Friday, April 24, 2009

ಕೇಕ್ ಮೆದ್ದ ನಮ್ಮ ಕೃಷ್ಣ.....

ಕೇಕ್ ಮೆದ್ದನಮ್ಮಾ ಕೃಷ್ಣಾ.. ಅಂತ ನಾವೀಗ ಹಾಡುವುದು...ಬೆಣ್ಣೆ ಕದ್ದನಮ್ಮ ಹಾಡನ್ನ...
ಮೊನ್ನೆ ಅಮ್ಮನ ಬರ್ತ್ ಡೇಗೆಂದು ರಶ್ಮಿ ಆಂಟಿ ಮಾಡಿದ್ದ ಕೇಕನ್ನು ನಮ್ಮ ಕಿಟ್ಟ ಮೆದ್ದ ಬಗೆ...

ಕಷ್ಟ ಪಟ್ಟು ಡೈನಿಂಗ್ ಟೇಬಲ್ ಹತ್ತಿ....




ಅಚ್ಚುಕಟ್ಟಾಗಿ ಕಾಲಮೇಲೆ ಕಾಲು ಹಾಕಿ ಕೂತು ಕೇಕ್ ಗೆ ಕೈ ಹಾಕಿ.......

ಹೀಗೆ ತಿಂದು ಬಿಟ್ಟನು...!



ನೋಡಿಲ್ಲಿ.... ಹಳದಿ ಮೀಸೆ....


Wednesday, April 15, 2009

ಆಳ್ವಾರರ 'ಮುಕುಂದ'



ಕ್ಷೀರಸಾಗರತರಂಗಶೀಕರಾ-
ಸಾರತಾರಕಿತ ಚಾರುಮೂರ್ತಯೇ
ಭೋಗಿಭೋಗಶಯನೀಯಶಾಯಿನೇ
ಮಾಧವಾಯ ಮಧುವಿದ್ವಿಷೇ ನಮಃ

ಕ್ಷೀರಸಾಗರದ ಅಲೆಗಳ ತುಂತುರುಗಳು ಯಾವ ಸುಂದರವಾದ ಶರೀರದ ಮೇಲೆ ನಕ್ಷತ್ರಗಳಂತೆ ಶೋಭಿಸುವುವೋ,ಯಾವನು ಆದಿಶೇಷನ ಕುಂಡಲರೂಪವಾದ ಹಾಸಿಗೆಯ ಮೇಲೆ ಯೋಗನಿದ್ರೆಯಲ್ಲಿರುವನೋ ಆ ಮಧುಸೂದನನಾದ ಮಾಧವನಿಗೆ ನಮಸ್ಕಾರ.
-ಕುಲಶೇಖರಾಳ್ವಾರರ 'ಮುಕುಂದ ಮಾಲೆ'ಯಿಂದ

Saturday, April 11, 2009

ಕಂದಯ್ಯ ನಿನ್ನಾಸೆ ನನಗೇ ಅನುಗಾಲ...



ಬೆಟ್ಟಕ್ಕೆ ಬಿದಿರಾಸೆ ಹೆಣ್ಣಿಗೆ ತೌರಾಸೆ
ಬಿತ್ತಿದ ಬೆಳೆಗೇ ಮಳೇಯಾಸೆ ಎನ್ನಯ್ಯ
ನಿನ್ನಾಸೆ ನನಗೇ ಅನುಗಾಲ


ಯಾರಾಸೆ ನಿನಗೆ ಪಾರಿವಾಳದಾಸೆ
ನೀರಾಸೆ ಮರದ ನೆರಳಾಸೆ
ಕಂದಯ್ಯ ನಿನ್ನಾಸೆ ನನಗೇ ಅನುಗಾಲ


ಕಾಲಾಸೆ ಹೆಳವಂಗೆ ಕಣ್ಣಾಸೆ ಕುರುಡಂಗೆ
ವಸ್ತ್ರದ ಆಸೆ ಬಡವೀಗೆ ಬಲಯ್ಯ
ನಿನ್ನಾಸೆ ನನಗೇ ಅನುಗಾಲ

Thursday, April 9, 2009

ಅಮ್ಮನಿಗೆ ಸಹಾಯ...!

ಅಮ್ಮನಿಗೆ ಸಹಾಯ ಮಾಡಬೇಕೆಂದು ಕಿಟ್ಟಣ್ಣನಿಗೆ ಆಗಾಗ ಉಮೇದು ಬಂದು ಬಿಡುತ್ತದೆ
ಅವನು ಸಹಾಯ ಮಾಡುವ ಪರಿ ಹೇಗೆಂದರೆ ಹೀಗೆ...!

Monday, April 6, 2009

ಕಿಟ್ಟಣ್ಣನ ಯುಗಾದಿ

ಈ ಯುಗಾದಿಯನ್ನು ಕಿಟ್ಟ ಅಮ್ಮ ಮಾಡಿದ ಸಕ್ಕರೆ ಕಾಳುಗಳ ಹಾರ ತೊಡಿಸಿ ಕೊಂಡು ಆಚರಿಸಿ ಕೊಂಡ


Actuallay,ಸಕ್ಕರೆಕಾಳಿನ ಹಾರ ಕಿಟ್ಟನ ಬೊಂಬಾಯಿ ಅಜ್ಜಿಯ idea....


ಮರಾಠಿಗರು ನಮ್ಮ ಯುಗಾದಿದಿನವೇ ಆಚರಿಸುವ ಅವರ ಹೊಸ ವರ್ಷ'ಗುಡಿಪದ್ವಾ' ದಂದು ಪುಟ್ಟ ಮಕ್ಕಳಿಗೆ ಸಕ್ಕರೆಕಾಳಿನ ಹಾರ
ತೊಡಿಸಿ ಅಲಂಕಾರ ಮಾಡುತ್ತಾರೆ.ನಮ್ಮ ಉತ್ತರಕರ್ನಾಟಕದಲ್ಲೂ ಈ ಸಂಪ್ರದಾಯವಿದೆ


ಕಿಟ್ಟನಿಗೆ ಸಕ್ಕರೆ ಜೆಲ್ಲಿ ಕಾಳುಗಳು ಬಲು ಇಷ್ಟ ಆದವು



ಕಿಟ್ಟನಿಗೆ ಸಕ್ಕರೆಕಾಳುಗಳ ಮಾಲೆ ಬೇಏರಿಯಾದಲ್ಲಿ ಸಿಗದೇ ಹೋದ್ದರಿಂದ ಅಮ್ಮ ಸಕ್ಕರೆಯ jelly bean ಹಾರ ಮಾಡಿದಳು
(ಹಾರ ಮಾಡುತ್ತಾ ಆರು ಸೂಜಿ ಮುರಿದಳು!!!)



ಕೆನ್ನೆಯಲ್ಲಿ ತುಂಬಿಕೊಂಡಿರೋದು ಏನು...?



ನಿಮ್ಗೂ ಬೇಕಾ...?

ಇಗೊಳ್ಳಿ....ಯುಗಾದಿ ಶುಭಾಶಯ ಜೊತೆ ಸಕ್ಕರೆ ಕಾಳು


ಅಮ್ಮ ಕಿಟ್ಟನಿಗೆ ಆರತಿ ಮಾಡಿದ್ದು ಹೀಗೆ....