ಪೋಗುತಾಲಿರೊ ಕಿಟ್ಟ,
ನಿನ್ನಮ್ಮ ಎಷ್ಟು ತಡೆದರೂ....
ಡೈಪರ್ರು ಕಿತ್ತೆಸೆದು
ಸ್ಮೈಲ್ ಒಂದು ತೆಗೆದೆಸೆದು
ಪೋಗಾತಾಲಿರೋ ಪುಟ್ಟ......
ನಿನ್ನಮ್ಮ ಎಷ್ಟು ತಡೆದರೂ....
ಡೈಪರ್ರು ಕಿತ್ತೆಸೆದು
ಸ್ಮೈಲ್ ಒಂದು ತೆಗೆದೆಸೆದು
ಪೋಗಾತಾಲಿರೋ ಪುಟ್ಟ......
ನಂದಗೋಕುಲದೊಳಗೆ ಬಂದ
ನಮಗೆಲ್ಲರಿಗು ಚಂದದಿಂದಲಿ
ಒಂದುಹೂನಗೆಯನೆಸೆಯುತ್ತ
ನಲಿಯುತಾಲಿರೋ ಕಿಟ್ಟ.......
ನಮಗೆಲ್ಲರಿಗು ಚಂದದಿಂದಲಿ
ಒಂದುಹೂನಗೆಯನೆಸೆಯುತ್ತ
ನಲಿಯುತಾಲಿರೋ ಕಿಟ್ಟ.......
ಅಂಕಲ್, ಆಂಟಿಗಳೆಲ್ಲ
ಬಿಂಕದಲಿ ಕುಳಿತಿರಲು
ಅಂಕೆಯಿಲ್ಲದೆ ಅವರು
ಬಾಯ್ಬಿಟ್ಟು ನಗುವಂತೆ
ಮಾಡೂತಲಿರೋ ಕಿಟ್ಟ......
ಬಿಂಕದಲಿ ಕುಳಿತಿರಲು
ಅಂಕೆಯಿಲ್ಲದೆ ಅವರು
ಬಾಯ್ಬಿಟ್ಟು ನಗುವಂತೆ
ಮಾಡೂತಲಿರೋ ಕಿಟ್ಟ......
1 comment:
ನೈಜವಾಗಿದೆ
Post a Comment