Friday, December 19, 2008

ಬೇಗ ದೊಡ್ಡೋನಾಗೋ....

ಅಮರ್ತ್ಯ ವಿಪರೀತ ತುಂಟ ಪೋಕರಿಯಾಗಿದ್ದಾನೆ. ಅವನು ನನ್ನನ್ನು ಗೋಳು ಹೊಯ್ದುಕೊಂಡು ನನಗೆ ಸಾಕು ಸಾಕಾದಾಗಲೆಲ್ಲಾ
ಯಾವಾಗ ದೊಡ್ಡೋನಾಗ್ತಾನೋ ಇವ್ ನು..." ಅಂತ ಹಾರೈಸುತ್ತಾ ಇದ್ದವಳಿಗೆ ಕಣ್ಣುತೆರೆಸುವಂಥಾ ಮುತ್ತಿನಂಥಾ ಮಾತು ಮೊನ್ನೆ ಏನೋ ಓದುವಾಗ ಸಿಕ್ಕಿತು

“Childhood is a short season.” ~Helen Hayes

ಪಾಪ ಮಗು ಮಜ ಮಾಡಿಕೊಳ್ಳಲೀ...ಇನ್ ಮೇಲೆ ಬೇಗ ದೊಡ್ಡೋನಾಗೋ ಅಂತ ಅನ್ನಬಾರದು ಅಂದುಕೊಂಡೆ !
ಅಂದಹಾಗೆ ಈ ಫೋಟೋ ಅಮ್ಮು ಅಂಬೆಗಾಲಿಡುತ್ತಿದ್ದಾಗಿನದು...ಅವನಿನ್ನೂ ಎಂಟೋ ಒಂಭತ್ತೋ ತಿಂಗಳ ಕಂದ...
ಎಷ್ಟು ಬೇಗ ಬೆಳೆದು ಬಿಟ್ಟ...!

Thursday, December 11, 2008

ಎನ್ನ ಗಾಜ ಗೊಂಬೆಯೇ...

ಸೂಜುಮಲ್ಲಿಗೆ ಸುಜಾತ ಮಲ್ಲಿಗೆ

ರಾಜ ತೇಜ ಮಗುವೆ ಎನ್ನ

ಗಾಜ ಗೊಂಬೆಯೇ

ನಲಿದಾಡು ಸೋಗಿಲೆ

ಸುಳಿದಾಡು ಕೋಗಿಲೆ

ಬಳಿಗೆ ಬಾ ಆನೆ ಮರಿಯೇ

ಕೊಳದ ಹಂಸವೇ

Thursday, December 4, 2008

ಕೊನೆಗೂ ಸಿಕ್ಕಿದ ದೂರೀದೂರೀ...


