿಯನ್ನು ಸ್ವಲ್ಪ ವಿವರಿಸಬೇಕು ಅದು ಸಾಮಾನ್ಯವಾಗಿ ಅಗಲ ಪರಾತದಂತೆ ಇದ್ದು
ಮಧ್ಯದಲ್ಲಿ ಗುಂಡಿಯಂತೆ ತಗ್ಗು ಇರುತ್ತದೆ. ಹಿಂದಿನಕಾಲದಲ್ಲಿ ರಾಜ ಮಹಾರಾಜರುಗಳು,ದೊಡ್ಡ ದೊಡ್ಡ ಶ್ರೀಮಂತ ರಸಿಕರು ,ಹಗಲು-ರಾತ್ರಿ ತಾಂಬೂಲ ಜಗಿಯುವಂತ ರಸಿಕತೆ ಇದ್ದವರು) ತಾವು ಇತರ ಕೆಲಸಗಳಲ್ಲಿ ಬಿಸಿಯಾಗಿದ್ದಾಗ ಅಗಿದ ತಾಂಬೂಲ ತುಪ್ಪಲು ಇಂಥಾ ಪೀಕುದಾನಿಗಳನ್ನೂ ಮತ್ತು ಈ ಪೀಕುದಾನಿ ಹಿಡಿಯಲು ಜನವನ್ನೂ ಇಟ್ಟು ಕೊಂಡಿರುತ್ತಿದ್ದರಂತೆ
ನಮ್ಮನೆಯಲ್ಲಿ ಪೀಕುದಾನಿಯೂ ಜನವೂ ಎರಡೂ ಇಲ್ಲ ನಾವೇನು ಮಾಡೋಣಾ ಸ್ವಾಮೀ..?
*************
ಕಿಟ್ಟಣ್ಣನಿಗೆ ಹಲ್ಲು ಬರುತ್ತಿವೆ ನಮ್ಮಿಬ್ಬರನ್ನೂ(ಸಾಮಾನ್ಯವಾಗಿ) ವೀಕೆಂಡಿನಲ್ಲಿ ಸಿಗುವ ನಮ್ಮ ಅದೃಷ್ಟಶಾಲಿ ಸ್ನೇಹಿತರನ್ನೂ
ಹಾ...! ಅಂತ ಕಿರುಚಿಕೊಂಡು ಮುಟ್ಟಿ ನೋಡಿಕೊಳ್ಳುವಂತೆ ಕಚ್ಚುತ್ತಾನೆ ಮತ್ತು ಬಹುಮಾನವಾಗಿ ವದೆ ತಿನ್ನುತ್ತಾನೆ
ಎಲ್ಲಾ ಸೈಜಿನ, ಶೇಪಿನ, ಟೆಕ್ಸ್ಚರಿನ ಟಿತರ್ ಗಳನ್ನು ತಂದು ಸುರಿದಿದ್ದೇವೆ ಅವುಗಳೊಂದೂ ಅವನಿಗೆ ಸೇರವು
ಕೊನೆಗೆ ಕ್ಯಾರೆಟ್ಟ್ ಬೀಟ್ರೂಟ್ ಗಳ ಪ್ರಯೋಗವೂ ಆಯಿತು
ಜೊತೆಗೆ ಜೊಲ್ಲು...
*********
ಅಹಾ..!ಜೊಲ್ಲೆಂದರೆ ಅದರ ಕಥೆ ಏನು ಕೇಳುತ್ತೀರೀ...
ಅಂಗಿಯ ಮೇಲೆ ಜೊಲ್ಲು... ನೆಲದ ಮೇಲೆ ಜೊಲ್ಲು... ಸೋಫಾದ ಮೇಲೆ ಜೊಲ್ಲು...ನನ್ನ ಚೂಡೀಧಾರದ ಮೇಲೂ ಜೊಲ್ಲು...
ಅಪ್ಪನ ಶರ್ಟಿನ ಮೇಲೂ ಡಿಟೋ...
ನಾನಾಡುವ ನುಡಿಯೇ ಜೊಲ್ಲಿನ ನುಡೀ....ಅಂತ ಅವನು ಹಾಡು ಹೇಳುವುದೊಂದು ಬಾಕಿ..!
***********
ಹಲ್ಲು ಬರುವಾಗ ಜೊಲ್ಲು ಬರುವುದು ತೀರಾ ಸಹಜ ಅನ್ನುತ್ತವೆ ಚೈಲ್ಡ್ ಕೇರ್ ಪುಸ್ತಕಗಳು
ಜೊಲ್ಲು ಸುರಿಸಿದಷ್ಟೂ ಬುದ್ದಿವಂತ ಆಗ್ತಾನೆ ಬಿಡು ಅಂತ ಕೆಲವರು ನಂಗೆ ಸಮಾಧಾನ ಹೇಳ್ತಿದಾರೆ
(ತಿಂಡಿಯನ್ನು ನೋಡಿ ಜೊ.. ಸುರಿಸುವ ಡುಮ್ಮಣ್ಣನೂ,ಹುಡಿಗಿ ನೋಡಿ ಜೊ.. ಸುರಿಸುವ ಕಚಡಾನೂ,ನಾಯಿ ಬೆಕ್ಕುಗಳೂ ಹಾಗಾದ್ರೆ ತುಂಬಾ ಬುದ್ದಿವಂತರಿರಬೇಕು!)
************
ಮೊನ್ನೆ ಮಧ್ಯ ರಾತ್ರಿ ಅರವಿಂದ ಜೋರಾಗಿ ಕೂಗುತ್ತಾ ಹಾಸಿಗೆಯಿಂದ ಎಗರೆಗರಿ ಬೀಳಲು ಶುರುಮಾಡಿದ
ಗೊರಕೆ ಹೊಡೀತಿದ್ದ ನಾನು ಎದ್ದು ಗಾಭರಿಯಿಂದ 'ಏನಾಯ್ತು..ಏನಾಯ್ತು...?"ಅಂತ ಕಿರುಚಿದೆ
ಅವನು ಕೋತಿಯಂತೆ ಹಲ್ಲು ಕಿರೀತಿದ್ದ ಕಿಟ್ಟಣ್ಣನನ್ನು ಉರಿಗಣ್ಣಿನಿಂದ ನೋಡುತ್ತಾ ತನ್ನ ಕಿವಿಯೊಳಗೆ ಬೆರಳು ಹಾಕಿ ಅಲ್ಲಾಡಿಸಿಕೊಳ್ಳುತ್ತಿದ್ದ
ಏಕೆಂದರೆ ಬಾಯಿತುಂಬಾ ಸುಮಾರು ಜೊಲ್ಲು ತುಂಬಿಕೊಂಡಿದ್ದ ಕಿಟ್ಟಣ್ಣ ಮಲಗಿದ್ದ ಅಪ್ಪನ ಕಿವಿಯನ್ನೇ
ಪೀಕುದಾನಿ ಮಾಡಿಕೊಂಡು ಬಿಟ್ಟಿದ್ದ!

Sunday, April 20, 2008

ಕಿಟ್ಟಣ್ಣನ ಹೊಸ ಪ್ರೇಮ

ಕಿಟ್ಟಣ್ಣನ ಪೇಪರ್ ಪ್ರೇಮದ ಬಗ್ಗೆ ನನಗೆ ಗೊತ್ತಿತ್ತು

ಅವನ ಸ್ಟೀಲ್ ಪಾತ್ರೆಗಳ ಮೇಲಿನ ಮೋಹದ ಬಗ್ಗೆ ಗೊತ್ತಿತ್ತು

ಕೊನೆಗೆ ಅವನಿಗೆ ವೈರುಗಳೂ,ಬ್ಯಾಟರಿಗಳೂ ಮುರಿದ ಪೆನ್ನುಗಳೂ ಇಷ್ಟವೆಂದು ಗೊತ್ತಿತ್ತು

ಆದರೆ ಅವನ ಈ ಹೊಸಪ್ರೇಮದ ಬಗ್ಗೆ ದೇವರಾಣೆ ಗೊತ್ತಿರಲಿಲ್ಲ


ಆದಿದಿಷ್ಟು...

ಕಳೆದವಾರ ನಾನು ಏನು ಮಾಡಿದರೂ ನಮ್ಮಮನೆಯ ಟಿವಿ ನನ್ನಿಷ್ಟದ ಪುರಾತನ ಸೀರಿಯಲ್ಗಳನ್ನು ಬಾರೀಬಾರೀ

ರಿಪೀಟ್ ಮಾಡುವ ಟಿಬೀಯಸ್ ಚಾನಲ್ಲನ್ನು ತೋರಿಸೊಲ್ಲ ಅಂತ ಹಟ ಹಿಡಿದು ಕೂತುಬಿಟ್ಟಿತ್ತು

ಸರಿ ಸಂಜೆ ಮನೆಗೆ ಬಂದ ಅರವಿಂದನಿಗೆ ಟಿವಿಗೆ ಏನೋ ಆಗೋಗಿದೆ ಕಣೋ ಟೀಭೀಯಸ್


ಬರ್ತಾಇಲ್ಲಾ...ಹಾಕ್ಕೊಡೋ...ಅಂತ ಗೋಗರೆದೆ ರಿಮೋಟ್ ತೊಗೊಂಡು ಟ್ರೈ ಮಾಡಿದವನು ಇದೇನಿದು ಅಂತ

ಹುಬ್ಬೇರಿಸುತ್ತಾ ಮನೆಗೆ ಬಂದವರ್ಯಾರಾದ್ರೂ ರಿಮೋಟ್ ಮುಟ್ಟಿದ್ರಾ...ಅಂತ ಕೇಳುವುದಕ್ಕೂನಾನು

ಅಡ್ಡಡ್ಡವಾಗಿ ತಲೆ ಆಡಿಸುವುದಕ್ಕೂ ಸರಿಯಾಗಿ ಕಿಟ್ಟಣ್ಣ ಅವನ ಮೂರೂಮುಕ್ಕಾಲು ಹಲ್ಲು ತೋರಿಸುತ್ತಾ

ಹ್ಹಿ...ಹ್ಹಿ...ಹ್ಹಿ ಅಂತ ನಗುವುದಕ್ಕೂ ಸರಿಯಾಯಿತು ಬೆಳಗ್ಗೆ ಕಿಟ್ಟಣ್ಣ ರಿಮೋಟ್ ಹಿಡಕೊಂಡು ಆಟ

ಆಡ್ತಾಇದ್ದ...ಅಂತ ನಾನು ನೆನಪಿಸಿಕೊಂಡು ಹೇಳುತ್ತಿರುವಾಗಲೇ`ಇವನು ಅಯ್ಯೋ...ಪೋಕರಿ...'ಅಂತ

ಕಿಟ್ಟಣ್ಣನೆಡೆ ನುಗ್ಗಿದ ನಾನು ಮಿಕ ಮಿಕ ಇಬ್ಬರ ಮುಖನೋಡಿದೆ

ಈಗ ಸ್ವಲ್ಪ ಸೀನ್ ರೀವೈಂಡ್

ಬೆಳಗ್ಗೆ ನಾನು ಅಡುಗೆ ಮನೆಯಲ್ಲಿ ಬಿಸಿ ಯಾಗಿರುವಾಗ ರಿಮೋಟ್ ನೊಂದಿಗೆ ಆಡುತ್ತಾ ಆಡುತ್ತಾ ಕಿಟ್ಟಣ್ಣ `ಆನ್


ಡಿಮಾಂಡ್'ಎಂಬ ಪೇಯ್ಡ್ ಚಾನಲ್ ನಲ್ಲಿ ಯಾವುದೋ ಇಂಗ್ಲಿಷ್ ಮೂವಿ ಆರ್ಡರ್ ಮಾಡಿ ಬಿಟ್ಟಿದ್ದಾನೆ (ಮತ್ತು

ಮೂವಿ ಪ್ರಸಾರವಾಗುತ್ತಿರುವಾಗ ಚಾನಲ್ ಬದಲಿಸಿ ಬಿಟ್ಟಿದ್ದಾನೆ)ಅದು ಸಾಲದೆಂದು ಮತ್ತೆ ಮೂರು

ಸಿನಿಮಾಗಳನ್ನು ಕ್ಯೂನಲ್ಲಿ ಬೇರೆ ನಿಲ್ಲಿಸಿಕೊಂಡಿದ್ದಾನೆ!!!ನಂತರ ಸಿಕ್ಕಪಟ್ಟೆ ಬಟನ್ ಗಳನ್ನು ಒತ್ತಿಬಿಟ್ಟಿದ್ದರಿಂದ ಟಿವಿ

ಮುನಿಸಿಕೊಂಡು ಬಿಟ್ಟಿದೆ

*************

ಈಗ ಐದು ಡಾಲರ್ ನ ಬಿಲ್ಲು ಬಂದಿದೆ ಐದೇ ಡಾಲರ್ ಅಲ್ಲ ಸದ್ಯ ಅಂತ ಖುಷಿ ಪಡಬೇಕಾ ಅಥ್ವಾ ಇವ್ನು

ಇನ್ನೇನೇನು ಮಾಡ್ತಾನೋ ಅಂತ ಟೆನ್ಶನ್ ಮಾಡೋ ಬೇಕಾ ಅಂತ ಗೊತ್ತಾಗುತ್ತಿಲ್ಲ ನನಗೆ...



Sunday, November 25, 2007

ಹತ್ತು ಫೇವರೆಟ್ಸ್


ಕಳೆದ ಆರು ತಿಂಗಳಲ್ಲಿ ನಾನು ಗಮನಿಸಿದಂತೆ ಅಮ್ಮುವಿನ ಹತ್ತು ಫೇವರೆಟ್ ಗಳು (ಇದೇ ಕ್ರಮಾಂಕದಲ್ಲಿ ಅಲ್ಲ!)
೧.ತನ್ನನ್ನು ಎತ್ತಿಕೊಂಡು ತಿರುಗಾಡಿಸುವ ಎಲ್ಲಾ ಆಂಟಿ ಅಂಕಲ್ ಗಳು!
೨.`ಅಗ್ಗುವೇ' ಅಮ್ಮುವಿಗೆ ತುಂಬಾ ಇಷ್ಟ ಅಮ್ಮನನ್ನು `ಅಗ್ಗುವೇ' ಗಾಗಿ ಸದಾ ಪೀಡಿಸುತ್ತಿರುತ್ತಾನೆ
೩.ಅವನ ಹೊಚ್ಚ ಹೊಸಾ ಫ್ರೆಂಡ್` ಆಲೀ' ಅಥವಾ `ಲಾಲೀ'(ಅವಳ ಬಟ್ಟೆಯನ್ನೂ ತಲೆಯನ್ನು ಸದಾ ತಿನ್ನುತ್ತಿರುತ್ತಾನೆ) ಮತ್ತು ಅಷ್ಟೇನೂ ಹೊಸಬನಲ್ಲದ ಫ್ರೆಂಡ್, ಮಿಸ್ಟರ್ ಬೇರ್ ದ ಕ್ಲೌನ್
೪.ಬಂತು ಬಂತು ಬಂತು...ಎಂಬ ಆಟ
೫.ಗರ್ಬರ್ ನ ತರಕಾರಿಗಳು ವಿಶೇಷವಾಗಿ ಸ್ಕ್ವಾಷ್
೬.ಅವನನ್ನು ಎಂಗೇಜ್ ಮಾಡುವ ಎಲ್ಲಾ ಮಕ್ಕಳು
೭.ಬಣ್ಣ ಬಣ್ಣದ ದೀಪಗಳಿರುವ ಮಾಲ್ ಅದರಲ್ಲೂ `ಐಕಿಯಾ' ಎಂಬ ಸ್ವೀಡಿಶ್ ಮಾಲ್
೮.ಅವನ ರೇನ್ ಬೋ ಡಕ್ ಕಥೆ ಪುಸ್ತಕ,ಅಪ್ಪ ತಂದು ಕೊಟ್ಟಿರುವ ಪ್ಲ್ಯಾಸ್ಟಿಕ್ ಕೋಡು ಬಳೆಗಳು
೯.ಬರ್ದಾಷ್ ನಹೀ ಕರ್ಸಕ್ತಾ,ಬಂಬೈ ಮೇರಿ ಜಾನ್ ,ಅಕೇಲೇ ಹೈ,ದೂರಿ ದೂರೀ,ಕಪ್ಪು ಕಪ್ಪು,ನಿಂಬೀಯಾ ಬನದ ಮ್ಯಾಗಳ,ಊರು ನೋಡಲೆಂದು ಹೊಂಟನೋ ಕಪೀಶಾ...ಲಿಸ್ಟ್ ಗೋಸ್ ಆನ್
೧೦.ತನ್ನ ಎಂಜಲು ಕೈಯಲ್ಲಿ ಅಪ್ಪ ಅಮ್ಮನ ಮುಖ ಪರಚುವುದು!

Monday, August 6, 2007

ಅಮ್ಮ ನನ್ ಕಿವಿ ಕತ್ತರಿಸ್ತಾಳಂತೆ...

ಮಗು ಕಿವಿಯೆಲ್ಲಾ ಕತ್ತರಿಸಿದ್ದೆ ಆದ್ರೂ ನೋಡೂ...' ನಾನೊಂದು ಮಧ್ಯಾನ್ಹ ಅರವಿಂದನ ಹತ್ರ ಹೇಳಿದೆ

`ಕಿವಿ ಕತ್ತರಿಸಿದ್ಯಾ...? ಅವನು ಆಲ್ಮೋಸ್ಟ್ ಕಿರುಚಿದ

ಹೂಂ ...ಆದ್ರೂ ಹ್ಯಾಗ್ ಪರ್ಚ್ ಕೊಂಡಿದಾನೆ ನೋಡೂ...'


ಮರು ಘಳಿಗೆ ನನ್ನ ತಲೆ ಡಬ್ ಅಂತ ಸೋಫಾ ಕಟ್ಟಿಗೆ ಬಡಿಯಿತು

ತಲೆ ಉಜ್ಜಿಕೊಳ್ಳುತ್ತಾ ನೋಡಿದರೆ ಎದುರಿಗೆ ಎರಡೆರಡು ಅರವಿಂದ ಮತ್ತು ಅಮ್ಮು ಮತ್ತವನ ಅವಳಿ ಬ್ರದರ್ ಕಂಡರು!

ಅಂದಹಾಗೆ ನಮ್ಮನೇಲಿ ಪ್ರತಿ ರಾತ್ರಿಯೂ ಶಿವರಾತ್ರಿ!!