Thursday, November 8, 2007

ಅಮ್ಮು ಮತ್ತು ನಕ್ಷತ್ರ


ಕಪ್ಪು ಕಪ್ಪು ಬಾನಲ್ಲಿ
ಮಿಣಿ ಮಿಣಿ ಮಿನುಗೋ ನಕ್ಷತ್ರ
ದೂರ ಯಾಕೆ ನಿಂತ್ ಬುಟ್ಟೇ
ಬೇಗ್ ಬೇಗ್ ಬಾ ನನ್ ಹತ್ರ

ನನ್ ಪುಟ್ ಪುಟ್ ಕಣ್ಗೆ ನೀನಂತೂ
ಎಷ್ಟು ಪುಟ್ ದಾಗಿ ಕಾಣ್ತೀಯಾ
ಹಾಗೇ ನಿನ್ ಪುಟ್ ಪುಟ್ ಕಣ್ಗೆ
ನಾನೂನೂ ಅಷ್ಟೇ ಪುಟ್ ದಾಗಿ ಕಾಣ್ತೀನಾ?

ಯಾರಪ್ಪಾ ಇದು ಹಾಸ್ಗೇಲ್
ಮಲ್ಕೊಂಡು,ಹೊದ್ಗೆ ಹೊದ್ಕೊಂಡು
ನನ್ ಹತ್ರ ಮಾತಾಡೋದು
ಅಂತ ಕೇಳ್ತೀಯಾ?

ನಿಂಗೂ ನನ್ ಹಾಸ್ಗೇಲೆ
ನನ್ನ ಅಮ್ಮನ್ ಪಕ್ಕ
ಬೆಚ್ಚನೆ ಜಾಗ ಕೊಡ್ತೀನಿ
ಹೇಳೂ ಕೆಳಗಿಳ್ದು ಬರ್ತೀಯಾ?

ಎಷ್ಟು ಕರುದ್ರೂ ನೀ ಬರ್ಲಿಲ್ವಲ್ಲಾ
ನಿಂಗ್ ನಿದ್ದೆ ಬರ್ತಿಲ್ವಾ?
ರಾತ್ರಿ ಪೂರಾ ಮಿಣ ಮಿಣ ಮಿನುಗಿ
ಹಗಲಲ್ ನಿದ್ದೇ ಮಾಡ್ತೀಯಾ?

ಓಕೇ ಗುಡ್ ನೈಟ್ ನಕ್ಷತ್ರ
ಮತ್ತೆ ನಾಳೆ ಸಿಗೋಣಾ
ಪ್ಲೀಸ್ ನಿದ್ದೆ ಮಾಡೋಕ್ ಟ್ರೈ ಮಾಡು
ಇಬ್ರೂ ಬೆಳಗ್ಗೆ ಆಡೋಣಾ

-ಮಾಲಾರಾವ್

4 comments:

ಸುಪ್ತದೀಪ್ತಿ suptadeepti said...

ಅಮ್ಮುವಿನಮ್ಮ, ಚಿಣ್ಣನಿಗಾಗಿ ಬರೆದ ಕವನ ಚೆನ್ನಾಗಿದೆ.

ಈ ಕೆಳಗಿನ ಕೊಂಡಿಗಳಲ್ಲಿ ಸಿಲುಕಿಕೊಂಡರೆ, ಇನ್ನೂ ಕೆಲವು ಚಿಣ್ಣರ ಹಾಡುಗಳಿವೆ, ನೋಡಿ....

http://suptadeepti.blogspot.com/2007/09/blog-post_18.html

http://suptadeepti.blogspot.com/2007/08/blog-post_16.html

http://suptadeepti.blogspot.com/2007/08/blog-post.html

ಧನ್ಯವಾದಗಳು....

ಚಿತ್ರಾ ಸಂತೋಷ್ said...

ಚಿಣ್ಣರ ಲೋಕ ನೊಡಿ ಮನ ಖುಷಿ ಖುಷಿ ...ಅಂದ ಹಾಗೆ ಮಕ್ಕಳು ಕಂಡ್ರೆ ಅಷ್ಟೂ ಇಷ್ಟಾನಾ?

Jagali bhaagavata said...

ಕವನ ಬೊಂಬಾಟಾಗಿದೆ. ಅಮ್ಮು ಫೋಟೋ ಸೂಊಊಊಊಊಊಊಊಊಊಊಊಊಊಊಊಊಪರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್.

ಮನಸ್ವಿನಿ said...

ಮುದ್ದು ಮುದ್ದಾಗಿದೆ ಅಮ್ಮು :)ಹಾಡು ಕೂಡ.