ಅಮ್ಮು ಪುಟಾಣಿ ಮಗುವಾಗಿದ್ದಾಗಿನಿಂದ "ದೂರೀ ದೂರೀ"ಹಾಡನ್ನು ಹುಡುಕುತ್ತಿದ್ದೆ ಕೊನೆಗೆ ಅದು ಸಿಗದೆ ನಾನೇ ನನಗೆ ತೋಚಿದಂತೆ ಹಾಡು ಕಟ್ಟಿಕೊಂಡು ಅಮ್ಮಣ್ಣನಿಗೆ ಹಾಡುತ್ತಿದ್ದೆ ಈತನಕ ನನಗೆ ಸಿಕ್ಕಿರದ "ದೂರೀ ದೂರೀ" ಮೊನ್ನೆ
ಲಾಸ್ ಏಂಜಲೀಸ್ ಗೆ ಹೋದಾಗ ನನ್ನ ಕಸಿನ್ ಬಳಿ ಸಿಕ್ಕಿತು!
ಮಗಳಿಗೆಂದು ತಮ್ಮ ಅಮ್ಮ ವರ್ಷಗಳ ಹಿಂದೆ ಬರೆದುಕೊಟ್ಟ ಈ ಹಾಡಲ್ಲದೆ ಇನ್ನೂ ಹಲವು ಮಕ್ಕಳ ಹಾಡುಗಳನ್ನು ನನಗೆ ಕೊಟ್ಟ ರವಿ ಅಣ್ಣ ಮತ್ತು ಅರುಣ ಅತ್ತಿಗೆಗೂ ಹಾಡುಗಳನ್ನು ಬರೆದಿಟ್ಟಿದ್ದ ಸರೋಜ ಅತ್ತೆಗೂ ಥ್ಯಾಂಕ್ಸ್....
ದೂರೀ ದೂರೀ ದೂಕಲಮ್ಮ
ನಾರಿ ಕೇಳೇ ನಂದಗೋಪಿ
ದೂರೀ ದೂರೀ ದೂಕಲಮ್ಮ
ಕಲ್ಲ ಮೇಲೆ ಬಿದ್ದು ಜಾರಿ
ಹಲ್ಲು ಮುರಿದು ಕೊಂಡೆನಮ್ಮ
ದೂರೀ ದೂರೀ ದುಂಡ ಪಾಪ
ನಾರಿ ಕೇಳೇ ನಂದಗೋಪಿ
ಅತ್ತೆ ಮನೆಗೆ ಹೋದೆನಮ್ಮ
ಕಿತ್ತಳೆ ಹಣ್ಣು ತಿಂದೆನಮ್ಮ
ಮಾವನ ಮನೆಗೆ ಹೋದೆನಮ್ಮ
ಮಾವಿನ ಹಣ್ಣು ಹಣ್ಣು ತಿಂದೆನಮ್ಮ
ದೂರೀ ದೂರೀ ದೂಕಲಮ್ಮ

Monday, November 3, 2008

ಕಿಟ್ಟಣ್ಣನ ಹ್ಯಾಲೋವೀನ್ ಸಂಭ್ರಮ

ನಮ್ಮ ಸಿಂಹದ ಮರಿ 'ಟ್ರಿಕ್ ಆರ್ ಟ್ರೀಟ್'ಗೆ ಹೋಗಲು ರೆಡಿ.....

ಅಮ್ಮನಿಗೆ ಕುಂಬಳಕಾಯಿ ಕೆತ್ತಲು (pumpkin carving) ಕಿಟ್ಟಣ್ಣನ ಸಹಾಯ..!

ಅಂತೂ ಕುಂಬಳಕಾಯಿ ಕೆತ್ತಿ ಆಯಿತು....



ತಯಾರಾದ ಕುಂಬಳಕಾಯಿಯಲ್ಲಿ ಕ್ಯಾಂಡಲ್ ಬೆಳಗಿಸಿ ಮನೆ ಬಾಗಿಲಲ್ಲಿ ಇಟ್ಟಾಗ....


ತನ್ನ ಸ್ನೇಹಿತರೊಡನೆ ಟ್ರಿಕ್ ಮಾಡಲು ಹೊರಟ ಕಿಟ್ಟಣ್ಣ





ಪಂಜ ಸರಿ ಇದೆಯೇ....? ಬೇಟೆಗೆ ರೆಡಿಯಾಗುತ್ತಿರುವ ಮರಿ


ಸಿಂಹದ ಮರಿಯ ಮುದ್ದಾದ ಪುಟಾಣಿ ಬಾಲ!


ಹುಲಿಯ ಮೇಲೆ ಸಿಂಹ! ಇಂಥಾ ಅಪರೂಪದ ದೃಶ್ಯ ಎಂದಾದರೂ ಕಂಡಿದ್ದಿರಾ..?


ಹತ್ತು ಕ್ಯಾಂಡಿ ತಿಂದು ತುಟಿ ಸವರಿಕೊಳ್ಳುತ್ತಿರುವ ಸಿಂಹ...


ನಿಮಗೊಂದು SMILE..



ತನ್ನ (ಟಾಯ್) ಸಾಮ್ರ್ಯಾಜ್ಯದಲ್ಲಿ ಪುಟ್ಟ ಕಿಟ್ಟ ಸಿಂಹ



ಓಓಓಓಓಓ ಮರಿ ಸಿಂಹಕ್ಕೆ ಸುಸ್ತಾಗಿ ಬಿಟ್ಟಿತು...
So Bye....

