Wednesday, June 22, 2011

ಕಿಟ್ಟನೂ, ವಿಕ್ಸೂ .....


ನಮ್ಮೂರಲ್ಲಿ ಒಂದೆರಡು ದಿನಗಳಿಂದ ತುಂಬಾ ಸೆಕೆ
ನೆನ್ನೆ ರಾತ್ರಿ ನನಗೆ ಸೆಕೆ ಯಿಂದಾಗಿ ವಿಪರೀತ ತಲೆ ನೋಯುತ್ತಿತ್ತು
ಹಾಸಿಗೆಯಲ್ಲಿ ಅಂಗಾತ ಮಲಗಿಕೊಂಡು ಸೈಡ್ ಟೇಬಲ್ ಮೇಲಿದ್ದ
ವಿಕ್ಸ್ ಹಚ್ಚಿ ಕೊಳ್ಳೋಣವೆಂದು ಕೈಗೆತ್ತಿಕೊಂಡೆ
ಇಲ್ಲಿ ಅಮೆರಿಕಾದಲ್ಲಿ ಸಿಗುವ ವಿಕ್ಸ್ ನಮ್ಮ ಭಾರತದ ವಿಕ್ಸನ ವಾಸನೆ ಇರುವುದಿಲ್ಲ
ಅಥವಾ ಅದರ ವಾಸನೆ ನನಗೆ ಅಷ್ಟು ಹಿತ ಕೊಡುವುದಿಲ್ಲ
ಹಾಗಾಗಿ ಊರಿಗೆ ಬಂದಾಗಲೆಲ್ಲಾ ದೊಡ್ಡ ವಿಕ್ಸ್ ಡಬ್ಬಿ ತರುತ್ತೇನೆ
ಮಲಗಿಕೊಂಡು ಆಕಳಿಸುತ್ತಾ ಮುಚ್ಚಳ ತೆರೆದರೆ ತಟ ಪಟ ಅಂತ ವಿಕ್ಸು ಹಣೆ ಮೇಲೆ ಬಿತ್ತು !
ಸಕೆಗಾಲದಲ್ಲಿ ಕೊಬ್ಬರಿ ಎಣ್ಣೆಯು ನೀರಾಗುವುದು ನೋಡಿದ್ದೆ.
ಆದರೆ ವಿಕ್ಸೂ ಕರಗುತ್ತಾ ?ಇರಬಹುದೇನೋ.... ಕಲಿಗಾಲ !
ಆದರೆ ವಿಕ್ಸಿಗೆ ಈ ಸುವಾಸನೆ ಹೇಗೆ ಬಂತೋ ?
ನಿದ್ದೆಗಣ್ಣಿ ನಲ್ಲೇ ಯೋಚಿಸಿದೆ
ಹೊಳೆಯಲಿಲ್ಲ
ತೂಕಡಿಸುತ್ತಾ ನನಗೇನು ಭ್ರಮೆಯಾ ಅಂತ ಗೊಣಗಿಕೊಂಡೆ
ಹಾಸುಗೆಯ ಆಬದಿಯಿಂದ ಉತ್ತರಬಂತು` ಭ್ರಮೆಯೂ ಇಲ್ಲ ಭೂತವು ಇಲ್ಲ
ಪಕ್ಕದಲ್ಲಿ ಮಲಗಿರುವ ನಿನ್ನ ಕುಮಾರನ ಕರಾಮತ್ತು....'
ಕಿಟ್ಟ ವಿಕ್ಸ್ ಡಬ್ಬಿಯ ತುಂಬಾ ನಿವಿಯಾ ಬಾಡಿ ಲೋಶನ್ ತುಂಬಿಟ್ಟು ಬಿಟ್ಟಿದ್ದ !!!

3 comments:

Roopa said...

ಹ್ಹ ಹ್ಹ ಹ್ಹ!! ಅಮ್ಮುವಿನ ಹೊಸ ಆಟಗಳ್ಲನ್ನು ಓದಿ ನಗು ಬಂತು. ಬ್ಲಾಗ್ ಓದಿ ಖುಶಿ ಆಯ್ತು.
ಪುಟ್ಟಿಗೂ ’ವಿಕ್ಸ್ ಡಬ್ಬಿ’ ಬಲು ಇಷ್ಟ ತನ್ನ ಗೊಂಬೆಗೂ ತಲೆ ನೋವುತ್ತಿದೆ ಅಂತ ಅದಕ್ಕೆ ಹಚ್ಚಿ ಹಚ್ಚಿ ಇಡ್ತಾಳೆ:)

ವಿ.ರಾ.ಹೆ. said...

ತಲೆನೋವಿಗೂ 'ವಿಕ್ಸ್' ಹಚ್ತೀರಾ? ಅದು ಶೀತಕ್ಕಲ್ವೇನ್ರೀ? ತಲೆನೋವಿಗೆ ಅಮೃತಾಂಜನ್ನು, ಝಂಡೂಬಾಮು, ಮೆಂತೋಪ್ಲಸ್ಸು ಇತ್ಯಾದಿ..

Jagali bhaagavata said...

after one month...belated happy birthday wishes :)