Friday, July 25, 2008

ಅಮರ್ತ್ಯ ಕುಮಾರಿಯವರಿಂದ ಹೊಸ ಪಕ್ಷ ಸ್ಥಾಪನೆ

(ತೆರೆ ತೆರೆದಾಗಿನ ದೃಶ್ಯ)
(ಅಮರ್ತ್ಯಕುಮಾರಿಗೆ ಕೋಪ ಬಂದಿದೆ.......)

ಅಮ್ಮ ಯಾವಾಗ್ಲೂ ಅದು ತಿನ್ನು ಇದು ತಿನ್ನು ಅಂತಿರ್ತಾಳೆ....



(ಕುಮಾರಿ ದಪ್ಪ ಮುಖ ಮಾಡಿಕೊಂಡು ಸುಖಾಸನದ ಮೂಲೆಯಲ್ಲಿ ಕೂತಿದ್ದಾಳೆ )
ಬುಂ...ಬುಂ....


ಆಗ ಅಲ್ಲಿಗೆ ಬಂದಿದ್ದು ಒಂದು ದಷ್ಟ ಪುಷ್ಟ ವಾದ ಮಾರ್ಜಾಲ...!
ಅಮರ್ತ್ಯ ಕುಮಾರಿಯು ನಗು ಮುಖದಿಂದ ಹೊಸ ಉಪಾಯವೊಂದನ್ನು ಯೋಚಿಸಿ ಕೊಂಡವಳಾಗಿ ಬಿಲ್ಲಿ ರಾಜನನ್ನು ಮಾತನಾಡಿಸುತ್ತಾಳೆ



ಯೂ...ಬೆಕ್ಕು ರೇಖಾ.... ಇದೀಗ ಹೊಳೆಯಿತು ಪರಿಹಾರ....ತಡಿ ಬಂದೆ.....



ಊಊಊಊಊಊಊಊಊಊಊಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಪ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್




ತಡಿ.... ತಡಿ...... ಮೀಈಈಈಈಈಈಈಈಈಈಈಈಈಈಯಾಆಆಆಆಆಆ ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್ವ್
ಇಳಿತಿದೀನಿ .......


ಧಮ್...ಧಡಮ್...ಧಡಮ್.....(ಅಂತೂ ವಿಮಾನ ಲ್ಯಾಂಡ್ ಆಯಿತು...)



ನನ್ನ ಯೋಚನೆ ಯೋಜನೆ ಏನು ಅಂದ್ರೆ......
ನಾನೊಂದು ಹೊಸ ಪಕ್ಷ ಮಾಡುತ್ತಿದ್ದೇನೆ
"ಊಟ ಬೇಡ" ಪಕ್ಷ
ಮಕ್ಕಳಿಗೆ ಊಟ ಮಾಡಿಸುವ ಅಪ್ಪ ಅಮ್ಮನಿಗೆ ಧಿಕ್ಕಾರ....!

ನೀವೂ ನಂ ಪಕ್ಷ ಸೇರ್ತೀರೇನೂ....?
ಬನ್ನಿ ...ಬನ್ನಿ...
ನಮ್ಮ ಪಕ್ಷ ಸೇರಿದರೆ ನೀವು.....
ಊಟ ಮಾಡಬೇಕಿಲ್ಲ
ಹಾಲು ಕುಡಿಯ ಬೇಕಿಲ್ಲ
ಹಣ್ಣು ,ತರಕಾರಿ ಹತ್ತಿರ ಸಹ ಹೋಗಬೇಕಿಲ್ಲ
ನಮ್ಮ ಪಕ್ಷಕ್ಕೆ ನಿಮ್ಮ ಭಯಂಕರ ಬೆಂಬಲ ನೀಡಿ
ಊಟ ಮಾಡದಿರುವದು ನಮ್ಮ ಜನ್ಮಸಿದ್ದ ಹಕ್ಕು
and we shall have it.....
(ಅಸಂಖ್ಯಾತ ಬೆಂಬಲಿಗರು ಅಮರ್ತ್ಯ ಕುಮಾರಿಯವರ ಹೊಸ ಪಕ್ಷ ಸೇರಲು ತುದಿಗಾಲಲ್ಲಿ ಅಂಬೆಗಾಲಿಡುತ್ತಾ, ತಪ್ಪು ಹೆಜ್ಜೆ ಇಟ್ಟು ಬೀಳುತ್ತಾ ಏಳುತ್ತಾ ತಮ್ಮ ಬೆಂಬಲ ಸೂಚಿಸುತ್ತಿರಲು ತೆರೆ ನಿಧಾನವಾಗಿ ಬೀಳುತ್ತದೆ)

5 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಾಲಾ...
ತುಂಬ ಚೆನಾಗಿವೆ ಫೋಟೋಸ್ ಮತ್ತು ಅವಕ್ಕೆ ನೀಡಿದ ಡಿಸ್ಕ್ರಿಪ್ಷನ್! :)
ಅಮರ್ತ್ಯ ಕುಮಾರಿ(?)ಯವರ ಹೊಸ ಪಕ್ಷಕ್ಕೆ ನಮ್ಮನೆಯಿಂದಲೂ ಒಂದು ಓಟು ಖಂಡಿತ ಸಿಗೋದ್ರಲ್ಲಿ ಅನುಮಾನವಿಲ್ಲ. :)

Unknown said...

ಪಕ್ಷ ಸೇರಿದವರನ್ನು ಹುಷಾರಾಗಿ ನೋಡಿಕೊಳ್ಳಿ... ಇಲ್ಲವಾದರೆ ಪಕ್ಷಾಂತರವಾದೀತು... ಚಿತ್ರಗಳೂ ಚೆನ್ನಾಗಿದೆ.ಹೊಸ ಪಕ್ಷಕ್ಕೆ ನನ್ನದೊಂದು ಜೈಕಾರ!
-ಜಿತೇಂದ್ರ

Anonymous said...

Mala
nanna maGanige khushiyo khushi, anthoo obbanadaroo dhairya maaDidnalla antha,,svalpa doDavanaddarinda ooDuthale paksha seralu baruthiddane.chennagi varNisiddeeri.virodha pakshadalli appa amma kuLithu Enu maDabahudu antha thiLisidare oLLeyadu.
PSP

Jagali bhaagavata said...

ಸೂಪರಾಗಿದೆ. ನನ್ನನ್ನೂ ಸೇರಿಸ್ಕೊಳ್ಳೊ ನಿನ್ ಪಾರ್ಟಿಗೆ....

ನಿಂತಿರೋ ಪೋಸ್ ನೋಡಿದ್ರೆ ಯಾರಿಗೋ ರೋಸ್ ಕೊಡ್ತಿರೋ ಹಾಗಿದೆ:-)

ಕುಕೂಊ.. said...

ಚಿತ್ರ ಮತ್ತು ಅದಕ್ಕೆ ನಿಮ್ಮ ನಿರ್ವಹಣೆ ತುಂಬಾ ಚನ್ನಾಗಿದೆ