ಹೈಕಾಂಟೋರ್ ಅಂದರೇನು ಅಂತ ನಿಮಗೆ ಗೊತ್ತೇ?
ಕಳೆದ ಒಂದುವಾರದಿಂದ ನನಗೂ ಹಾಗೆಂದರೇನೂ ಅಂತ ಗೊತ್ತಿರಲಿಲ್ಲ
ಹಾಯ್ ಕಾಂಟೋರ್,ಹೈಕ್ಯಾಂಟೂರ್ ಎಂದೆಲ್ಲ ಅಮ್ಮು ಕರೆಯುವುದು ಏನನ್ನ?ತಲೆ ಕೆರೆದುಕೊಳ್ಳುತ್ತಿದ್ದೆ
ಇವತ್ತು ಅದು ಹೆಲಿಕಾಪ್ಟರ್ ಇರಬಹುದೆಂದು ಈಗ ಡೌಟು ಬರುತ್ತಿದೆ!
*************
ಕೆಲವೊಮ್ಮೆ ಹೀಗಾಗುತ್ತೆ
ಅಮ್ಮು ಏನೇನೋ ಹೊಸ ಪದಗಳನ್ನು ಹೇಳೀದಾಗಲೆಲ್ಲಾ ಅದೇನಿರಬಹುದೆಂದು ಪಝಲ್ ಬಿಡಿಸುವುದೇ
ದೊಡ್ಡ ಕೆಲಸ ಆ ಪದ ಏನೆಂದು ಕಂಡು ಹಿಡಿದಾಗ ದೊಡ್ಡ ಬಹುಮಾನ ಗೆದ್ದ ಖುಷಿ!
ಡೋವಾ= ಡೋರಾ ಎಂಬ ಕಾರ್ಟೂನ್
ಬ್ಯಾಕನಾಸ್=ಬ್ಯಾಕ್ ಯಾರ್ಡಗನ್ಸ್ (ಇದು ಮೊದಲು ಬಾಸ್ಕಿನಾನ್ಸ್ ಆಗಿತ್ತು!)
ಆವಿ=ಆಲಿ
ಎಲ್ಲ ಬಾರಿಯೂ ನಾವು ಪಝಲ್ ಬಿಡಿಸುವುದರಲ್ಲಿ ಜಯಶಾಲಿಗಳಾಗುವುದಿಲ್ಲ
ಸೋತಿದ್ದೂ ಇದೆ
ಈ ಕೆಲವು ಪದಗಳು ಏನೆಂದು ನಮಗೆ ಇವತ್ತಿಗೂ ಗೊತ್ತಿಲ್ಲ ಅಮ್ಮು ಇವುಗಳನ್ನು ಹೇಳುವುದನ್ನು ನಿಲ್ಲಿಸಿ ಆಯಿತು
ಸೋ ಗೊತ್ತಾಗುವ ಸಾಧ್ಯತೆಯೂ ಇಲ್ಲ!
ದುಷ್ಟಕ್ ಎಂದರೇನೂ? ಡೋರ್ ಸ್ಟಕ್ ಇರಬಹುದಾ?
ಹಾಪಿಟ್ ಅಂದರೆ ಏನು ಅರ್ಥ ಅಂತ ಕೊನೆಗೂ ನಮಗೆ ಗೊತ್ತಾಗಲೇ ಇಲ್ಲ!
Subscribe to:
Post Comments (Atom)
No comments:
Post a Comment