skip to main |
skip to sidebar
ಬಾ ಬಾ ಚಂದು ಮಾಮಮುತ್ತು ಕೊಡು ಬಾಕಬ್ಬು ಹೆಚ್ಚಿ ತಿರುಳೇ ಕೊಡುವೆಮಾವು ಹೆಚ್ಚಿ ವಾಟೀ ಕೊಡುವೆಬಾಬಾ ಚಂದು ಮಾಮತಿಂಡಿ ತಿನ್ನು ಬಾಕೌಲಿ ಹಾಲು ಕರೆಯಿಸಿ ಕೊಡುವೆಹಾಲು ಕುಡಿಯಲು ಬಟ್ಟಲು ಕೊಡುವೆಬಾ ಬಾ ಚಂದು ಮಾಮಹಾಲು ಕುಡಿ ಬಾತುಪ್ಪದ ದೀಪ ಹಚ್ಚಿ ಇಡುವೆಪುಟ್ಟ ಪುಸ್ತಕ ಓದಲು ಕೊಡುವೆಬಾ ಬಾ ಚಂದು ಮಾಮ ಪಾಠ ಓದು ಬಾಆಟದ ಸಾಮಾನೆಲ್ಲಾ ಕೊಡುವೆನಿನ್ನ ಸಂಗಡ ಆಡುತಲಿರುವೆಬಾಬಾ ಚಂದು ಮಾಮ ಬಾಕೂಡಿ ಆಡು ಬಾ-ಹೊಯಿಸಳ
ಯಾರೀ ಚಿಣ್ಣ ಕೇದಿಗೆ ಬಣ್ಣಘಮ ಘಮ ಬಂಗಾರ ಸಣ್ಣನಕ್ಕರೆ ಸಾಕು ಬಿಚ್ಚಿದಂತೆಲ್ಲೂಬೆಳಕಿನ ಪತ್ತಲವನ್ನ!-ಎನ್.ಎಸ್.ಎಲ್. ಭಟ್ಟ

ಪುಟ್ಟಪಾಪ ಎಷ್ಟು ಚೆಂದ
ನಿನ್ನ ಕಣ್ಣು!
ಹಲ್ಲೇ ಇಲ್ಲ;ಗಲ್ಲಥೇಟು
ಸೇಬು ಹಣ್ಣು!
ಪುಟ್ಟಪಾಪ ಹಾಡು ಹೇಳಿ
ನಿನ್ನ ತೂಗಲೇ?
ಮಮ್ಮು ಬೇಕೆ ಅಮ್ಮ
ನನ್ನು ಕೂಗಲೇ?
ಪುಟ್ಟಪಾಪ ಕೆಳಗೆ ಬಾ
ಬಿಟ್ಟು ತೊಟ್ಟಿಲು;
ಕೈಯ್ಯ ಕೊಟ್ಟು ಇಳಿಸುತೇನೆ
ಎಲ್ಲ ಮೆಟ್ಟಿಲು.
