Friday, March 28, 2008

ಮಲ್ಲಕ್ಕನ ಕಥೆ..!

ಶಾಲೆಗೆ ಹೋಗೇ ಮಲ್ಲಕ್ಕ
ಪಾಟಿ ಪುಸ್ತಕ ಇಲ್ಲಕ್ಕ
ಕಸೂತಿ ತೆಗೆಯೇ ಮಲ್ಲಕ್ಕ
ಸೂಜಿ ದಾರ ಇಲ್ಲಕ್ಕ
ಮುಸುರೆ ತೊಳೆಯೇ ಮಲ್ಲಕ್ಕ
ಮೈ ಕೈ ಎಲ್ಲಾ ನೋವಕ್ಕಾ
ನೀರು ಸೇದೇ ಮಲ್ಲಕ್ಕ
ಸೇದೋ ಹಗ್ಗ ಇಲ್ಲಕ್ಕ
ಊಟಕೆ ಬಾರೇ ಮಲ್ಲಕ್ಕ
ಬಂದೆನು ಬೇಗ ಬಡಿಸಕ್ಕ
***********************
ಅಮ್ಮುವಿನಮ್ಮನ ಟಿಪ್ಪಣಿ-
ಈ ಮಲ್ಲಕ್ಕ ಯಾರು ಅಂತ ಗೊತ್ತಾಯ್ತಲ್ಲಾ...!
ನಾವೆಲ್ಲಾ ಚಿಕ್ಕವರಿದ್ದಾಗ ಇದನ್ನೇ ಹೋಲುವ 'ತೋಟಕೆ ಹೋಗೋ ತಿಮ್ಮ'
ಹಾಡುತ್ತಿದ್ದೆವು ಮಲ್ಲಕ್ಕನ ಹಾಡು ಮತ್ತು ಇತರ ಹಲವು ಮಕ್ಕಳ ಹಾಡುಗಳನ್ನು ನನಗೆ ತಮ್ಮ ಸಂಗ್ರಹದಿಂದ ಕೊಟ್ಟವರು ನಮ್ಮ ನಂಜಮ್ಮ ಟೀಚರ್ ಅವರಿಗೆ ಧನ್ಯವಾದಗಳು

No comments: