ಅವನ ಸ್ಟೀಲ್ ಪಾತ್ರೆಗಳ ಮೇಲಿನ ಮೋಹದ ಬಗ್ಗೆ ಗೊತ್ತಿತ್ತು
ಕೊನೆಗೆ ಅವನಿಗೆ ವೈರುಗಳೂ,ಬ್ಯಾಟರಿಗಳೂ ಮುರಿದ ಪೆನ್ನುಗಳೂ ಇಷ್ಟವೆಂದು ಗೊತ್ತಿತ್ತು
ಆದರೆ ಅವನ ಈ ಹೊಸಪ್ರೇಮದ ಬಗ್ಗೆ ದೇವರಾಣೆ ಗೊತ್ತಿರಲಿಲ್ಲ
ಆದಿದಿಷ್ಟು...
ಕಳೆದವಾರ ನಾನು ಏನು ಮಾಡಿದರೂ ನಮ್ಮಮನೆಯ ಟಿವಿ ನನ್ನಿಷ್ಟದ ಪುರಾತನ ಸೀರಿಯಲ್ಗಳನ್ನು ಬಾರೀಬಾರೀ
ರಿಪೀಟ್ ಮಾಡುವ ಟಿಬೀಯಸ್ ಚಾನಲ್ಲನ್ನು ತೋರಿಸೊಲ್ಲ ಅಂತ ಹಟ ಹಿಡಿದು ಕೂತುಬಿಟ್ಟಿತ್ತು
ಸರಿ ಸಂಜೆ ಮನೆಗೆ ಬಂದ ಅರವಿಂದನಿಗೆ ಟಿವಿಗೆ ಏನೋ ಆಗೋಗಿದೆ ಕಣೋ ಟೀಭೀಯಸ್
ಬರ್ತಾಇಲ್ಲಾ...ಹಾಕ್ಕೊಡೋ...ಅಂತ ಗೋಗರೆದೆ ರಿಮೋಟ್ ತೊಗೊಂಡು ಟ್ರೈ ಮಾಡಿದವನು ಇದೇನಿದು ಅಂತ
ಹುಬ್ಬೇರಿಸುತ್ತಾ ಮನೆಗೆ ಬಂದವರ್ಯಾರಾದ್ರೂ ರಿಮೋಟ್ ಮುಟ್ಟಿದ್ರಾ...ಅಂತ ಕೇಳುವುದಕ್ಕೂನಾನು
ಅಡ್ಡಡ್ಡವಾಗಿ ತಲೆ ಆಡಿಸುವುದಕ್ಕೂ ಸರಿಯಾಗಿ ಕಿಟ್ಟಣ್ಣ ಅವನ ಮೂರೂಮುಕ್ಕಾಲು ಹಲ್ಲು ತೋರಿಸುತ್ತಾ
ಹ್ಹಿ...ಹ್ಹಿ...ಹ್ಹಿ ಅಂತ ನಗುವುದಕ್ಕೂ ಸರಿಯಾಯಿತು ಬೆಳಗ್ಗೆ ಕಿಟ್ಟಣ್ಣ ರಿಮೋಟ್ ಹಿಡಕೊಂಡು ಆಟ
ಆಡ್ತಾಇದ್ದ...ಅಂತ ನಾನು ನೆನಪಿಸಿಕೊಂಡು ಹೇಳುತ್ತಿರುವಾಗಲೇ`ಇವನು ಅಯ್ಯೋ...ಪೋಕರಿ...'ಅಂತ
ಕಿಟ್ಟಣ್ಣನೆಡೆ ನುಗ್ಗಿದ ನಾನು ಮಿಕ ಮಿಕ ಇಬ್ಬರ ಮುಖನೋಡಿದೆ
ಈಗ ಸ್ವಲ್ಪ ಸೀನ್ ರೀವೈಂಡ್
ಬೆಳಗ್ಗೆ ನಾನು ಅಡುಗೆ ಮನೆಯಲ್ಲಿ ಬಿಸಿ ಯಾಗಿರುವಾಗ ರಿಮೋಟ್ ನೊಂದಿಗೆ ಆಡುತ್ತಾ ಆಡುತ್ತಾ ಕಿಟ್ಟಣ್ಣ `ಆನ್
