Tuesday, September 30, 2008

ಮುದ್ದುಕನಸೇ...


ಮುದ್ದು ಕನಸೇ ಮುದ್ದು ಕನಸೇ
ಇಳೆಗಿಳಿದು ಬಾ...
ಚಂದ್ರನೂರಿಂದ ತೇಲಿ ಬಂದು
ಪುಟ್ಟಂಗೆ ಮುತ್ತೊಂದ ತಾ...

ತಾರೆಗಳ ಕಾಂತಿಯಲಿ
ಮಿನುಗಿ ಮುತ್ತಾಗಿ ಬಾ
ಮಲಗಿರುವ ಮಗುವ
ಮುದ್ದು ನಗುವಾಗಿ ಬಾ

ಇಬ್ಬನಿಯ ತಂಪಲ್ಲಿ
ನಗುವ ಹೂವಾಗಿ ಬಾ
ಅರೆತೆರೆದ ಚೆಂದುಟಿಯ
ಮೇಲೆ ನಲಿದಾಡು ಬಾ

ಬೆಳಂದಿಂಗಳ ರಾತ್ರಿಯಲಿ
ಮಲ್ಲಿಗೆ ಅರಳಾಗಿ ಬಾ
ಘಮಘಮಿಸಿ ಹೊಳೆದು
ಪುಟ್ಟಗೆ ಸವಿ ನಿದ್ದೆಯ ತಾ
-ಅಮ್ಮುವಿನಮ್ಮ

1 comment:

Roopa said...

ಮುದ್ದು ಅಮ್ಮುವಿಗೆ ನೀವ್ ಬರೆದಿರೋ ಈ ಹಾಡು ಬಹಳ ಚೆನ್ನಾಗಿದೆ:) ಅಮ್ಮು ಈಸ್ ವೆರಿ ಲಕ್ಕಿ!!