Tuesday, October 28, 2008

ದೀಪಾವಳಿ


HAPPY DEEPAVALI

ಎಲ್ಲರಿಗೂ ದೀಪಾವಳಿ ಶುಭಾಶಯಗಳು

Thursday, October 16, 2008

ಚಂದುಮಾಮ ಬಾ...

ಬಾ ಬಾ ಚಂದು ಮಾಮ
ಮುತ್ತು ಕೊಡು ಬಾ


ಕಬ್ಬು ಹೆಚ್ಚಿ ತಿರುಳೇ ಕೊಡುವೆ
ಮಾವು ಹೆಚ್ಚಿ ವಾಟೀ ಕೊಡುವೆ
ಬಾಬಾ ಚಂದು ಮಾಮ
ತಿಂಡಿ ತಿನ್ನು ಬಾ


ಕೌಲಿ ಹಾಲು ಕರೆಯಿಸಿ ಕೊಡುವೆ
ಹಾಲು ಕುಡಿಯಲು ಬಟ್ಟಲು ಕೊಡುವೆ
ಬಾ ಬಾ ಚಂದು ಮಾಮ
ಹಾಲು ಕುಡಿ ಬಾ


ತುಪ್ಪದ ದೀಪ ಹಚ್ಚಿ ಇಡುವೆ
ಪುಟ್ಟ ಪುಸ್ತಕ ಓದಲು ಕೊಡುವೆ
ಬಾ ಬಾ ಚಂದು ಮಾಮ
ಪಾಠ ಓದು ಬಾ


ಆಟದ ಸಾಮಾನೆಲ್ಲಾ ಕೊಡುವೆ
ನಿನ್ನ ಸಂಗಡ ಆಡುತಲಿರುವೆ
ಬಾಬಾ ಚಂದು ಮಾಮ ಬಾ
ಕೂಡಿ ಆಡು ಬಾ

-ಹೊಯಿಸಳ

Wednesday, October 15, 2008

Ammu at sam's birthday party

Samhita -the birthday girl

Ammu discussing some 'tarle' plans with his buddies
abhi,mahima & anika


Ayushi and Ammu


Ammu plotting some mischief......

Akhila and Ammu


Ammu in party cone...


Sams saying bye.....



Happy birthday Sams...




Tuesday, October 7, 2008

ಕಂದ ರಂಗಯ್ಯ...

ಅಂಗಳದ ತುಂಬೆಲ್ಲಾ ರಂಗೋಲಿ ಬಿಡಿಸಿದ್ದೆ
ಕಂದ ರಂಗಯ್ಯ ಒಳಹೊರಗ ಓಡಾಡಿ
ಮನೆಯ ಒಳಗೆಲ್ಲಾ ಚಿತ್ತಾರಾ...


ದಿಡ್ಡಿ ಬಾಗಿಲಿಗೆ ಮುತ್ತಿನ ತೋರಣ ಕಟ್ಟಿದ್ದೆ
ಕಂದ ರಂಗಯ್ಯ ಒಳಹೊರಗ ನಲಿದಾಡಿ
ಮನೆಯ ಒಳಗೆಲ್ಲಾ ಮುತ್ತಿನ ಸಿಂಗಾರಾ...


ಹಿತ್ತಲ ತುಂಬೆಲ್ಲಾ ಮಲ್ಲಿಗೆ ಸೇವಂತಿ ಬೆಳೆದಿದ್ದೆ
ಕಂದ ರಂಗಯ್ಯ ಒಳಹೊರಗ ನೆಗೆದಾಡಿ
ಮನೆಯ ಒಳಗೆಲ್ಲಾ ಹೂಬನಾ...

_ಅಮ್ಮುವಿನಮ್ಮ

Monday, October 6, 2008

ದಸರೆಯ ಪುಟ್ಟ ಗೊಂಬೆ


ಬೇಸಿಗೆ ದಿನಕೆ ಬೇಲದ ಪಾನಕ ಚೆಂದಾ...
ದೀವಳಿಗೆ ದಿನಕೆ ಸಾಲು ದೀಪ ಚೆಂದಾ...
ದಸರೆಗೆ ಚೆಂದಾ ಇಂಥಾ ಪುಟ್ ಗೊಂಬೆ...

