Sunday, August 12, 2007

ತೊಟ್ಟಿಲ ಹಾಡು

ಹಾಡು ಕೇಳಿ
ಕವನ-ಕೆ ಎಸ್ ನ
ಗಾಯಕಿ-ಸುಲೋಚನ


ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೇ
ಜೋಜೋಜೋಜೋ....
ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರು
ನಿದ್ದೆ ಬರುವಳು ಕದ್ದು ಮಲಗು ಮಗುವೇ
ಜೋಜೋಜೋಜೋ....



ಮಲಗು ಚೆಲ್ವಿನ ಸಿರಿಯೇ
ಮಲಗು ಒಲ್ಮೆಯ ಸಿರಿಯೇ
ಮಲಗು ತೊಟ್ಟಿಲ ಸಿರಿಯೇ
ದೇವರಂತೆ
ಮಲಗು ಮುದ್ದಿನ ಗಿಣಿಯೆ
ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಹೋಗುವೆಯಂತೆ


ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು
ಹೂವ ಮುಡಿಸುವರಂತೆ
ಹಾಲ ಕುಡಿಸುವರಂತೆ
ವೀಣೆ ನುಡಿಸುವರಂತೆ ಸುತ್ತ ನೆರೆದು


ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ

No comments: