Friday, August 1, 2008

ಮೊಲದ ಮರಿ... ಮೊಲದ ಮರಿ...


ಮೊಲದ ಮರಿ ಮೊಲದ ಮರಿ
ಆಡು ಬಾರೇ..
ಚುಪುಕೆ ಚುಪುಕೆ ಚುಪುಕೆ ಚುಪುಕೆ
ನೆಗೆದು ಬಾರೆ

ದೊಡ್ಡದಾದ ಕಾಡಿನೊಳಗೆ
ಏನು ಮಾಡುವೆ
ಹೆಡ್ಡ ನೀನು ಪೊದರಿನೊಳಗೆ
ಏಕೆ ಅಡಗುವೆ?

ಪೊದರಿನಿಂದ ಪೊದರ ಬಳಿಗೆ
ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ
ಸೊಗಸಿನೂಟ

ಗಿಡ್ಡ ಬಾಲ ದೊಡ್ದ ಕಿವಿಯು
ನಿನಗೆ ಚೆಂದ
ಎದ್ದು ಎನ್ನ ಬಳಿಗೆ ಬಂದು
ಆಡೊ ಕಂದ

ಗೂಡು ಕಟ್ಟಿತಿಂಡಿ ಕೊಡುವೆ
ಪ್ರೀತಿಯಿಂದ
ಕಾಡಬಿಟ್ಟು ಊರ ಸೇರೋ
ಮೊಲದ ಕಂದಾ

ಮುದ್ದು ಮುದ್ದು ಮಾತುಗಳನು
ನಿನಗೆ ಕಲಿಸುವೇ
ಮುದ್ದು ಮಾಡಿ ಪ್ರೀತಿಯಿಂದ
ನಿನ್ನ ಸಲಹುವೇ
**********
ನನ್ನ ತಂಗಿ ಎರಡು ಜುಟ್ಟು ಕಟ್ಟಿಕೊಂಡು ಈ ಮೊಲದ ಹಾಡು ಹಾಡುತ್ತಾ ಜಿಗಿಯುತ್ತಾ ಡ್ಯಾನ್ಸ್ ಮಾಡುತ್ತಿದ್ದುದು ನನಗೆ ಇನ್ನೂ ಚೆನ್ನಾಗಿ ನೆನಪಿದೆ, ಇದು ನನಗೂ ಮೆಚ್ಚಿನ ಹಾಡಾಗಿತ್ತು...
*******
ಚಿತ್ರ ಕೃಪೆ-ಲೈವ್ ಸರ್ಚ್

7 comments:

Jagali bhaagavata said...

ಮೊಲದ ಮರಿ ಮೊಲದ ಮರಿ
ಆಡು 'ಬಾರೇ'......

'ಹೆಡ್ಡ' ನೀನು ಪೊದರಿನೊಳಗೆ
ಏಕೆ ಅಡಗುವೆ?

ಈ ಮೊಲದ ಮರಿ ಗಂಡಾ ಹೆಣ್ಣಾ?

ತೇಜಸ್ವಿನಿ ಹೆಗಡೆ said...

ಮಾಲಾ ಅವರೆ,

ಹಾಡು ತುಂಬಾ ಚೆನ್ನಾಗಿದೆ. ನನ್ನ ಪುಟ್ಟ ಪೋರಿಗೆ ಖಂಡಿತ ಕಲಿಸುವೆ. ಬ್ಲಾಗ್ ತುಂಬಾ ಇಷ್ಟವಾಯಿತು.

mala rao said...

ಭಾಗವತರೇ,
ಮೊಲದ 'ಮರಿ'ಯನ್ನೂ ಬಿಡುವುದಿಲ್ಲವಲ್ಲ ನೀವು..!

mala rao said...
This comment has been removed by the author.
mala rao said...

ತೇಜಸ್ವಿನಿ
ನಿಮಗೆ ಗೋಕುಲ ಇಷ್ಟವಾಗಿದ್ದು ಸಂತೋಷ
ನಿಮ್ಮ ಪೋರಿಯ ಛಾಯಾಚಿತ್ರmala.rao@gmail.comಗೆ ಕಳಿಸಿದರೆ ಗೋಕುಲದಲ್ಲಿ ಹಾಕುವೆ

August 7, 2008 11:41 PM

ತೇಜಸ್ವಿನಿ ಹೆಗಡೆ said...

ಮಾಲಾ ಅವರೆ,

ತುಂಬಾ ಧನ್ಯವಾದ. ಖಂಡಿತ ಕಳುಹಿಸುವೆ.

ಕುಕೂಊ.. said...

ಹಾಡು ತುಂಬಾ ಸೊಗಸಾಗಿದೆ.