ಅವನ ಎರಡೂ ಕಡೆ ಅಜ್ಜಿ ತಾತ ಫೋನ್ ಮಾಡಿ ಆಶೀರ್ವಾದ ಹೇಳಿದರೆ ಕಿಟ್ಟನ ಬೊಂಬಾಯಿ ಅಜ್ಜಿ ಒಂದು ಹೆಜ್ಜೆ ಮುಂದೆ ಹೋಗಿ ಕಾಲೋನಿಯ ಮಕ್ಕಳಿಗೆಲ್ಲಾ ಚಾಕಲೇಟು ಹಂಚಿದರು
ಅಮ್ಮುವಿನ ಪ್ರೀತಿಯ ಜ್ಯೋತಿ ಆಂಟಿ (ಕಳೆದ ವರುಷದಂತೆ ಈ ವರ್ಷವೂ) ಬಲೂನು ತೊಗೊಂಡು ಮನೆಗೇ ಬಂದು ಬಿಟ್ಟರು ಜೊತೆಗೊಂದು ತಾವೇ ಹೆಣೆದ ಚಂದದ ಸ್ವೆಟರ್ ! ತ್ರಿವೇಣಿ ಆಂಟಿ ಶಿಕಾಗೋ ದಿಂದ ಕಾಲ್ ಮಾಡಿದ್ದರೆ, ನಿಶುಅಣ್ಣ ,ಮೀರಾ ಆಂಟಿ ನ್ಯೂಜೆರ್ಸಿ ಯಿಂದ ಶುಭಾಶಯ ಹೇಳಿದರು ಅಮ್ಮು ಸುಮಾರು ಎಲ್ಲರೊಂದಿಗೂ ತನ್ನದೇ ಭಾಷೆಯಲ್ಲಿ ಮಾತಾಡಿದ 'ಹಾವ್...ಹಾಪೀ...'ಅಂತ ಹೇಳುತ್ತಿದ್ದ
ಪುಟ್ಟಿಪ್ರಪಂಚ ಬ್ಲಾಗಿನ ಸಾಹಿತ್ಯಪುಟ್ಟಿ ಅಮ್ಮನಿಗೆ ಹೇಳಿ ತನ್ನ ಬ್ಲಾಗ್ ನಲ್ಲಿ ಅಮ್ಮುವಿಗಂದು ಸ್ಪೆಷಲ್ ಪೋಸ್ಟ್
ಹಾಕಿಸಿಬಿಟ್ಟಳು ಆರು ತಿಂಗಳಿಂದ ಈ ಕಡೆ ಸುಳಿಯದ ಭಾಗವತ ಅಂಕಲ್ ಅಮ್ಮುವಿನ ಬರ್ತ್ ಡೇ ಮರೆಯದೇ ಶುಭ ಹಾರೈಸಿದರು
ಮನಿಷಾ ಅಕ್ಕ ಪುಷ್ಪ ಆಂಟಿ ಬೆಂಗಳೂರಿಂದ ವಿಶ್ ಮಾಡಿದರು
ದೇವಿ ಆಂಟಿ ಕೆನಡಾದ ವ್ಯಾಂಕೋವರ್ ನಿಂದ ಕಾಲ್ ಮಾಡಿ ಅಮ್ಮುವಿಗೆ ಹ್ಯಾಪಿ ಬರ್ತ್ ಡೇ ಹೇಳಿದರು
ಹಾಗೇ ಶ್ರೀನಿಧಿ ಅಂಕಲ್ ನೆನ್ನೆ ಶುಭ ಹಾರೈಸಿದರು ಅಂದ ಹಾಗೆ ಅಮ್ಮುವಿನ ಅಣ್ಣನ ಹೆಸರೂ ಶ್ರೀನಿಧಿ ಅಂತಾನೇ... ಸದ್ಯಕ್ಕೆ ಅಜ್ಜಿ ಮನೆಯಲ್ಲಿರುವ ಅವನೂ ಅಮ್ಮುವಿಗೆ ವಿಶ್ ಮಾಡಿದ
ಭಾರ್ಗವಿ ಆಂಟಿಗೆ ಇಷ್ಟೆಲ್ಲಾ ಪ್ರೀತಿಯ ಸಡಗರದಲ್ಲಿ ಅಮ್ಮುವಿಗೆಲ್ಲಿ ದೃಷ್ಟಿ ತಾಗಿ ಬಿಡುತ್ತೋ ಅಂತ ಆತಂಕ ಅಮ್ಮನ ಹತ್ತಿರ ದೃಷ್ಟಿ ತೆಗೆಸಿಕೊಳ್ಳಪ್ಪಾ ಅಮ್ಮು ಅಂತ ಕಾಳಜಿ ಮಾಡಿದ್ದಾರೆ
ಇಷ್ಟೋಂದು ಅಭಿಮಾನದ ಮಹಾಪೂರಕ್ಕೆ ಏನು ಹೇಳುವುದೂ...?
ಅಮ್ಮುವಿನ ಭಾಷೆಯಲ್ಲೇ ಹೇಳುವುದಾದರೆ "ಷೇ ಷೇ..."
ಟಿಪ್ಪಣಿ-
ಟಿವಿಯಲ್ಲಿ ಬರುವ 'ನೀ ಹಾವ್ ಕೈಲಾನ್' ಎಂಬ ಬೈ -ಲಿಂಗ್ವಲ್ ಧಾರಾವಾಹಿ ಅಮ್ಮುವಿಗೆ ತುಂಬಾ ಇಷ್ಟ
ಅದರಲ್ಲಿ ಚೈನೀಸ್ ಪದಗಳನ್ನು ಕಲಿಸುತ್ತಾರೆ ಅಮ್ಮು ಥ್ಯಾಂಕ್ಸು ಹೇಳುವುದು ಈಗ ಷೇ ಷೇ ಅಂತಾನೇ
(ಕೈಲಾನ್ ಎಂಬ ಪುಟ್ಟ "ಹುಡುಗಿಯ" ಪ್ರಭಾವ!)
1 comment:
ಅಮ್ಮು ತನ್ನ ಹುಟ್ಟಿದ ದಿನವನ್ನು ಖುಷಿಖುಷಿಯಾಗಿ ಕಳೆದಿದ್ದು ತಿಳಿದು ತುಂಬಾ ಸಂತೋಷವಾಯಿತು. ಇದೇ ಆನಂದ ನಿಮ್ಮ ಸಂಸಾರದಲ್ಲಿ ಸದಾ ಇರಲೆಂದು ಹಾರೈಸುವೆ. ಅಮ್ಮುವಿನ ಉದ್ದ ಬೆಳೆದಿರುವ ಕೂದಲು ನೋಡಿದಾಗ ಬಂದ ಪ್ರಶ್ನೆ - "ಚೌಲ ಯಾವಾಗ?" :)
ಕುನಾಲ್ ಗಾಂಜಾವಾಲಾ ಜೊತೆ ನಿಮ್ಮೆಲ್ಲರ ಭೇಟಿಯಾಗಿದ್ದು ಓದಿದೆ. ಸಕತ್ ಲಕ್ ನಿಮ್ಮದು!! ನಾನೂ ಇರಬೇಕಿತ್ತು ನಿಮ್ಮ ಜೊತೆ....
Post a Comment