Tuesday, June 10, 2008

ಪೋಗಾದಿರೆಲೋ... ಕಿಟ್ಟಾ..

ಪೋಗಾದಿರೆಲೋ ಕಿಟ್ಟಾ...
ಬಾಗಿಲಿಂದಾಚೆ...
ಡೈಪರ್ ಕಿತ್ತೆಸೆದೂ
ಭಾಗವತ ಅಂಕಲ್ ನೋಡಿ ಬಿದ್ಬಿದ್ದು ನಗುವನೋ...

ಸುಪ್ತದೀಪ್ತಿ ಆಂಟಿ ತಮ್ಮ ಕ್ಯಾಮರಾ ದಲ್ಲಿ
ನಿನ್ ಫೋಟೋ ಹಿಡಿಯಲು ಅರಸುವರೋ
ದೊರಕದ ಪೋಸೊಂದು ದೊರಕಿತೂ ತಮಗೆಂದು
ಬೇಗದಿಂದಲೀ ನಿನ್ನಾ ಫೋಟೋ ಹೊಡೆದು ಬಿಡೂವರೋ ...


ಇತ್ತ ಆಂಟಿಯರೆಲ್ಲಾ ಕಿಟ್ಟ ಒಳ್ಳೆ ಹುಡುಗನೆಂದು
ಎಲ್ಲರಿಗು ಹೇಳಿಕೊಂಡು ತಿರುಗುವರೋ
ನೀ ಹೀಗೆ ಡೈಪರ್ ಕಿತ್ತಾಕಿ ಓಡಿದರೆ
ಕಿಟ್ಟ ಪುಂಡ ಪೋಕರಿಯೆಂದು ದೂರ ಅಟ್ಟಿಬಿಡುವರೋ


ಅಗಣಿಪ "ಗುಣ"ನಿನ್ನಾ ಜಗದ ಆಂಟಿ ಅಂಕಲ್ ಗಳೆಲ್ಲಾ
ನಂದ ಗೋಕುಲದಲಿ ನೋಡುವರೋ ಅಮ್ಮುರಾಜನೇ...
ಸೃಷ್ಟೀಶಾ ಪುರಂದರ ವಿಠಲಾ ರಾಯನೇ
ನೀನೇ ನಮ್ ಕಿಟ್ಟನಿಗೇ ಒಳ್ಳೆಬುದ್ದಿ ಕೊಡಪ್ಪಾ ತಂದೇ...


3 comments:

kalsakri said...

ಚೆನ್ನಾಗಿದೆ

Jagali bhaagavata said...

ಭಾಗವತ ಅಂಕಲ್ ನೋಡಿ ಬಿದ್ಬಿದ್ದು ನಗುವನೋ...

ಏನಿದು? ನನ್ನನ್ನ ಜಗಲಿಯಿಂದ ಬೀಳಿಸುವ ಹವಣಿಕೆಯಲ್ಲಿದ್ದೀರಾ? :-)

ಕವನ ಬೊಂಬಾಟಾಗಿದೆ. ಸೂಪರ್ ಡೈಪರ್...ಸಾರಿ, ಸೂಪರೆ ಡ್ಯೂಪರ್ :-)

nishu mane said...

ಪೋಗುತಾಲಿರೊ ಕಿಟ್ಟ,
ನಿನ್ನಮ್ಮ ಎಷ್ಟು ತಡೆದರೂ....
ಡೈಪರ್ರು ಕಿತ್ತೆಸೆದು
ಸ್ಮೈಲ್ ಒಂದು ತೆಗೆದೆಸೆದು
ಪೋಗಾತಾಲಿರೋ ಪುಟ್ಟ......

ನಂದಗೋಕುಲದೊಳಗೆ
ಬಂದ ನಮಗೆಲ್ಲರಿಗು
ಚಂದದಿಂದಲಿ ಒಂದು
ಹೂನಗೆಯನೆಸೆಯುತ್ತ
ನಲಿಯುತಾಲಿರೋ ಕಿಟ್ಟ.......

ಅಂಕಲ್, ಆಂಟಿಗಳೆಲ್ಲ
ಬಿಂಕದಲಿ ಕುಳಿತಿರಲು
ಅಂಕೆಯಿಲ್ಲದೆ ಅವರು
ಬಾಯ್ಬಿಟ್ಟು ನಗುವಂತೆ
ಮಾಡೂತಲಿರೋ ಕಿಟ್ಟ......

-ಮೀರ