Tuesday, November 6, 2007

ಯಾರೀ ಚಿಣ್ಣ...?


ಯಾರೀ ಚಿಣ್ಣ ಕೇದಿಗೆ ಬಣ್ಣ
ಘಮ ಘಮ ಬಂಗಾರ ಸಣ್ಣ
ನಕ್ಕರೆ ಸಾಕು ಬಿಚ್ಚಿದಂತೆಲ್ಲೂ
ಬೆಳಕಿನ ಪತ್ತಲವನ್ನ!

-ಎನ್.ಎಸ್.ಎಲ್. ಭಟ್ಟ

2 comments:

sritri said...

"ತಾವರೆದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು" - ಭಟ್ರು

ಸುಪ್ತದೀಪ್ತಿ suptadeepti said...

ಬೆಳಕಿನ ಹಬ್ಬದ ಹಿನ್ನೆಲೆಯಲ್ಲಿ ಬೆಳಕಿನ ಪತ್ತಲ ಬಿಚ್ಚಿದ ಚಿಣ್ಣಗೆ ಮತ್ತವನ ಅಮ್ಮ-ಅಪ್ಪಗೆ:

ಹಬ್ಬಗಳ ಹಾರದಲಿ ಪದಕ ದೀವಳಿಗೆ
ದೀಪಗಳ ಬೆಳಕಿನಲಿ ನಗುವಿರಲಿ ಜೊತೆಗೆ
ಎಲ್ಲ ಮನೆಗಳ ತುಂಬ ಸುಖಶಾಂತಿಯಿರಲಿ
ನಮ್ಮ ಹಾರೈಕೆಗಳು ನಿಮ್ಮೊಡನೆ ಬರಲಿ