ಡಿಮಾಂಡ್'ಎಂಬ ಪೇಯ್ಡ್ ಚಾನಲ್ ನಲ್ಲಿ ಯಾವುದೋ ಇಂಗ್ಲಿಷ್ ಮೂವಿ ಆರ್ಡರ್ ಮಾಡಿ ಬಿಟ್ಟಿದ್ದಾನೆ (ಮತ್ತು
ಮೂವಿ ಪ್ರಸಾರವಾಗುತ್ತಿರುವಾಗ ಚಾನಲ್ ಬದಲಿಸಿ ಬಿಟ್ಟಿದ್ದಾನೆ)ಅದು ಸಾಲದೆಂದು ಮತ್ತೆ ಮೂರು
ಸಿನಿಮಾಗಳನ್ನು ಕ್ಯೂನಲ್ಲಿ ಬೇರೆ ನಿಲ್ಲಿಸಿಕೊಂಡಿದ್ದಾನೆ!!!ನಂತರ ಸಿಕ್ಕಪಟ್ಟೆ ಬಟನ್ ಗಳನ್ನು ಒತ್ತಿಬಿಟ್ಟಿದ್ದರಿಂದ ಟಿವಿ
ಮುನಿಸಿಕೊಂಡು ಬಿಟ್ಟಿದೆ
*************
ಈಗ ಐದು ಡಾಲರ್ ನ ಬಿಲ್ಲು ಬಂದಿದೆ ಐದೇ ಡಾಲರ್ ಅಲ್ಲ ಸದ್ಯ ಅಂತ ಖುಷಿ ಪಡಬೇಕಾ ಅಥ್ವಾ ಇವ್ನು
ಇನ್ನೇನೇನು ಮಾಡ್ತಾನೋ ಅಂತ ಟೆನ್ಶನ್ ಮಾಡೋ ಬೇಕಾ ಅಂತ ಗೊತ್ತಾಗುತ್ತಿಲ್ಲ ನನಗೆ...
3 comments:
ಸಧ್ಯಕ್ಕೆ ಅಷ್ಟೇ ತಾನೇ ಅಂತ ಖುಷಿಪಡಿ; ರಿಮೋಟನ್ನು ಎತ್ತಿಡಿ.
ಫೋನ್ ಕೂಡಾ ಕೈಗೆ ಸಿಗದಂತೆ ಎತ್ತಿಡಿ, ಇಲ್ಲಾಂದ್ರೆ ಒಂದಿನ ಪೊಲೀಸರು ಬಾಗಿಲು ತಟ್ಟಿಯಾರು!! (911 ಒತ್ತೋದು ಕಷ್ಟ ಅಲ್ಲ ಅವನಿಗೆ.)
ಬರಹದ ಲಘುಶೈಲಿ ತುಂಬಾ ಖುಷಿ ಕೊಟ್ಟಿತು, ಕಣೇ.
ಭೇಷ್ ಕಿಟ್ಟಣ್ಣ! ನಿನ್ನ ಸಿನಿಮಾ ಪ್ರೀತಿ ಮೆಚ್ಚಿದೆ! ಹೀಗೇ ಮುಂದುವರೆಸು.ಟಿಬೀಯಸ್ ಗೀಬಿಯಸ್ ಚಾನೆಲ್ ಎಲ್ಲಾ ಕಿತ್ತಾಕಿಸಿ, ಉದಯ ಟಿವಿ ಆರ್ಡರ್ ಮಾಡು. :)
Very Cute.
The way you have explained the event is really wonderful.
kiTTaNNa seems to throw all his tantrums now, waiting to hear more :-)!!
Post a Comment