ಅಮ್ಮು ಪುಟಾಣಿ ಮಗುವಾಗಿದ್ದಾಗಿನಿಂದ "ದೂರೀ ದೂರೀ"ಹಾಡನ್ನು ಹುಡುಕುತ್ತಿದ್ದೆ ಕೊನೆಗೆ ಅದು ಸಿಗದೆ ನಾನೇ ನನಗೆ ತೋಚಿದಂತೆ ಹಾಡು ಕಟ್ಟಿಕೊಂಡು ಅಮ್ಮಣ್ಣನಿಗೆ ಹಾಡುತ್ತಿದ್ದೆ ಈತನಕ ನನಗೆ ಸಿಕ್ಕಿರದ "ದೂರೀ ದೂರೀ" ಮೊನ್ನೆ
ಲಾಸ್ ಏಂಜಲೀಸ್ ಗೆ ಹೋದಾಗ ನನ್ನ ಕಸಿನ್ ಬಳಿ ಸಿಕ್ಕಿತು!
ಮಗಳಿಗೆಂದು ತಮ್ಮ ಅಮ್ಮ ವರ್ಷಗಳ ಹಿಂದೆ ಬರೆದುಕೊಟ್ಟ ಈ ಹಾಡಲ್ಲದೆ ಇನ್ನೂ ಹಲವು ಮಕ್ಕಳ ಹಾಡುಗಳನ್ನು ನನಗೆ ಕೊಟ್ಟ ರವಿ ಅಣ್ಣ ಮತ್ತು ಅರುಣ ಅತ್ತಿಗೆಗೂ ಹಾಡುಗಳನ್ನು ಬರೆದಿಟ್ಟಿದ್ದ ಸರೋಜ ಅತ್ತೆಗೂ ಥ್ಯಾಂಕ್ಸ್....
ದೂರೀ ದೂರೀ ದೂಕಲಮ್ಮ
ನಾರಿ ಕೇಳೇ ನಂದಗೋಪಿ
ದೂರೀ ದೂರೀ ದೂಕಲಮ್ಮ
ಕಲ್ಲ ಮೇಲೆ ಬಿದ್ದು ಜಾರಿ
ಹಲ್ಲು ಮುರಿದು ಕೊಂಡೆನಮ್ಮ
ದೂರೀ ದೂರೀ ದುಂಡ ಪಾಪ
ನಾರಿ ಕೇಳೇ ನಂದಗೋಪಿ
ಅತ್ತೆ ಮನೆಗೆ ಹೋದೆನಮ್ಮ
ಕಿತ್ತಳೆ ಹಣ್ಣು ತಿಂದೆನಮ್ಮ
ಮಾವನ ಮನೆಗೆ ಹೋದೆನಮ್ಮ
ಮಾವಿನ ಹಣ್ಣು ಹಣ್ಣು ತಿಂದೆನಮ್ಮ
ದೂರೀ ದೂರೀ ದೂಕಲಮ್ಮ
1 comment:
ನಾನೂ ಬಹಳ ಹುಡುಕಿದ್ದೆ ಈ ಹಾಡಿಗೆ.. ಅಮ್ಮನಿಗೆ ೪-೫ಸಾಲು ಮಾತ್ರ ಗೊತ್ತಿತ್ತು.. ಹಾಡು ಬರೆದು ಕೊಟ್ಟ ನಿಮ್ಮ ತಾಯಿಯವರಿಗೆ, ನಿಮ್ಮ ಅತ್ತಿಗೆ ಮತ್ತು ಇಲ್ಲಿ ನಮ್ಮೆಲ್ಲರೊಂದಿಗೆ ಹಂಚಿಕೊಂಡ ನಿಮಗೂ ವಂದನೆಗಳು:)
Post a Comment