ಹ್ಯಾಪಿ ಬರ್ತ್ ಡೇ ಸಂಹಿತಾ...

Thursday, October 2, 2008

ಅಮ್ಮುವಿನ ಕುಣಿತ

ಅಮ್ಮುವಿಗೆ ಹಾಡು ಕುಣಿತವೆಂದರೆ ಬಹಳ ಇಷ್ಟ ಟಿ.ವಿ ಅಥ್ವಾ ಪ್ಲೇಯರ್ನಲ್ಲಿ ಹಾಡು ಬರುತ್ತಿದ್ದರೆ ಕಾಲು ಕುಣಿಸುತ್ತಾ ತನ್ನದೇ ಭಾಷೆಯಲ್ಲಿ ಜೋರಾಗಿ ಹಾಡುತ್ತಾ ಡ್ಯಾನ್ಸ್ ಶುರು ಮಾಡಿ ಬಿಡುತ್ತಾನೆ.ಮೊನ್ನೆ ಹೊಸ ಪ್ಯಾಂಟ್ ಹಾಕಿಕೊಂಡು ಅಮ್ಮು ಹಾಡುತ್ತಾ ಕುಣಿದಿದ್ದು ಹೀಗೆ...







Tuesday, September 30, 2008

ಮುದ್ದುಕನಸೇ...


ಮುದ್ದು ಕನಸೇ ಮುದ್ದು ಕನಸೇ
ಇಳೆಗಿಳಿದು ಬಾ...
ಚಂದ್ರನೂರಿಂದ ತೇಲಿ ಬಂದು
ಪುಟ್ಟಂಗೆ ಮುತ್ತೊಂದ ತಾ...

ತಾರೆಗಳ ಕಾಂತಿಯಲಿ
ಮಿನುಗಿ ಮುತ್ತಾಗಿ ಬಾ
ಮಲಗಿರುವ ಮಗುವ
ಮುದ್ದು ನಗುವಾಗಿ ಬಾ

ಇಬ್ಬನಿಯ ತಂಪಲ್ಲಿ
ನಗುವ ಹೂವಾಗಿ ಬಾ
ಅರೆತೆರೆದ ಚೆಂದುಟಿಯ
ಮೇಲೆ ನಲಿದಾಡು ಬಾ

ಬೆಳಂದಿಂಗಳ ರಾತ್ರಿಯಲಿ
ಮಲ್ಲಿಗೆ ಅರಳಾಗಿ ಬಾ
ಘಮಘಮಿಸಿ ಹೊಳೆದು
ಪುಟ್ಟಗೆ ಸವಿ ನಿದ್ದೆಯ ತಾ
-ಅಮ್ಮುವಿನಮ್ಮ

Saturday, September 27, 2008

Wednesday, September 24, 2008

ಅಮ್ಮು ...ಅಮ್ಮ...


ಯಾರು ನನ್ನ ಚಿನ್ನ ರನ್ನ?
ನಾನು ನಾನು ನಾನು
ಅದನ್ ಸದಾ ಹಾಕ್ಕೋಳೋಳು
ನೀನು ನೀನು ನೀನು

ಯಾರು ನನ್ನ ಕಳ್ಳ ಕೃಷ್ಣ?
ನಾನು ನಾನು ನಾನು
ಹಾಲು ಬೆಣ್ಣೆ ತಿನ್ಸೋ ಗೋಪಿ?
ನೀನು ನೀನು ನೀನು

ತಿಂಡಿ ಕದ್ದು ತಿನ್ನೋ ಇಲಿ?
ನಾನು ನಾನು ನಾನು
ಕಿವಿ ಹಿಂಡಿ ಬಿಡಿಸಿ ಬೈಯೋಳ್?
ನೀನು ನೀನು ನೀನು

ಹಿಡಿದು ಬಡಿದು ಹೊಡೆದು ಕಡೆಗೆ
ಸೋಲೋದ್ ಯಾರು? ನೀನು!
ಅತ್ತು,ಕರೆದು ಬೈಸಿಕೊಂಡ್ರೂ
ಕಡೆಗ್ ಗೆಲ್ಲೋದ್? ನಾನು!

