Saturday, January 31, 2009

ಸ್ಯಾನ್ ಆಂಟೋನಿಯೋ ರಾಂಚ್ ನಲ್ಲಿ...

ಚೆನ್ನಾಗಿದೆ ಈ ಜಾಗ.....

ನಟ್ ಮೆಗ್, ನಿನ್ನ ಮುಟ್ ಲಾ?

ಹೀಗೆ ಒಂದು ಪೋಸು...

ನೋಡಿಲ್ಲಿ ನಾನೆಲ್ಲಿದ್ದೀನಿ ಅಂತಾ....

ಅಂತೂ ಮೇಲೆ ಹತ್ತಿ ಕೂತಿದ್ದಾಯ್ತು...

ಅಮ್ಮನ ಕೋಟು ಹಾಕ್ಕೊಂಡರೆ ತುಂಬಾ ದೊಡ್ದು...

ಅಪ್ಪನ ಕೈ ಹಿಡ್ ಕೊಂಡ್ ನಡೀ ಬಹುದು.... ಪರವಾಗಿಲ್ಲ...


ಹಿಂದೆ ಕೈಕಟ್ಟಿಕೊಂಡು ನಡ್ಯೋದೇ ನನ್ ಸ್ಟೈಲು...



ಅದ್ಯಾಕೆ ಹಂಗ್ ನೋಡ್ ತಿ ದೀರಾ...ನನ್ನನ್ನ್ ಯಾವತ್ತೂ ನೋಡಿಲ್ದೇ ಇರೋತರಾ....

Saturday, January 24, 2009

ಜನವರಿಯ ಚಳಿಗೆ...

ಜನವರಿಯ ಛಳಿಗೆ ಮಕಮಲ್ಲಿನ ಟೋಪಿ ತೊಟ್ಟ ಕಿಟ್ಟ!

Monday, January 12, 2009

ಎಳ್ಳು ಎರೆವ ಹಾಡು

ಅಮರ್ತ್ಯನಿಗೆ ಎಳ್ಳು ಎರೆದ ಹಾಡು

ಮುತ್ತಿನ ಹಸೆ ಬರೆದು ರತ್ನದ ಮಣೆ ಹಾಕಿ
ರೇಶ್ಮೆ ಸೀರೆಯುಟ್ಟ ನೀರೆಯರು
ಹಸೆಗೆ ಬಾ ಅಮರ್ತ್ಯ ಕುಮಾರ
ಎಂದು ಕರೆದರು...


ಮುದ್ದು ಮುಖದ ತುಂಬ ಮಲ್ಲಿಗೆಗೆ ನಗು ಚೆಲ್ಲುತ್ತ
ಮೆಲ್ಲ ಮೆಲ್ಲನೆ ಅಂಬೆಗಾಲಿಡುತ
ಅಮರ್ತ್ಯ ಕುಮಾರನು ಬಿಂಕದಿ
ಹಸೆಗೆ ಬಂದನು...


ಅಂದದ ಹಸೆಯಲ್ಲಿ ಅಮರ್ತ್ಯನ ಕುಳ್ಳಿರಿಸಿ
ಅಲ್ಲಿ ನೆರೆದ ಲಲಿತಾಂಗಿಯರೆಲ್ಲ
ಬೆಳ್ಳಿಯ ಬಟ್ಟಲಲಿ ಎಳ್ಳು ಎರೆದರು
ಚೆಂದದಿ ನಗುನಗುತಲೀ....


ಎಳ್ಳು ಬೆಲ್ಲ ಕೊಬ್ಬರಿಯ ಎರೆದರು
ಎಲಚಿ ಹಣ್ಣು ಒಣದ್ರಾಕ್ಷಿ ಬಾದಾಮಿಗಳನೆರೆದರು
ಸಾಲದೆಂದು ಮುತ್ತಿನ ಮಣಿಗಳ
ಮತ್ತೆ ಸುವರ್ಣ ಪುಷ್ಪಗಳನೆರೆದರು...


ನಗುನಗುತ ಬಾಳಪ್ಪ ಅಮರ್ತ್ಯ ಕುಮಾರ
ಸಮವಾದ ದೃಷ್ಟಿ ಹಿರಿದಾದ ಮನಸು
ಆರೋಗ್ಯ ಸೌಖ್ಯ ಸುಖಗಳು ನಿನಗೊದಗಲೀ
ಜಯಮಂಗಳ ನಿತ್ಯ ಶುಭ ಮಂಗಳ...

ಕಳೆದ ವರ್ಷ ಅಮ್ಮಣ್ಣನಿಗೆ ಎಳ್ಳು ಎರೆಯುವಾಗ ಹಾಡಲು ನನಗೆ ಯಾವ ಹಾಡೂ ಸಿಗಲಿಲ್ಲವೆಂದು ನಂತರ ನಾನೇ ಬರೆದುಕೊಂಡಿದ್ದು ಈ ಹಾಡು ಈ ವರ್ಷ ಹಾಡೋಣವೆಂದು ಕೊಂಡಿದ್ದೇನೆ ನೀವೂ ನಿಮ್ಮಮಗುವಿಗೆ ಹಾಡಲಿ ಅಂತ ಹಬ್ಬಕ್ಕೆ ಮುಂಚೆಯೇ ಹಾಕಿದ್ದೇನೆ

ಎಲ್ಲರಿಗೂ ಸಂಕ್ರಾಂತಿ ಶುಭಾಶಯಗಳು

Friday, January 2, 2009