
ಇವತ್ತಿಗೆ ಅಮ್ಮುವಿಗೆ ಮೂರು ತಿಂಗಳು ತುಂಬಿತು.ನಂದಗೋಕುಲಕ್ಕೆ ಒಂದು ತಿಂಗಳು...ನನ್ನ ಈ ಎರಡು ಕೂಸುಗಳಿಗೂ ಅಮ್ಮನ ಎದೆ ತುಂಬಿದ ಹಾರೈಕೆಗಳು...
ಒಂದು ತಿಂಗಳಲ್ಲಿ ನಂದಗೋಕುಲ ಹೇಗೆ ಬೆಳೆದಿದೆ..?ಅಂತ ಕೇಳಿಕೊಂಡರೆ ತೃಪ್ತಿಯೆನಿಸುವುದಿಲ್ಲ ಆದರೆ ಆರೋಗ್ಯ ಅಷ್ಟೇನು ಚೆನ್ನಾಗಿಲ್ಲದ ಮಗುವಿನ ಅಮ್ಮನಿಗಿರುವ ಮಿತಿಯನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳುತ್ತೀರೆಂದು ಆಶಿಸುವೆ...
ನಂದಗೋಕುಲದಲ್ಲಿ ಹೊಸ ಹೊಸ ಹಾಡುಗಳನ್ನೂ,ಹಳೆಯ ಅಪರೂಪದ ಗೀತೆಗಳನ್ನೂ ತರುವ ಪ್ರಯತ್ನ ಮಾಡುತ್ತಿದ್ದೇನೆ ಸದ್ಯದಲ್ಲೇ ಅವೆಲ್ಲಾ ನಿಮಗೆ ಕಾಣ ಸಿಗುತ್ತವೆ
ಮಕ್ಕಳಿಗಾಗಿ ಎಂದು ಕನ್ನಡದಲ್ಲಿ ಇರುವ ತಾಣಗಳು ಬಲು ಕಮ್ಮಿ.ಗೆಳತಿ ಮೀರಾಳ
`ನಿಶು ಮನೆ' ಬಿಟ್ಟರೆ ಇನ್ಯಾವುದೂ ನನ್ನ ಕಣ್ಣಿಗೆ ಬಿದ್ದಿಲ್ಲ.ಹಾಗಾಗಿ ಮಕ್ಕಳಿಗಾಗಿರುವ ಕನ್ನಡ ತಾಣವೊಂದರಸ್ವರೂಪ ಹೇಗಿರ ಬೇಕು ಎಂಬುದರಿಂದ ಹಿಡಿದು ಪ್ರತಿ ಅಂಶವೂ ಇಲ್ಲಿ ಸವಾಲೇ...ಸಮಯ ಮತ್ತು ಸಂಪನ್ಮೂಲ ಎರಡೂ ಇಲ್ಲದ ನನ್ನಂತವರಿಗಂತೂ ಇದು ಬಲು ದೊಡ್ಡ ಸವಾಲು!
ಆದರೆ ಕನ್ನಡದ ಕಂದರ ಮೇಲಿನ ಮಮತೆ,ನಿಮ್ಮೆಲ್ಲರ ಉತ್ತೇಜನ ಈ ಎಲ್ಲಾ ಸವಾಲುಗಳನ್ನು ಉತ್ಸಾಹದಿಂದ ಎದುರಿಸಲು ನನಗಿರುವ ಸ್ಪೂರ್ತಿ...
ಆದರೆ ಕನ್ನಡದ ಕಂದರ ಮೇಲಿನ ಮಮತೆ,ನಿಮ್ಮೆಲ್ಲರ ಉತ್ತೇಜನ ಈ ಎಲ್ಲಾ ಸವಾಲುಗಳನ್ನು ಉತ್ಸಾಹದಿಂದ ಎದುರಿಸಲು ನನಗಿರುವ ಸ್ಪೂರ್ತಿ...
ಇವತ್ತಿನ ವಿಶೇಷ ಅರವಿಂದ ತೆಗೆದ ಒಂದು ಅಪರೂಪದ ಚಿತ್ರ ನಾನು ಬರೆದ ಪದ್ಯದೊಂದಿಗೆ...
ಪಿಳಿ ಪಿಳಿ ಕಣ್ಣು ನೇರಳೆ ಹಣ್ಣು
ಗುಲಾಬಿ ಕೆನ್ನೆ ಜೇನಿನ ದೊನ್ನೆ
ಕುಲು ಕುಲು ನಗೆ ಸಿಹಿ ಸಿಹಿ ಸಜ್ಜಿಗೆ
ಪುಟ್ಟ ಪುಟ್ಟ ಹೆಜ್ಜೆ ಗಿಲಿಲ್ಗಿಲಿ ಗೆಜ್ಜೆ
ಪುಟಾಣಿ ಹೊಟ್ಟೆ ಕನ್ನಂಬಾಡಿ ಕಟ್ಟೆ
ಅಮ್ಮನ ಮುದ್ದೇ...ಮೈಯೆಲ್ಲಾ ಒದ್ದೆ!
ಪಿಳಿ ಪಿಳಿ ಕಣ್ಣು ನೇರಳೆ ಹಣ್ಣು
ಗುಲಾಬಿ ಕೆನ್ನೆ ಜೇನಿನ ದೊನ್ನೆ
ಕುಲು ಕುಲು ನಗೆ ಸಿಹಿ ಸಿಹಿ ಸಜ್ಜಿಗೆ
ಪುಟ್ಟ ಪುಟ್ಟ ಹೆಜ್ಜೆ ಗಿಲಿಲ್ಗಿಲಿ ಗೆಜ್ಜೆ
ಪುಟಾಣಿ ಹೊಟ್ಟೆ ಕನ್ನಂಬಾಡಿ ಕಟ್ಟೆ
ಅಮ್ಮನ ಮುದ್ದೇ...ಮೈಯೆಲ್ಲಾ ಒದ್ದೆ!
2 comments:
ಮಾಲಾ, ನಿಮ್ಮ ಮಕ್ಕಳಿಗೆ ಮೂರು ಮತ್ತು ಒಂದು ತಿಂಗಳು ತುಂಬಿದ್ದಕ್ಕೆ ಹಾರ್ದಿಕ ಅಭಿನಂದನೆಗಳು. ಮೂರು ನೂರಾರಾಗಲಿ. ಜೀವನದಲ್ಲಿ ಉತ್ಸಾಹ ಎಂದೂ ಕಡಿಮೆಯಾಗದಿರಲಿ ಎಂದು ಪ್ರೀತಿಯಿಂದ ಹಾರೈಸುತ್ತಿದ್ದೇನೆ.
wish you all the best...
Post a Comment