-ಲಕ್ಶ್ಮೀ ನಾರಾಯಣ ಭಟ್ಟ
ನನ್ನ ಚಿನ್ನ ರನ್ನ ಅಮ್ಮುನ ಸದಾ ಹಾಕ್ಕೋಳೋಳು ನಾನೇ ಆದ್ರೂ ಉಳಿದ ಮೂರು ನುಡಿಗಳು ಸದ್ಯಕ್ಕೆ ಅಮ್ಮುವಿನ ಮಟ್ಟಿಗೆ ಜಾರಿಯಲ್ಲಿಲ್ಲ! ಸದ್ಯ....

Saturday, September 20, 2008

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ...


ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

ತೊಟ್ಟಲಿನೊಳಗೆ ಪುಟ್ಟ ಕಂದ ಮಲಗಿಹನು
ಸೃಷ್ಟಿಗೊಡೆಯನ ಮಡದಿಯ,ಪಾರ್ವತಿ ದೇವಿ
ದೃಷ್ಟಿ ತಗುಲೀತು ತೆರೆ ಹಾಕ...

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

ಅಳಬೇಡ ನನ ಕಂದ ನಿನಗೆ ಜೋಗುಳ ಹಾಡಿ
ಹುಣ್ಣಿಮೆ ಹಾಲು ತಂದು ಉಣಿಸೇನ,ಮಾವನ ಮಗಳ
ಕರ ತಂದು ಧಾರೆ ಎರೆದೇನ....

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ


ನನ್ನಯ್ಯನಂತೋರು ಹನ್ನೆರಡು ಮಕ್ಕಳು
ಹೊನ್ನೆಯ ಮರದ ನೆರಳಾಗ ಆಡುವಾಗ
ಸನ್ಯಾಸಿ ಜಪವಾ ಮರೆತಾನೂ...

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

Saturday, September 13, 2008

ಚಿಂವ್ ಚಿಂವ್ ಗುಬ್ಬಿ...


ಗುಬ್ಬಿ ಗುಬ್ಬಿ
ಚಿಂವ್ ಚಿಂವ್
ಎಂದು ಕರೆಯುವೆ ಯಾರನ್ನು?

ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು?

ಮೇಲೆ ಕೆಳಗೆ
ಕೊಂಕಿಸಿ ಕೊರಳನು
ಹುಡುಕುವೆ ಏನಲ್ಲಿ?

ಕಾಳನು ಹುಡುಕುತ
ನೀರನು ನೋಡುತ
ಅಲೆಯುವೆ ಏಕಿಲ್ಲಿ?

ಕಾಳನು ಕೊಟ್ಟು
ನೀರನು ಕುಡಿಸುವೆ
ಆಡಲು ಬಾ ಇಲ್ಲಿ

ಹಣ್ಣನು ಕೊಟ್ಟು
ಹಾಲನು ನೀಡುವೆ
ನಲಿಯಲು ಬಾ ಇಲ್ಲಿ

-ಎ.ಕೆ.ರಾಮೇಶ್ವರ

Thursday, September 11, 2008

ಗಿಂಡಿ Vs ವಾಟರ್ ಬಾಟಲ್

ಬಾಟಲ್ ನನ್ನ ಒಲವಿನ ವಾಟರ್ ಬಾಟಲ್...

