ಕಪ್ಪು ಕಪ್ಪು
ಸಾದು ಕಪ್ಪು
ನನ್ನ ಚಿನ್ನಿ
ಕೂದ್ಲು ಕಪ್ಪು
ಹಣೆ ಹಣೆ
ಬಂಗಾರ್ ದ್ ಮಣೆ
ಚುಕ್ಕಿ ಇಟ್ಟ
ಪುಟ್ಟ ಹಣೆ
ಹಣ್ಣು ಹಣ್ಣು
ನೇರ್ಳೆ ಹಣ್ಣು
ನನ್ನ ಪುಟ್ಟ
ನಿನ್ನ ಕಣ್ನು
ಚೆಂದ ಚೆಂದ
ಏನು ಚೆಂದ?
ನಮ್ಮ ಗಿಳಿಯ ಮೂಗೇ ಚೆಂದ
ಮುದ್ದೆ ಮುದ್ದೆ
ಬೆಣ್ಣೆ ಮುದ್ದೆ
ನಿನ್ನ ಕೆನ್ನೆ
ಜೇನು ದೊನ್ನೆ
ಕೆಂಪು ಕೆಂಪು
ಗುಲಾಬಿ ಕೆಂಪು
ನನ್ನ ಮುದ್ದು
ತುಟಿ ಕೆಂಪು
ಗಲ್ಲ ಗಲ್ಲ
ಗುಳಿ ಗುಲ್ಲ
ಅಮ್ಮನ್ ಬೀಳ್ಸೋ
ರಸಗುಲ್ಲ
-ಮಾಲಾ ರಾವ್
(ಸೂಚನೆ-ಹಾಡು ಹೇಳುತ್ತಾ ಮಗುವಿನ ಮುಖದ ಆಯಾಯಾ ಭಾಗವನ್ನು ಮೃದುವಾಗಿ ಮುಟ್ಟಿ ಸವರಿ ಹಾಡಿದರೆ ಮಗು ಒಳ್ಳೇ ಪ್ರತಿಕ್ರಿಯೆ ತೋರುವುದಲ್ಲದೇ ಆ ಭಾಗಗಳ ಪರಿಚಯವನ್ನೂ ಮಾಡಿಕೊಟ್ಟಂತಾಗುತ್ತದೆ)
2 comments:
ಹಾಡು ತುಂಬಾ ಮುದ್ದಾಗಿದೆ. ಅಮ್ಮು ಅಂತೂ ಹೇಳೋದೇ ಬೇಡ....ಯಾವಾಗ್ಲೂ ಮುದ್ದು.
-ಮೀರ
ಲೋ ಅಮ್ಮು, ಏನೋ ಅದು ನಿನ್ ಕೈನಲ್ಲಿ? ಚೆನ್ನಾಗಿದೆ ಕಣೋ. ಪ್ಲೀಸ್ ನಂಗೂ ಕೊಡೊ :-)
Post a Comment