-ಶ್ರೀನಿವಾಸ ಉಡುಪ
ಹಾಡು ಕೇಳಿ
ಕವನ-ಎನ್.ಎಸ್.ಲಕ್ಶ್ಮೀನಾರಾಯಣ ಭಟ್ಟಗಾಯಕಿ-ರತ್ನಮಾಲ
ನನ್ನ ಮುದ್ದು ಚಿಲಿಪಿಲಿ ಗಿಳಿಯೇ ಬಂಗಾರ ತುಂಬಿದ ಗಣಿಯೇಹೂನಗೆ ಅರಳಿದೀ ಮುಖಕೆಹುಣ್ಣಿಮೆ ಆಕಾಶ ಎಣೆಯೇ
ಹೇಗಿರದೆ ನೀನಿದ್ದೆ ಮಗುವೇಕತ್ತಲಾಗಿತ್ತಲ್ಲೆ ಜಗವೇನೀ ಬಂದು ನಗಲು ಈ ಇಳೆಗೇಹರಿದಿದೆ ಬೆಳಕಿನ ಹೊಳೆಯೇ
ರಸಹೀನವಾಗಿತ್ತು ಬಾಳುಈಗ ಮೊಸರು,ಹಾಲು,ಬೆಣ್ಣೆ,ಜೇನುಹಾಳು ಸುರಿಯುತ್ತಿದ್ದ ಹಾದಿಈಗ ದೇವರ ಉತ್ಸವದ ಬೀದಿ
ಜನ್ಮ ಜನ್ಮದ ಪೂಜೆ ಫಲಿಸಿದೇವರೇ ಬಂದರೋ ಹರಸಿಬರೆದಿತ್ತ ತೋಳಿನ ತುಂಬಉಡುಪಿ ಕೃಷ್ಣನ ಮುದ್ದು ಬಿಂಬ
ಜೋ ಜೋ ಜೋ ಜೋ ಜೋ ಜೋ
ಹಾಡು ಕೇಳಿಕವನ-ಕೆ ಎಸ್ ನಗಾಯಕಿ-ಸುಲೋಚನಅತ್ತಿತ್ತ ನೋಡದಿರು ಅತ್ತು ಹೊರಳಾಡದಿರುನಿದ್ದೆ ಬರುವಳು ಹೊದ್ದು ಮಲಗು ಮಗುವೇಜೋಜೋಜೋಜೋ....ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರುನಿದ್ದೆ ಬರುವಳು ಕದ್ದು ಮಲಗು ಮಗುವೇ
ಜೋಜೋಜೋಜೋ....ಮಲಗು ಚೆಲ್ವಿನ ಸಿರಿಯೇಮಲಗು ಒಲ್ಮೆಯ ಸಿರಿಯೇಮಲಗು ತೊಟ್ಟಿಲ ಸಿರಿಯೇ ದೇವರಂತೆಮಲಗು ಮುದ್ದಿನ ಗಿಣಿಯೆಮಲಗು ಮುತ್ತಿನ ಮಣಿಯೆಮಲಗು ಚಂದಿರನೂರ ಹೋಗುವೆಯಂತೆ
ತಾರೆಗಳ ಜರತಾರಿ ಅಂಗಿ ತೊಡಿಸುವರಂತೆಚಂದಿರನ ತಂಗಿಯರು ನಿನ್ನ ಕರೆದುಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ ವೀಣೆ ನುಡಿಸುವರಂತೆ ಸುತ್ತ ನೆರೆದು
ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗಹಗಲು ಬರುವನು ಬೆಳ್ಳಿ ಮುಗಿಲ ನಡುವೆಚಿನ್ನದಂಬಾರಿಯಲಿ ನಿನ್ನ ಕಳುಹುವರಾಗಪಟ್ಟದಾನೆಯ ಮೇಲೆ ಪುಟ್ಟ ಮಗುವೆ
ನಮ್ಮ ಮನೆಯ ಸಣ್ಣ ಪಾಪ
ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳದೆ ಹೋದರದಕೆ ಕೋಪ ಬರುವುದು
ಕೋಪ ಬರಲು ಗಟ್ಟಿಯಾಗಿ ಕಿರುಚಿ ಕೊಳುವುದು
ಕಿರುಚಿ ಕೊಂಡು ತನ್ನ ಮೈಯ್ಯ ಪರಚಿ ಕೊಳುವುದು
ಮೈಯ್ಯ ಪರಚಿ ಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು
ಪಾಪ ಅತ್ತರಮ್ಮ ತಾನು ಅತ್ತು ಬಿಡುವಳು
ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು
ಪಾಪ ಪಟ್ಟು ಹಿಡಿದ ಹಟವು ಸಾರ್ಥವಾಯಿತು
ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು
-ಜೆ.ಪಿ.ರಾಜರತ್ನಂ