Saturday, September 20, 2008

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ...


ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

ತೊಟ್ಟಲಿನೊಳಗೆ ಪುಟ್ಟ ಕಂದ ಮಲಗಿಹನು
ಸೃಷ್ಟಿಗೊಡೆಯನ ಮಡದಿಯ,ಪಾರ್ವತಿ ದೇವಿ
ದೃಷ್ಟಿ ತಗುಲೀತು ತೆರೆ ಹಾಕ...

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

ಅಳಬೇಡ ನನ ಕಂದ ನಿನಗೆ ಜೋಗುಳ ಹಾಡಿ
ಹುಣ್ಣಿಮೆ ಹಾಲು ತಂದು ಉಣಿಸೇನ,ಮಾವನ ಮಗಳ
ಕರ ತಂದು ಧಾರೆ ಎರೆದೇನ....

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ


ನನ್ನಯ್ಯನಂತೋರು ಹನ್ನೆರಡು ಮಕ್ಕಳು
ಹೊನ್ನೆಯ ಮರದ ನೆರಳಾಗ ಆಡುವಾಗ
ಸನ್ಯಾಸಿ ಜಪವಾ ಮರೆತಾನೂ...

ಲಾಲೀ ಮುದ್ದು ಲಾಲೀ ,ಚಿನ್ನ ಲಾಲೀ

3 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಾಲಾ...
ಮುದ್ದು ಅಮ್ಮುಗೊಂದು ಮುತ್ತು.
ಹಾಗೆಯೇ ಚಂದದ ಲಾಲಿ ಹಾಡೊಂದನ್ನು ಕೊಟ್ಟಿದ್ದಕ್ಕೆ ಧನ್ಯವಾದ.

Roopa said...
This comment has been removed by the author.
Roopa said...

ಕಪ್ಪು ಬಿಳುಪಿನಲ್ಲಿ ಅಮ್ಮುವಿನ ಫೋಟೋ ತುಂಬಾ ಚೆನ್ನಾಗಿದೆ. ಲಾಲಿ ಹಾಡು ಚೆನ್ನಾಗಿದೆ:)

ರೂpaश्री