ನಾಯಿಯ ಓನರ್ ಗಳ ಅನುಮತಿ ಕೇಳುವುದು ಅದು ಸೌಮ್ಯವಾದ kid friendly ನಾಯಿಯೇ ಅಂತ ಪರಕಿಸುವುದು ಅಪ್ಪ ಅಮ್ಮನ ತಲೆನೋವು ಅಂತ ಕಿಟ್ಟ ಬಲವಾಗಿ ನಂಬಿದ್ದಾನೆ ಹಾಗೆಲ್ಲಾ ಓಡಿ ಹೋಗಿ ನಾಯಿ ಮುಟ್ಟ ಬಾರದು ಅಂತ ಸಾವಿರ ಬಾರಿ ಸಮಜಾಯಿಸಿ ಹಲವು ಬಾರಿ ಒದೆ ಕೊಟ್ಟಿದ್ದರೂ...ಮುಂದಿನ ಬಾರಿ ನಾಯಿ ಕಂಡಾಕ್ಷಣ ಅದೆಲ್ಲಾ ಅವನಿಗೆ ಮರೆತೇ ಹೋಗುತ್ತದೆ
ಕಿಟ್ಟ ಈಗ ನಾಯಿ ಎಲ್ಲಿ ಕಂಡರೂ 'ಬಾಬೌ'ಅಂತ ಹೇಳುತ್ತಾನೆ ಅವನ ಚಿತ್ರದ ಪುಸ್ತಕದಲ್ಲಿ ಎಲ್ಲಿ ಬಾಬೌ ಕಂಡರೂ ಬೆಟ್ಟು ಇಟ್ಟು ತೋರಿಸಿ ಜೋರಾಗಿ ಬಾಬೌ... ಅಂತ ಕೂಗುತ್ತಾನೆ ಈಗೆರಡು ವಾರದ ಹಿಂದೆ ಓಕ್ ಮೆಡೋ ಪಾರ್ಕ್ ನಲ್ಲಿ ಕಿಟ್ಟ ಹಲವಾರು ನಾಯಿ ಗಳ ಜೊತೆ ಆಟ ಆಡಿದ ಕೆಲವು ಚಿತ್ರಗಳು ಇಲ್ಲಿವೆ ಇವಾವೂ ನಮ್ಮ ಪರಿಚಿತರ ನಾಯಿಗಳಲ್ಲ. ಕಿಟ್ಟನಿಗೆ ಭಯವಾಗುವುದಿಲ್ಲವೇ ಅಂತ ಸ್ನೇಹಿತರು ಕೇಳಿದಾಗ, ಹಾಗೆಲ್ಲಾ ಆಡಲು ಬಿಡಬೇಡಿ ಅಂತ ಎಚ್ಚರಿಕೆ ಕೊಟ್ಟಾಗ ಏನು ಉತ್ತರಿಸುವುದೆಂದು ತಲೆ ಕೆರೆದು ಕೊಳ್ಳುತ್ತೇನೆ ನಾನು...
1 comment:
ವಾಹ್ ಭಾರಿ ಧೈರ್ಯ ಅಮ್ಮುವಿಗೆ!! ಫೋಟೋಗಳು ಚೆನ್ನಾಗಿವೆ:) ಪುಟ್ಟಿಗೂ ನಾಯಿ ಕಂಡ್ರೆ ಇಷ್ಟ ಖುಶಿ, ಸದ್ಯ ಇನ್ನು ಹೋಗಿ ಮುಟ್ಟುವಷ್ಟು ಧೈರ್ಯ ಇಲ್ಲ...
Post a Comment