**********
ನನಗಾಗ ಸುಮಾರು ನಾಲ್ಕು ವರ್ಷವಿರಬಹುದು.
ಒಂದು ದಿನ ಅಟ್ಟದಲ್ಲಿ ಏನೋ ಹುಡುಕುತ್ತಿದ್ದ ಅಮ್ಮ ಹಳೆ ಪಾತ್ರೆಗಳ ನಡುವೆ ಸುಖವಾಗಿ ಮಲಗಿದ್ದ ಸಣ್ಣ ಗಿಂಡಿಯೊಂದನ್ನು ಅಪ್ಪಿ ತಪ್ಪಿ ಹೊರ ತೆಗೆದು ಹಾಕಿಬಿಟ್ಟರು ಮತ್ತು ಆ ಪಾಪದ ಪ್ರಾಣಿ ನನ್ನ ಕಣ್ಣಿಗೆ ಆಕ್ಷಣ ಬಿದ್ದು ಬಿಟ್ಟಿತು
ಶುರುವಾಯಿತಲ್ಲ ಆ ಗಿಂಡಿಗೆ ಶನಿ ದೆಸೆ...

"ಗಿಂಡಿ ತುಂಬಾ ಪುಟ್ಟ ಪಾಪುಗಳು ಹಾಲು ಕುಡಿಯುವುದು ಕಣೆ" ಅಂತ ಅಮ್ಮ ಎಷ್ಟೆಷ್ಟು ಸಮಜಾಯಿಸಿದರೂ ಕೇಳದೆ ನಾನು ಇನ್ನು ಮೇಲೆ ಗಿಂಡಿಯಲ್ಲೇ ಹಾಲು ಕುಡಿಯುವುದು ಅಂತ ಹಟಮಾಡತೊಡಗಿದೆ
ಅಷ್ಟೊತ್ತಿಗೆ ನನ್ನ ತಂಗಿ ಕೂಡಾ ಲೋಟದಲ್ಲಿ ಕುಡಿಯಲು ಶುರು ಮಾಡಿದ್ದಳೆಂದರೆ ಮನೆಯವರಿಗೆಲ್ಲಾ ನನ್ನ ಹಟ ಎಷ್ಟು ತಮಾಶೆ ಎನ್ನಿಸಿರಬೇಡ...!

`ಸರಿ ಕುಡ್ಕೋ ಹೋಗ್' ಅಂತ ಅಮ್ಮ ಸುಮ್ಮನಾಗಿ ಬಿಟ್ಟರು
ಆ ಗಿಂಡಿಯಲ್ಲಿ ಹಾಲು ಹಾಕಿದರೆ ಅದು ಸೋರಲು ಶುರವಾಗಬೇಕೇ..?
ನಾನು ಬಿಡುತ್ತೇನೆಯೇ...ಗಿಂಡಿ ತಳದಲ್ಲಿ ಒಂದು ತಟ್ಟೆ ಇರಿಸಿಕೊಂಡು ಕುಡಿಯಲೆತ್ನಿಸಿದೆ
ಹೇಳೀ ಕೇಳಿ ಅದು ಪಾಪುಗಳು ಕುಡಿಯುವ ಗಿಂಡಿ ಒಂದು ಸಾರಿಗೆ ಕಾಲು ಲೋಟ ಹಾಲು ಹಿಡುಸುತ್ತಿತ್ತು ಅಷ್ಟೇ
ಹಾಕಿದ ಹಾಲೆಲ್ಲಾ ಸುರಿದು ಹೋದರೆ ಒಂದು ಲೋಟ ಹಾಲು ಕುಡಿಯಲು ನಾನೆಷ್ಟು ಶ್ರಮ ಪಟ್ಟಿರಬಹುದು ಯೋಚಿಸಿ..
ನಾನು ಛಲ ಬಿಡದ ತ್ರಿವಿಕ್ರಮನಂತೆ ಆ ತೂತು ಗಿಂಡಿಯಲ್ಲೇ ಹಾಲು ಕುಡಿಯತೊಡಗಿದೆ
ನನ್ನ ಗಿಂಡಿ ಹುಚ್ಚು ಎಲ್ಲಿಗೆ ಹೋಯಿತೆಂದರೆ ಗಿಂಡಿಯಲ್ಲಿ ನೀರು ತುಂಬಿಕೊಂಡು ದಿನವೆಲ್ಲಾ ಕುಡಿಯಲು ಶುರು ಮಾಡಿದೆ
ಕೊನೆಗೆ ನೀರು ಕುಡಿದೂ ಕುಡಿದೂ ರಾತ್ರಿ ಹೊಟ್ಟೆ ನೋವು ಬಂತು
ನಾನು ಗಿಂಡಿಗೆ ಬೈ ಬೈ ಹೇಳಿದ್ದು ಹೀಗೆ...
***********


ಹಾಲಿಗಿಂಥ ನೀರೇನೇ ಚಂದವೂ....
ತುತ್ತು ಅನ್ನತಿನ್ನದೇ ಇದ್ದರೂ ಹತ್ತು ಬಾಟಲ್ ನೀರು ಕುಡಿಯಿರಿ...
ಕಾವೇರಿಗೇ ಜೈ...

ಯಾರೇ ಕೂಗಾಡಲೀ...
ನೀರೇ ನಿನಗೆ ಸಾಟಿ ಇಲ್ಲ...
ಅರೆ ಹೊಯ್ ಅರೆ ಹೊಯ್
ಟುರ್ ಬ್ಯಾ.....
**************
ಆರವ್ ಹತ್ತಿರ ಇದ್ದ ವಾಟರ್ ಬಾಟಲ್ ನೋಡಿ ಅಮರ್ತ್ಯ ತುಂಬಾ ಆಸೆ ಪಟ್ಟಿದ್ದರಿಂದ ಅವನಿಗೂ ವಾಟರ್ ಬಾಟಲ್ ಕೊಡಿಸಿದ್ದೇವೆ
ಮೂರು ದಿನದಿಂದ ಏನೂ ತಿನ್ನದೆ ಹಾಲು ಕೂಡಾ ಕುಡಿಯದೆ ಬರೀ ನೀರು ಕುಡಿಯುತ್ತಿದ್ದಾನೆ
`ಸರಿ ಕುಡ್ಕೋ ಹೋಗ್' ಅಂತ ಬಿಟ್ಟು ಬಿಡಲು ನನಗೇಕೋ ಆಗುತ್ತಿಲ್ಲ
ಇವನಿಗೆ ಹೊಟ್ಟೆ ನೋವು ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೇನೆ
ಅವನು ಘಳಿಗೆಗೊಂದು ಸಾರಿ ಉಚ್ಚೆ ಮಾಡಿಕೊಂದು ನನ್ನನ್ನು ಸತಾಯಿಸುತ್ತಿದ್ದಾನೆ.

Thursday, September 4, 2008

ಪಾರ್ಕಿ ಗೆ ಹೋದಾಗ...




ಅಮರ್ತ್ಯನನ್ನೂ ಆರವ್ ನನ್ನೂ ಒಂದು ಭಾನುವಾರ ಪಾರ್ಕಿಗೆ ಕರಕೊಂಡು ಹೋಗಿದ್ದೆವು ಇಬ್ಬರೂ ಕುಣಿದು ಕುಪ್ಪಳಿಸಿದರು
ಜಾರು ಬಂದೆ ಜಾರಿದರು ಆಟದ ಕುದುರೆಸವಾರಿ ಮಾಡಿದರು ಮತ್ತು ಚೆಂಡಾಡಿದರು ಫೋಟೋ ತೆಗೆದದ್ದು ಸೋಮ್ ಅಂಕಲ್


Friday, August 29, 2008

ನಂದಗೋಕುಲದಲ್ಲಿ ಇಬ್ಬರು ಕೃಷ್ಣರು!




ಮೊನ್ನೆ ಕೃಷ್ಣ ಜನ್ಮಾಷ್ಟಮಿ ಯ ದಿನ ಅಮರ್ತ್ಯನಿಗೂ ಅವನ ಸ್ನೇಹಿತ ಆರವ್ ನಿಗೂ ಕೃಷ್ಣನ ಅಲಂಕಾರ ಮಾಡಿದ್ದೆವು
ಇಬ್ಬರು ತುಂಟ ಕೃಷ್ಣರೂ ಮನೆತುಂಬಾ ಓಡಾಡಿ ನಗು ಚೆಲ್ಲಿ ನಮ್ಮೆಲ್ಲರನ್ನೂ ನಲಿದಾಡಿಸಿದರು